ಮಾನ್ವಿ: ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿ. ಮಾನ್ವಿ ಸಹಕಾರ ಸಂಘದ ಕಚೇರಿಯಲ್ಲಿ ಏ.7 ರ ಚುನಾವಣೆ ಪ್ರಕ್ರಿಯೆಯನ್ನು ಸ್ಥಗಿತ ಗೊಳಿಸುವಂತೆ ಉಚ್ಚನ್ಯಾಯಾಲಯ ಕಲಬುರಗಿ ಪೀಠವು ನೀಡಿದ ತಡೆಯಾಜ್ಞೆಯನ್ನು ಚುನಾವಣಾಧಿಕಾರಿಗಳಿಗೆ ಪಿಕಾರ್ಡ ಬ್ಯಾಂಕಿನ ಅಧಿಕಾರಿಗಳ ಮೂಲಕ ತಲುಪಿಸಿ ಅರ್ಜಿದಾರರ ಪರ ವಕೀಲರಾದ ವಿಶ್ವನಾಥ ರಾಯಪ್ಪ ಮಾತನಾಡಿ ಪಿಕಾರ್ಡ ಬ್ಯಾಂಕಿನ 2025-26 ನೇ ಸಾಲಿನ ಆಡಳಿತ ಮಂಡಳಿಯ ನಿರ್ದೇಶಕರ ಮುಂದುವರೆದ ಚುನಾವಣಾವೇಳಾ ಪಟ್ಟಿ ಏ.7 ರ ಚುನಾವಣೆ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿ ಸೇರಿದಂತೆ ವಿವಿಧ ಲೋಪದೋಷಗಳ ವಿರುದ್ದ ಉಚ್ಚನ್ಯಾಯಾಲಯ ಕಲಬುರಗಿ ಪೀಠಕ್ಕೆ ಅರ್ಜಿದಾರರಾದ ಜೆ.ಸುದಾಕರ್ ಹಾಗೂ ಇತರರು ಮನವಿ ಸಲ್ಲಿಸಿರುವುದನ್ನು ಪರಿಗಣಿಸಿ ಉಚ್ಚನ್ಯಾಯಾಲಯ ಕಲಬುರಗಿ ಪೀಠವು ಏ.7 ರ ಚುನಾವಣೆ ಪ್ರಕ್ರಿಯೆಯನ್ನು ಸ್ಥಗಿತ ಗೊಳಿಸುವಂತೆ ತಡೆಯಾಜ್ಞಯನ್ನು ನೀಡಿದು ನ್ಯಾಯಾಲಯದ ಅದೇಶ ಪ್ರತಿಯನ್ನು ಇಂದು ಬ್ಯಾಂಕಿನ ಅಧಿಕಾರಿಗಳಿಗೆ ಸಲ್ಲಿಸಲಾಯಿತು ಎಂದು ತಿಳಿಸಿದರು.
ಮಾನ್ವಿ: ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಿ. ಮಾನ್ವಿ ಸಹಕಾರ ಸಂಘದ ಕಚೇರಿಯ ಅಧಿಕಾರಿಗಳಿಗೆ ವಿಶ್ವನಾಥ ರಾಯಪ್ಪ ವಕೀಲರು ನ್ಯಾಯಾಲಯದ ತಡೆಯಾಜ್ಞೆ ಪ್ರತಿಯನ್ನು ಸಲ್ಲಿಸಿದರು.

