ಸಿಂಧನೂರು – ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಸಾಯಿ ದರ್ಶನ ಟಿಫಿನ್ ಸೆಂಟರ್ ಮಾಲೀಕರುಗಳಾದ ರಾಮಲಕ್ಷ್ಮಿ ರಮೇಶ ವಟ್ಟಿಕೂಟಿ ಈ ದಂಪತಿಗಳ 26ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮವನ್ನು ಆಶ್ರಮದಲ್ಲಿ ಇಡೀ ದಿನ ವಿವಿಧ ಮಹಾಪ್ರಸಾದ ಸೇವೆ ಹಾಗೂ ಅಣ್ಣೊಬ್ಬರಗಳನ್ನು ವಿತರಿಸುವ ಮೂಲಕ ಸರಳವಾಗಿ ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಆಶ್ರಮದ ವತಿಯಿಂದ ವಟ್ಟಿಕೂಟಿ ಕುಟುಂಬವನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ರಮೇಶ ವಟ್ಟಿಕೂಟಿ ಮಾತನಾಡಿ ಕಾರುಣ್ಯಾಶ್ರಮದ ಸೇವೆ ಭಗವಂತನ ಪೂಜೆಗಿಂತ ಮಿಗಿಲಾದುದು. ನಮ್ಮ ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಉಳಿಸುವ ನಿಟ್ಟಿನಲ್ಲಿ ಕಾರುಣ್ಯ ಆಶ್ರಮವು ಪ್ರಾಮಾಣಿಕವಾಗಿ ಸೇವೆ ಮಾಡುತ್ತಿದೆ. ನಾವು ಸುಮಾರು ವರ್ಷಗಳಿಂದ ಕಾರುಣ್ಯ ಆಶ್ರಮಕ್ಕೆ ಭೇಟಿಕೊಡುತ್ತಾ ಇದನ್ನು ಸ್ವಂತ ಕುಟುಂಬ ಎಂದುಕೊಂಡಿದ್ದೇವೆ. ಇಂತಹ ಪ್ರಾಮಾಣಿಕ ಸೇವೆ ಮಾಡುವಂತಹ ಸಂಸ್ಥೆಗೆ ಸರ್ಕಾರದ ಜಾಗ ಹಾಗೂ ಅನುದಾನ ಸಿಗದಿರುವುದು ನಾಚಿಕೆಗೇಡಿನ ಸಂಗತಿ ಆದ್ದರಿಂದ ಸಿಂಧನೂರಿನ ಜನಪ್ರತಿನಿಧಿಗಳು ಮನಸ್ಸು ಮಾಡಿ ಆಶ್ರಮಕ್ಕೆ ಸ್ವಂತ ಜಾಗ ಕಲ್ಪಿಸಿಕೊಟ್ಟರೆ ತಮ್ಮ ರಾಜಕೀಯ ಬದುಕಿಗೆ ಸಂಪೂರ್ಣ ಅರ್ಥ ಸಿಗುತ್ತದೆ. ಕಾರುಣ್ಯಶ್ರಮದ ಅನಾಥರ ಬದುಕಿನ ಬಂಡಿಯ ಗಾಲಿಗಳೇ ಈ ಆಶ್ರಮಕ್ಕೆ ಸಹಾಯ ಮಾಡುವ ಮಹಾದಾನಿಗಳು ನಾನು ನನ್ನದು ಎನ್ನುವ ಸ್ವಾರ್ಥ ಜಗತ್ತಿನಲ್ಲಿ ನಿಸ್ವಾರ್ಥದ ಸೇವೆ ಮಾಡುತ್ತಾ ಅದೆಷ್ಟು ಅಂದ ಅನಾಥರ ಬಾಳಿಗೆ ಬೆಳಕಾಗಿರುವ ಈ ನಮ್ಮ ಕಾರುಣ್ಯಾಶ್ರಮವು ಕಲ್ಯಾಣ ಕರ್ನಾಟಕದ ಕರುಣೆಯ ಮಂದಿರವಾಗಿ ಅನಾಥರ ಬದುಕಿನ ಸುಂದರ ಕುಟುಂಬವಾಗಿರುವುದು ನಮ್ಮೆಲ್ಲರಿಗೆ ಸಂತೋಷ ನಾವು ಸದಾಾವಕಾಲ ಕಾರುಣ್ಯ ಆಶ್ರಮದ ಜೊತೆಗಿರುತ್ತೇವೆ ಎಂದು ಭಾವನಾತ್ಮಕವಾಗಿ ಮಾತನಾಡಿ ಹಣ್ಣು ಹಂಪಲುಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎನ್. ಶ್ರೀನಿವಾಸ ಮಾಲೀಕರು- ಶ್ರೀ ಸಾಯಿ ಪ್ರಸನ್ನ ಟಿಫಿನ್ ಸೆಂಟರ್ ಜಂಗಮರ ಕಲ್ಲುಡಿ ಗಂಗಾವತಿ. ಡಿ. ಶ್ರೀನಿವಾಸ. ಮೈನುದ್ದೀನ್. ಎನ್.ಶ್ವೇತಾ. ತನುಶ್ರೀ.ಹರೀಶ.ಮೋಹಿತ್. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಹಾಗೂ ಆಶ್ರಮದ ಸಿಬ್ಬಂದಿಗಳಾದ ಸುಜಾತಾ ಮಲದ ಗುಡ್ಡ ಸಿದ್ದಯ್ಯ ಸ್ವಾಮಿ ಮರಿಯಪ್ಪ ಜ್ಯೋತಿ. ಮೀನಾಕ್ಷಿಮ್ಮ. ಲಕ್ಷ್ಮಿ.ಶರಣು ಸ್ವಾಮಿ ಅನೇಕರು ಉಪಸ್ಥಿತರಿದ್ದರು.

