ತಾಳಿಕೋಟಿ: ಅಂಬೇಡ್ಕರ್ ವಿಶ್ವಕಂಡ ಮಹಾನ್ ನಾಯಕ ಭಾರತದ ಏಕತೆ ವೈವಿಧ್ಯತೆ ಸಮಗ್ರತೆ ಮತ್ತು ಸಮಾನತೆಗೆ ಅವರ ಕೊಡುಗೆ ಅಪಾರ ಅವರನ್ನು ಕೇವಲ ಪೂಜೆಗೆ ಸೀಮಿತಗೊಳಿಸದೆ ಅವರ ಬದುಕಿನ ಆದರ್ಶಗಳನ್ನು ಅನುಸರಿಸುವ ಅಗತ್ಯ ಇದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ದಮ್ಮೂರಮಠ ಹೇಳಿದರು. ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶೋಷಿತ ವರ್ಗವನ್ನು ಮುಖ್ಯವಾಹಿನಿಗೆ ತರಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅವರು ಶಿಕ್ಷಣದಿಂದಲೇ ಸಮುದಾಯದ ಸಮಗ್ರ ಪ್ರಗತಿ ಸಾಧ್ಯವೆಂದು ಅಚಲವಾಗಿ ನಂಬಿದ್ದರು ಇವತ್ತು ನಾವು ಅವರ ಮೂಲ ಮಂತ್ರವಾದ ಶಿಕ್ಷಣ ಸಂಘಟನೆ ಹೋರಾಟ ಇದರಲ್ಲಿ ಶಿಕ್ಷಣವನ್ನು ಬಿಟ್ಟು ಉಳಿದೆರಡನ್ನು ಹಿಡಿದುಕೊಂಡಿದ್ದೇವೆ. ಈ ಸಮಾಜದ ಸಾಕ್ಷರತೆಯ ಪ್ರಮಾಣ ಬಹಳ ಕಡಿಮೆಯಿದೆ ಎಂದು ವರದಿಗಳು ತಿಳಿಸುತ್ತವೆ ಅವರ ಜಯಂತಿ ಆಚರಣೆಯ ಈ ಸಂದರ್ಭದಲ್ಲಿ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ ಸಮುದಾಯದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು. ದಲಿತ ಮುಖಂಡರಾದ ಡಿ.ಬಿ. ಹಾದಿಮನಿ ಹಾಗೂ ಜೈಭೀಮ್ ಮುತ್ತಗಿ ಮಾತನಾಡಿ ದೇಶಕ್ಕೆ ವಿಶ್ವ ಶ್ರೇಷ್ಠ ಸಂವಿಧಾನವನ್ನು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಕೊಟ್ಟು ಹೋಗಿದ್ದಾರೆ ದೇಶಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರು ಸಮಾನತೆಯ ಅರಿವು ಮೂಡಿಸಿದ ಮಹಾನ್ ನಾಯಕ ಆದರೆ ಇಂದು ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಕೆಲಸ ಆಗುತ್ತಿರುವುದು ನೋವಿನ ಸಂಗತಿ ಬಾಬಾ ಸಾಹೇಬ್ ಅವರು ಕೇವಲ ದಲಿತರ, ಹಿಂದುಳಿದ ವರ್ಗದವರಿಗೆ ಮಾತ್ರವಲ್ಲ ಭವ್ಯ ಭಾರತದ ಭವಿಷ್ಯದ ಪ್ರಜೆಗಳ ನಾಯಕರಾಗಿದ್ದಾರೆ ಅವರು ಸರ್ವ ಜನಾಂಗದ ಆಶಾಕಿರಣ. ಅವರಂಥಹ ಪಾಂಡಿತ್ಯ ಹೊಂದಿದ ವ್ಯಕ್ತಿ ದೇಶದಲ್ಲಿ ಇನ್ನೊಬ್ಬನಿಲ್ಲ, ಬಾಬಾ ಸಾಹೇಬರು ತಮಗಾಗಿ ಬದುಕಲಿಲ್ಲ ದೇಶದ ಸರ್ವ ಜನರ ಹಿತಕ್ಕಾಗಿ ಬದುಕಿದರು. ಅವರ ಜೀವನದ ಆದರ್ಶಗಳನ್ನು ಪ್ರಾಂಜಲ ಮನಸ್ಸಿನಿಂದ ಅಧ್ಯಯನ ಮಾಡುವ ಅಗತ್ಯ ಇದೆ ಎಂದರು. ತಾಲೂಕ ಪಂಚಾಯತ ಮುಖ್ಯ ಕಾರ್ಯನಿರ್ವಣಾಧಿಕಾರಿ ಅನಸೂಯಾ ಚಲವಾದಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ರಾಜು ವಿಜಾಪುರ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆ ಕಾರ್ಯಕ್ರಮ ಮುನ್ನ ಪಟ್ಟಣದ ಅಂಬೇಡ್ಕರ್ ಸರ್ಕಲ್ ದಲ್ಲಿರುವ ಡಾ.ಬಿ. ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ತಹಶೀಲ್ದಾರ ಡಾ.ವಿನಯಾ ಹೂಗಾರ ಅವರ ನೇತೃತ್ವದಲ್ಲಿ ತಾಲೂಕ ಆಡಳಿತ ಹಾಗೂ ವಿವಿಧ ದಲಿತ ಪರ ಸಂಘಟನೆಗಳ ವತಿಯಿಂದ ಪುಷ್ಪ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ತಾಪಂ ಇಓ ಅನಸೂಯಾ ಚಲವಾದಿ, ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ,ಪಿಎಸ್ಐ ಜ್ಯೋತಿ ಖೋತ, ವ್ಯವಸ್ಥಾಪಕ ಶಿವಲಿಂಗಪ್ಪ ಹಚಡದ, ನಿವೃತ್ತ ಪೊಲೀಸ್ ವರಿಷ್ಟಾಧಿಕಾರಿ ಎಸ್ ಬಿ ಕಟ್ಟಿಮನಿ, ಮುಖಂಡರಾದ ಮುತ್ತಪ್ಪ ಚಮಲಾಪೂರ,ಬಸವರಾಜ ಕಟ್ಟಿಮನಿ, ಎಂ ಎಸ್ ಸರಶಟ್ಟಿ, ಮಲ್ಲಿಕಾರ್ಜುನ ಪಟ್ಟಣಶಟ್ಟಿ,ಹುಸೇನ ಜಮಾದಾರ, ಅಮಿತ್ ಮನಗೂಳಿ, ಅಬೂಬಕರ ಲಾಹೋರಿ, ಶಫೀಕ ಇನಾಮದಾರ, ಹಣಮಂತ ಕೊಡಗಾನೂರ,ನಾಗೇಶ ಕಟ್ಟಿಮನಿ,ಮಹೇಶ ಚಲವಾದಿ, ರವಿ ಕಟ್ಟಿಮನಿ, ಪರಶುರಾಮ ಕಟ್ಟಿಮನಿ, ಸಿದ್ದು ಬಾರಿಗಿಡದ, ರಾಮಣ್ಣ ಕಟ್ಟಿಮನಿ,ಸಂಜೀವಪ್ಪ ಬರದೇನಾಳ, ಗೋಪಾಲ ಕಟ್ಟಿಮನಿ, ಬಸ್ಸು ಮಾದರ,ಆಸೀಫ ಕೆಂಭಾವಿ, ಜುಮಣ್ಣ ನಾಲತವಾಡ, ಲತೀಫ ಬೀಳಗಿ,ಬಡೇಸಾ ಚೌದ್ರಿ ಹಾಗೂ ತಾಲೂಕ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *