ಸಿಂಧನೂರು: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಸಮಾಜದ ಹೋರಾಟಗಾರರಾದ ಸನ್ಮಾನ್ಯ ಶ್ರೀ ಕೆ ಪಿ ನಂಜುಂಡಿ ವಿಶ್ವಕರ್ಮ ಅವರಿಗೆ ರಾಯಚೂರು ಜಿಲ್ಲಾ ಯುವ ಘಟಕದ ವತಿಯಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ತಿಳಿಸಲಾಯಿತು.

 

ಬೆಂಗಳೂರಿನ ಮಲ್ಲೇಶ್ವರಂ ನ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಕೇಂದ್ರ ಕಛೇರಿ ಶ್ರೀ ಲಕ್ಷ್ಮಿ ಗೋಲ್ಡ್ ಪ್ಯಾಲೇಸ್ ನಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ರಾಜ್ಯಾಧ್ಯಕ್ಷರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ 60ನೇ ಹುಟ್ಟುಹಬ್ಬ ಸಂಭ್ರಮಾಚರಣೆ ಹಾಗೂ 3 ನೇ ವಧು- ವರರ ಅನ್ವೇಷಣೆ 2026ರ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಯಚೂರು ಜಿಲ್ಲಾ ಯುವ ಘಟಕ ಪ್ರಧಾನ ಕಾರ್ಯದರ್ಶಿ ಚನ್ನಪ್ಪ ಕೆ ಹೊಸಹಳ್ಳಿ ಅವರು ಹಾಗೂ ರಾಯಚೂರು,ಕೊಪ್ಪಳ ಜಿಲ್ಲಾ ಘಟಕ,ಸಿರಗುಪ್ಪ ತಾಲೂಕ ಘಟಕದ ಸದಸ್ಯರು ಸೇರಿ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರಿಗೆ ಸಿಹಿ ತಿಂಡಿ ತಿನಿಸಿ ಆಯುಷ್ಯ, ಅರೋಗ್ಯ,ಸಕಲ ಸೌಭಾಗ್ಯ ಲಭಿಸಲಿ ಎಂದು ಹಾರೈಸಿದರು.

ಸಮಾಜದ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಿ, ಹೊರಟಾಗಳನ್ನು ಮುಂದುವರೆಸಿ ಸಮಾಜಕ್ಕೆ ಮಾರ್ಗದರ್ಶನ ನೀಡಲೆಂದು ಶುಭಾಶಯಗಳನ್ನು ತಿಳಿಸಲಾಯಿತು. ಈ ಸಂಧರ್ಭದಲ್ಲಿ ಜೈ ವಿಶ್ವಕರ್ಮ ಜೈ ಕೆ ಪಿ ನಂಜುಂಡಿ ವಿಶ್ವಕರ್ಮ ಎಂದು ಘೋಷಣೆಗಳನ್ನು ಕೂಗಿ ಸಂತೋಷ ವ್ಯಕ್ತಪಡಿಸಲಾಯಿತು.

Leave a Reply

Your email address will not be published. Required fields are marked *