ಮಾನ್ವಿ: ಪಟ್ಟಣದ ಲೊಯೋಲ ಶಿಕ್ಷಣ ಸಂಸ್ಥೆಯ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಾಗೂ ಲೊಯೋಲ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆದ ರಾಷ್ಟೀಯ ಅಗ್ನಿಶಾಮಕ ಸೇವಾ ಸಪ್ತಾಹ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಯಚೂರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರವೀಂದ್ರ ಎ. ಘಾಟಿಗೆ ಮಾತನಾಡಿ ಸಾರ್ವಜನಿಕರಲ್ಲಿ ಅಗ್ನಿ ಅವಘಡಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ತುರ್ತು ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದರ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಪ್ರತಿ ವರ್ಷ ಏಪ್ರೀಲ್ ತಿಂಗಳಲ್ಲಿ ರಾಷ್ಟೀಯ ಅಗ್ನಿಶಾಮಕ ಸೇವಾ ಸಪ್ತಾಹ ದಿನಾಚರಣೆ ಕಾರ್ಯಕ್ರಮವನ್ನು ಇಲಾಖೆಯಿಂದ ಹಮ್ಮಿಕೊಳ್ಳಲಾಗುತ್ತದೆ. ವಿದ್ಯುತ್ ಉಪಕರಣಗಳ ಬಳಕೆ ಮತ್ತು ಬೆಂಕಿಯ ವಿಷಯದಲ್ಲಿ ಹೆಚ್ಚಿನ ಜಾಗೃತಿ ವಹಿಸದೆ ಇರುವುದರಿಂದ ಹೆಚ್ಚಿನ ಅಗ್ನಿ ಅನಾಹುತಗಳು ಸಂಭವಿಸುತ್ತವೆ.ಅದ್ದರಿAದ ಮನೆಯಿಂದ ಹೊರಹೋಗುವಾಗ ಅನಗತ್ಯ ಸ್ವಿಚ್‌ಗಳನ್ನು ಆಫ್ ಮಾಡಿ. ಎಲ್.ಪಿ.ಜಿ ಗ್ಯಾಸ್ ಸೋರಿಕೆಯಾಗುತ್ತಿದ್ದರೆ ತಕ್ಷಣ ರೆಗ್ಯುಲೇಟರ್ ಆಫ್ ಮಾಡಿ ಕಿಟಕಿ,ಬಾಗಿಲುಗಳನ್ನು ತೆರೆಯಿರಿ. ಬಿಸಿಲು ಹೆಚ್ಚಿರುವ ಜಿಲ್ಲೆಗಳಲ್ಲಿ ಒಣ ಕಸ ಅಥವಾ ಹುಲ್ಲಿನ ಬಣವೆಗಳ ಬಳಿ ಬೆಂಕಿ ಹಚ್ಚುವಾಗ ಹೆಚ್ಚಿನ ನಿಗಾವಹಿಸಬೇಕು. ಅಗ್ನಿ ಅವಘಡ ಸಂಭವಿಸಿದ ಮೊದಲ ಕೆಲವೇ ನಿಮಿಷಗಳು ಅತ್ಯಂತ ನಿರ್ಣಾಯಕವಾಗಿರುವುದರಿಂದ ಈ ಸಮಯವನ್ನು ಬಂಗಾರದ ಸಮಯ ಎಂದು ಕರೆಯಲಾಗುತ್ತದೆ ಈ ಸಮಯದಲ್ಲಿ ಬೆಂಕಿ ಹರಡದಂತೆ ಸೂಕ್ತ ಕ್ರಮವನ್ನು ಕೈಗೊಂಡಲ್ಲಿ ಅಮೂಲ್ಯವಾದ ಜೀವ ಮತ್ತು ಆಸ್ತಿ ಹಾನಿಯನ್ನು ತಡೆಗಟ್ಟಬಹುದು ಸುರಕ್ಷತೆ ಎನ್ನುವುದು ಕೇವಲ ಅಗ್ನಿಶಾಮಕ ದಳದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಲೊಯೋಲ ಪದವಿ ಕಾಲೇಜಿನ ಪ್ರಾಂಶುಪಾಲರಾದ ಫಾ. ವಿನೋದ್ ಪೌಲ್ ಮಾತನಾಡಿ, ಮುಂಜಾಗ್ರತೆಯೇ ಅಗ್ನಿ ಸುರಕ್ಷತೆಯ ಮೊದಲ ಮೆಟ್ಟಿಲಾಗಿರುವುದರಿಂದ ಅಗ್ನಿ ಅನಾಹುತ ಸಮಯದಲ್ಲಿ ಪ್ರತಿಯೊಬ್ಬರು ಕೂಡ ಜಾಗೃತರಾಗಿರಬೇಕು ಎಂದು ತಿಳಿಸಿದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರವೀಂದ್ರ ಎ. ಘಾಟಿಗೆ , ಮಾನ್ವಿ ಪಟ್ಟಣದ ಅಗ್ನಿಶಾಮಕ ಇಲಾಖೆಯ ಠಾಣಾಧಿಕಾರಿಗಳಾದ ರಂಗಪ್ಪ, ಮಾನ್ವಿಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಗಳಾದ ಹಾಜಿಮಿಯಾ ನೇತೃತ್ವದಲ್ಲಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಮಾಕ್ ಡ್ರಿಲ್ ಮೂಲಕ ವಿದ್ಯಾರ್ಥಿಗಳಿಗೆ ತುರ್ತು ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹಾಗೂ ಗ್ಯಾಸ್ ಸಿಲೇಂಡರ್‌ಗೆ ಬೆಂಕಿ ಬಿದ್ದಾಗ ಕೈಗೊಳ್ಳಬೇಕಾದ ಸುರಕ್ಷ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಲೊಯೋಲ ಕಾಲೇಜಿನ ಉಪಪ್ರಾಂಶುಪಾಲರಾದ ಖಾಸಿಂ ಸಾಬ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.
.

Leave a Reply

Your email address will not be published. Required fields are marked *