ಚಿಟಗುಪ್ಪ ಏ,16:-ಸರ್ಕಾರಿ ಪ್ರಥಮ ದರ್ಜೆ ಕಾಲೇಜು,ಚಿಟಗುಪ್ಪದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (NSS) ಸಮಾರೋಪ ಕಾರ್ಯಕ್ರಮವು ವಿಶೇಷವಾಗಿ ನಡೆಯಿತು. ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಇದು ಪರಿಸರ ಪ್ರೀತಿ ಮತ್ತು ಸೇವಾಭಾವನೆಯ ಪ್ರತೀಕವಾಗಿ ಮೂಡಿಬಂತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಬೀದರ್ ವಿಶ್ವವಿದ್ಯಾಲಯದ NSS ಯೋಜನಾಧಿಕಾರಿ ರವೀಂದ್ರ ಗಬಾಡೆ ಅವರು NSS ಯೋಜನೆಯ ಮಹತ್ವವನ್ನು ವಿವರಿಸಿದರು. ಯುವಕರಲ್ಲಿ ಸಾಮಾಜಿಕ ಹೊಣೆಗಾರಿಕೆ ಬೆಳೆಸುವುದು ಹಾಗೂ ಸೇವಾ ಮನೋಭಾವವನ್ನು ಉತ್ತೇಜಿಸುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ಅನೀಲಕುಮಾರ್ ಸಿಂಧೆ ಅವರು ಮಾತನಾಡಿ,ಯುವಕರು ದೇಶ ನಿರ್ಮಾಣದ ಶಕ್ತಿ. NSS ಮೂಲಕ ಶಿಸ್ತು, ನಾಯಕತ್ವ ಮತ್ತು ಜವಾಬ್ದಾರಿ ಬೆಳೆಸಿಕೊಳ್ಳಬಹುದು” ಎಂದು ಹೇಳಿದರು.ಪತ್ರಕರ್ತ ರಾಜಕುಮಾರ ಆರ್ ಹಡಪದ ಅವರು NSS ಮೂಲಕ ಗ್ರಾಮೀಣಾಭಿವೃದ್ಧಿ, ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ ಮತ್ತು ಸ್ವಚ್ಛತಾ ಅಭಿಯಾನಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಜೀವನಾನುಭವ ಪಡೆಯುತ್ತಾರೆ ಎಂದು ತಿಳಿಸಿದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾಕ್ಟರ್,ಜಯಕುಮಾರ ಸಿಂಧೆ ಅವರು,NSS ವಿದ್ಯಾರ್ಥಿಗಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ವೇದಿಕೆ. ಇಲ್ಲಿ ಕಲಿಯುವುದು ಪುಸ್ತಕಕ್ಕಿಂತ ದೊಡ್ಡದು – ಜೀವನ ಪಾಠ!” ಎಂದು

 

ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಸದಸ್ಯ ವಿಶಾಲ ಬೋರಾಳೆ, ನರಸಪ್ಪ ನರನಾಳ, ಕೀರಣ ಐನಾಪೂರ ಸೇರಿದಂತೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *