ಮಾನ್ವಿ: ತಾಲೂಕಿನ ಪೋತ್ನಾಳ್ ಗ್ರಾಮದಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜನವೇದಿಕೆ ಸಮಿತಿ ವತಿಯಿಂದ ನಮ್ಮ ಆರೋಗ್ಯ ನಮ್ಮ ಹಕ್ಕು ಅಭಿಯಾನದಡಿಯಲ್ಲಿ ಜನಸಂಪರ್ಕ ಸಭೆಯ ಮೂಲಕ ತಾಲೂಕು ಆರೋಗ್ಯಧಿಕಾರಿ ಡಾ.ಶರಣಬಸವರಾಜ ರವರಿಗೆ ಜನವೇದಿಕೆ ಸದಸ್ಯರಾದ ಯಂಕೋಬ ನಾಯಕ್ ಮನವಿ ಸಲ್ಲಿಸಿ ಮಾತನಾಡಿ ಪೋತ್ನಾಳ್ ಗ್ರಾಮದಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತ ತಡೆಗೋಡೆ ,ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು , ರಾತ್ರಿ ವೇಳೆ ಕೂಡ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಖಾಲಿ ಇರುವ ವೈದ್ಯರನ್ನು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡಬೇಕು. ಆಸ್ಪತ್ರೆಯಲ್ಲಿ ರಕ್ತಪರೀಕ್ಷೆ, ಕುಟುಂಬ ನಿಯಂತ್ರಣ ಯೋಜನೆಯ ಶಸ್ತçಚಿಕಿತ್ಸೆಗಳು, ಹೆರಿಗೆಗಳು, ತಪಾಸಣೆಗಳು, 108 ಅಂಬುಲೇನ್ಸ್ ವ್ಯವಸ್ಥೆ , ನಾಯಿ ಕಡಿತಕ್ಕೆ ಸೇರಿದಂತೆ ಅಗತ್ಯ ಔಷಧಿಗಳ ಸಂಗ್ರಹಣೆ ಮಾಡಿ ರೋಗಿಗಳಿಗೆ ನೀಡಬೇಕು, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವಿಕರಿಸಿ ತಾಲೂಕಾ ವೈದ್ಯಾಧಿಕಾರಿ ಡಾ.ಶರಣಬಸವರಾಜ ಮಾತನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗುವುದು ಗುಣಮಟ್ಟದ ಚಿಕಿತ್ಸೆ ನೀಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬರವಸೆ ನೀಡಿದರು
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಹನುಮೇಶ ನಾಯ್ಕ ,
ಜನವೇದಿಕೆ ಸದಸ್ಯರಾದ ಯಂಕೋಬ ನಾಯಕ್, ಈಶಮ್ಮ, ಸಿದ್ದಲಿಂಗಮ್ಮ, ಹಂಪಯ್ಯ, ದೇವರಾಜ್, ಸುಂಕ್ಲಮ್ಮ, ದೇವರಾಜ ಕೋಟ್ನೇಕಲ್, ಶ್ರೀದೇವಿ, ಸದಾನಂದ, ಜನಜಾಗೃತಿ ರಾಜ್ಯಧ್ಯಕ್ಷರಾದ ಯೇಸಪ್ಪ , ಕರ್ನಾಟಕ ದಲಿತ ಸಂಘಟನೆಯ ಶೀವಜ್ಞಾನಿ , ರೈತ ಮುಖಂಡರಾದ ರಾಜಾಸಾಬ್, ಕಟ್ಟಡ ಕಾರ್ಮಿಕg ಸಂಘದÀ ಜಿಲ್ಲಾಧ್ಯಕ್ಷರಾದ ಚಿನ್ನಪ್ಪ ಪನ್ನೂರು, ಮಾಜಿ ಗ್ರಾಮಪಂಚಾಯತಿ ಅಧ್ಯಕ್ಷ ಈರಣ್ಣ, ಸೇರಿದಂತೆ ನೂರಾರು ಜನವೇದಿಕೆ ಸದಸ್ಯರು ಭಾಗವಹಿಸಿದರು
ಮಾನ್ವಿ: ತಾಲೂಕಿನ ಪೋತ್ನಾಳ್ ಗ್ರಾಮದಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜನವೇದಿಕೆ ಸಮಿತಿ ವತಿಯಿಂದ ತಾಲೂಕಾ ವೈದ್ಯಾಧಿಕಾರಿ ಡಾ.ಶರಣಬಸವರಾಜ ರವರಿಗೆ ಮನವಿ ಸಲ್ಲಿಸಲಾಯಿತು.

