ಸಿಂಧನೂರು : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರ್ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರ್ ಹಾಗೂ ಪ್ರಾರ್ಥಮಿಕ ಆರೋಗ್ಯ ಕೇಂದ್ರ ಹಾರಾಪುರ ಬೂತಲದಿನ್ನಿ ಉಪ ಕೇಂದ್ರದ ವ್ಯಾಪ್ತಿಗೆ ಬರುವ ಮಲ್ಲಾಪುರ್ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಶಿಬಿರ ಕಾರ್ಯಕ್ರಮದ ಜೊತೆಗೆ ನೂರು ದಿನಗಳ ಕ್ಷಯರೋಗ ನಿರ್ಮೂಲನೆ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಸದರಿ ಕಾರ್ಯಕ್ರಮದಲ್ಲಿ ಶ್ರೀಮತಿ ಗೀತಾ ಹಿರೇಮಠ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಲಯ ಸಿಂಧನೂರ್ ಇವರು ಮಾತನಾಡಿ ಭಾರತ ಸರ್ಕಾರವು ಕ್ಷಯ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯೊಂದಿಗೆ “100 ದಿನಗಳ ತೀವ್ರ ಕ್ಷಯ ರೋಗ ಅಭಿಯಾನ” ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಅಭಿಯಾನದ ಪ್ರಮುಖ ಅಂಶಗಳು ಪ್ರಾರಂಭದ ದಿನಾಂಕ ಮಾರ್ಚ್ 24 2026 ಅವಧಿ 100 ದಿನಗಳ ಕಾಲ ದೇಶಾದ್ಯಂತ ವಿಶೇಷವಾಗಿ 347ಕ್ಕೂ ಹೆಚ್ಚು ಅತಿ ಹೆಚ್ಚು ಸಂಕಿತ ಜಿಲ್ಲೆಗಳಲ್ಲಿ ಟಿಬಿ ಪ್ರಕರಣಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವುದು ರೋಗ ನಿರ್ಣಯದ ವಿಳಂಬವನ್ನು ಕಡಿಮೆ ಮಾಡುವುದು ಮತ್ತು ಚಿಕಿತ್ಸೆಯನ್ನು ಸುಧಾರಿಸುವುದು ಪ್ರಮುಖ ಕಾರ್ಯಕ್ರಮಗಳು ಸಕ್ರಿಯ ಪ್ರಕರಣ ಪತ್ತೆ ಆರೋಗ್ಯ ಕಾರ್ಯಕರ್ತರು ನೇರವಾಗಿ ಮನೆ ಮನೆಗೆ ಭೇಟಿ ನೀಡಿ ಟಿಬಿ ಲಕ್ಷಣಗಳಿರುವವರನ್ನು ಪರೀಕ್ಷಿಸುತ್ತಾರೆ ಉಚಿತ ತಪಾಸಣೆ ಎಕ್ಸರೇ ಮತ್ತು ಕಫ ಪರೀಕ್ಷೆಗಳು ಆಯೋಜಿಸಲಾಗಿದೆ ನಿಕ್ಷಯ ಪೋಷಣ ಯೋಜನೆ ಟಿಬಿ ರೋಗಿಗಳಿಗೆ ಪೌಷ್ಟಿಕ ಆಹಾರಕ್ಕಾಗಿ ನೀಡುವ ಮಾಸಿಕ ಆರ್ಥಿಕ ಸಹಾಯವನ್ನು 500 ರಿಂದ 1000 ಕ್ಕೆ ಹೆಚ್ಚಿಸಲಾಗಿದೆ ನಿಕ್ಷಯ ಮಿತ್ರ ಯೋಜನೆ ಟಿವಿ ಇರೋ ರೋಗಿಗಳಿಗೆ ಪೌಷ್ಟಿಕಾಂಶದ ಬೆಂಬಲ ನೀಡಲು ಸಾರ್ವಜನಿಕರು ಮತ್ತು ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು ಈ ಅಭಿಯಾನವು ಮುಖ್ಯವಾಗಿ ಶರೋಗಿಗಳ ಚಿಕಿತ್ಸೆ, ಪೂರ್ಣಗೊಳಿಸುವುದು ಮತ್ತು ಸಮಾಜದಲ್ಲಿ ಟಿವಿ ಬಗ್ಗೆ ಇರುವ ಕಳಂಕವನ್ನು ಹೋಗಲಾಡಿಸುವ ಗುರಿಯನ್ನು ಹೊಂದಿದೆ ಸದರಿ ಕಾರ್ಯಕ್ರಮದಲ್ಲಿ ಶ್ರೀ ಸುರೇಶ್ ಎಸ್ ಟಿ ಎಸ್, ಶ್ರೀ ಅಮಿದ್ ಎಸ್ ಟಿ ಎಲ್ ಎಸ್ ಶ್ರೀ ಸಂಗಮೇಶ್ ಎಸ್ ಟಿ ಎಲ್ ಎಸ, ಶ್ರೀಮತಿ ಪ್ರೇಮ ಪಿ ಎಚ್ ಸಿ ಓ, ಶ್ರೀಮತಿ ದೀಪಿಕಾ ಸಿ ಎಚ್ ಓ, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

