ಕವಿತಾಳ : ಡಾ.ಬಾಬಾ ಸಾಹೇಬ್ ಅಂಬೇಡ್ಕ್ರ್ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಇಂದಿನ ಯುವ ಪೀಳಿಗೆ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕಾಗಿದೆ’ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕಿರಿಲಿಂಗಪ್ಪ ಅವರು ಹೇಳಿದರು.
ಅವರು ಇಂದು ಪಟ್ಟಣ ಪಂಚಾಯತಿಯಲ್ಲಿ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೫ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.
`ಬಾಬಾ ಸಾಹೇಬರು ಸೋಶಿತ ವರ್ಗದ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಭಾರತದ ಸಂವಿಧಾನ ರೂಪಿಸುವ ಜವಾಬ್ಧಾರಿಯನ್ನು ಹೊತ್ತು ಅಪಾರ ಶ್ರಮವಹಿಸಿ ದೇಶಕ್ಕೆ ಸಂವಿಧಾನವನ್ನು ಕಟ್ಟಿಕೊಟ್ಟರು, ಭಾರತ ಆಡಳಿತಕ್ಕೆ ಸಂವಿಧಾನವನ್ನು ನೀಡಿದ ಮಹಾತ್ಮರು ಇವರಾಗಿದ್ದು, ಇವರು ಕೊಟ್ಟಿರುವ ಸಂವಿಧಾನದ ಮಾರ್ಗದಲ್ಲಿ ನಾವುಗಳು ನಡೆಯುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಾಗಿದೆ’ ಎಂದರು.
ಪಟ್ಟಣ ಪಂಚಾಯತಿ ಅಧ್ಯಕ್ಷೆ ರಾಜೆಶ್ವರಿ ತಿಪ್ಪಯ್ಯಸ್ವಾಮಿ, ಉಪಾಧ್ಯಕ್ಷೆ ಯಲಿಜ ಓವಣ್ಣ ಕಡತಲ್ ಬಾಬಾ ಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಪಿಎಸ್‌ಐ ಗುರುಚಂದ್ರ ಯಾದವ್, ಪಟ್ಟಣ ಪಂಚಾಯತ್ ಸದಸ್ಯರಾದ ಅಮರೇಶ ಕಟ್ಟಿಮನಿ, ಮಲ್ಲಿಕಾರ್ಜುನಗೌಡ, ಲಿಂಗರಾಜ್ ಕಂದಗಲ್, ಯಲ್ಲಪ್ಪ ಮಾಡಗಿರಿ, ದಲಿತ ಸಾಹಿತಿ ಜಂಬಣ್ಣ, ಮುಖಂಡರಾದ ಬಸವರಾಜ್ ಕವಿತಾಳ, ಈರಣ್ಣ ಕೆಳಗೇರಿ, ಹನುಮಂತ ಬುಳ್ಳಾಪುರ, ಯಮನಪ್ಪ ದಿನ್ನಿ, ತಿಪ್ಪಯ್ಯಸ್ವಾಮಿ, ಚಾಂದಪಾಷಾ, ಸುರೇಶ್ ರಡ್ಡಿ, ಅಯ್ಯಪ್ಪ ನಿಲೋಗಲ್,ಯಾಕುಬ್, ರಫಿ ಒಂಟಿಬAಡಿ ಸೇರಿದಂತೆ ಇನ್ನಿತರ ಮುಖಂಡರು ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಟ್ಟಣದ ಎಲ್ಲಾ ಸರ್ಕಾರಿ ಕಛೆರಿಗಳು, ಶಾಲೆಗಳು ಸೇರಿದಂತೆ ಖಾಸಗಿ ಶಾಲಾ, ಸಂಘ ಸಂಸ್ಥೆಗಳಲ್ಲಿ ಅಂಬೆಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

