ಲೋಯಲ ಸಮಾಜ ಸೇವಾ ಕೇಂದ್ರದಿAದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ಮಾನ್ವಿ: ಪಟ್ಟಣದ ಲೋಯಲ ಸಮಾಜ ಸೇವಾ ಕೇಂದ್ರದ ಅರುಪೆ ಸಭಾಂಗಣದಲ್ಲಿ ಲೋಯಲ ಸಮಾಜ ಸೇವಾ ಕೇಂದ್ರ ಹಾಗೂ ಮಾನವ ಹಕ್ಕುಗಳ ವೇದಿಕೆ ಮಾನವಿ ವತಿಯಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ ರವರ 135 ನೇ ಜಯಂತಿ ಉತ್ಸವ ಕಾರ್ಯಕ್ರಮವನ್ನು ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸುವ ಮೂಲಕ ಉದ್ಘಾಟಿಸಿ ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ಮಾತನಾಡಿ ವೈವಿಧ್ಯಮಯವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಸಂಸ್ಕೃತಿ, ಪರಂಪರೆ, ಭಾಷೆಯನ್ನು ಹೊಂದಿರುವ ವಿಶೀಷ್ಟವಾದ ಭಾರತದೇಶಕ್ಕೆ ವಿಶ್ವದಲ್ಲಿಯೇ ಶ್ರೇಷ್ಟವಾದ ಸಂವಿಧಾನವನ್ನು ನೀಡಿದು ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಸಂವಿಧಾನದ ಕುರಿತು ತಿಳಿಸಿದಾಗ ಮಾತ್ರ ಶಾಂತಿಯುತವಾದ ಸೌಹಾರ್ಧಯುತವಾದ ದೇಶವನ್ನು ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ತಾ.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶಾಹಿರ್ ಭಾನು ನದಾಫ್ ವಿಶೇಷ ಉಪನ್ಯಾಸ ನೀಡಿ ಡಾ.ಬಿ.ಆರ್.ಅಂಬೇಡ್ಕರ್ ರವರು ಜ್ಞಾನವನ್ನು ಗಳಿಸುವ ಶಿಕ್ಷಣಕ್ಕೆ ಹೆಚ್ಚಿನ ಅದ್ಯತೆಯನ್ನು ನೀಡಿದರು. ವಿಶೇಷವಾಗಿ ಮಹಿಳೆಯರು ಕೂಡ ಶಿಕ್ಷಣವಂತರಾಗಬೇಕು ಆಗಮಾತ್ರ ಮಹಿಳೆಯರು ಸ್ವವಲಂಬಿಗಳಾಗಿ ಸ್ವತಂತ್ರರಾಗಿ ಬದುಕುವುದಕ್ಕೆ ಹಾಗೂ ಸ್ತಿçÃಯರಿಗೆ ಸಮಾನತೆ ದೊರೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಪ್ರಬಲವಾಗಿ ನಂಬಿದರು ಅವರು ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬ ಮಹಿಳೆಗೂ ಕೂಡ ಸಮಾನತೆ, ಸಮಾನ ಹಕ್ಕುಗಳು, ಸ್ತಿçಯರಿಗೆ ಮುಕ್ತವಾದ ಸ್ವತಂತ್ರö್ಯವನ್ನು ನೀಡಿದ್ದಾರೆ ಅದ್ದರಿಂದ ಪ್ರತಿಯೊಬ್ಬ ಪಾಲಕರು ಕೂಡ ತಮ್ಮ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡುವುದಕ್ಕೆ ಹೆಚ್ಚಿನ ಅದ್ಯತೆಯನ್ನು ನೀಡಿ ಎಂದು ತಿಳಿಸಿದರು.
ಜನೋದಾಯ ರಂಗ ಚೈತನ್ಯ ಕಲಾ ತಂಡದಿAದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ರಾಮಾಬಾಯಿ ರವರ ಜೀವನ ಕುರಿತು ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ವಿ ಸೇವಾ ಕ್ಷೇತ್ರದ ಮುಖ್ಯಸ್ಥರಾದ ಫಾ.ಸಿಪ್ರಿಯನ್ ಟೆಲ್ಲಿಸ್ ವಹಿಸಿದರು ಉಪತಹಾಸೀಲ್ದಾರ್ ವಿರುಪಣ್ಣ, ಲೋಯಾಲ ಕಾಲೇಜಿನ ಪ್ರಾಚಾರ್ಯರಾದ ಫಾ.ವಿನೋದ್ ಫೌಲ್, ನಿವೃತ್ತ ಶಿಕ್ಷಕಿ ಮಹಿಮೂದ್ ಬೇಗಂ, ಮಿಮುಕ್ತಿ ಚಾರೀಟಬಲ್ ಟ್ರಸ್ಟ್ನ ಫಾ.ಸತೀಶ್ ಫೆರ್ನಾಂಡಿಸ್, ಜನಶಕ್ತಿ ಒಕ್ಕೂಟದ ಅಧ್ಯಕ್ಷರಾದ ಗಂಗಮ್ಮ, ಜನೋದಯ ಸಂಸ್ಥೆಯ ಸಿಸ್ಟರ್ ಕ್ರಿಸ್ಟಿನ್, ರವೀಂದ್ರ ಜಾನೇಕಲ್, ಚಂದ್ರು, ಶಿವಜ್ಞಾನಿ, ಅಬ್ರಹಂ , ಸದಾನಂದ, ಮಾರೆಪ್ಪ ,ಬಸಪ್ಪ, ಬಸವಲಿಂಗಪ್ಪ,ತಿಮ್ಮಲಮ್ಮ,ಬಸವರಾಜ, ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *