ಹಾಲಾಪೂರ: ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು. ನಂತರ ಮಾತನಾಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಹೂಗಾರ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತೀಯ ಸಂವಿಧಾನ ಶಿಲ್ಪಿ ಹಾಗೂ ಸಾಮಾಜಿಕ ಸುಧಾರಕರಾಗಿ ಇಡಿ ಭಾರತೀಯ ಮನುಕುಲಕ್ಕೆ ಸಮಾನತೆ, ಸ್ವಾತಂತ್ರ್ಯ, ಐಕ್ಯತೆ ಸಮಗ್ರತೆ ಪ್ರತಿಪಾದಿಸಿದ ಮಹನ್ ವ್ಯಕ್ತಿಗಳಾಗಿ ದೇಶಕ್ಕೆ ಸವಿಧಾನ ಕಾನೂನು ಕೊಟ್ಟಂತಹ ಅಗಾಧ ಪಂಡಿತರು, ಇಂದು ನಾವೆಲ್ಲರೂ ಅವರ ಕೊಟ್ಟಂತ ಸಂವಿಧಾನ ನೀತಿ ನಿಯಮಗಳನ್ನು ಎತ್ತಿ ಹಿಡಿಯುವ ಮೂಲಕ ಸಮಾಜದಲ್ಲಿ ಆದರ್ಶ ಪ್ರಾಯರಾಗಿ ಬದುಕಬೇಕು ಎಂದು ವಿಶ್ವನಾಥ ಹೂಗಾರ ಪಿಡಿಒ ಹೇಳಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಪರಣ್ಣ, ರಂಗಪ್ಪ ಕಂಪ್ಯೂಟರ್, ಗ್ರಂಥಪಾಲಕ ಗ್ಯಾನಪ್ಪ, ಮೌಲಾಸಾಬ ಹಾಗೂ ಇನ್ನಿತರರು ಇದ್ದರು.

