ಜಾಲಹಳ್ಳಿ : ಗ್ರಾಮದಲ್ಲಿ ಇಂದು (14-04-2026) ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ಜಾಲಹಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ದಲಿತ ಸಂಘಟನೆಗಳು ಒಂದಾಗಿ ಸೇರಿ ಗೌರವ ಸಮರ್ಪಿಸಿದವು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಎನ್. ಲಿಂಗಪ್ಪ ಅವರು, ಅಂಬೇಡ್ಕರ್ ಅವರ ಜಯಂತಿ ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಆಚರಣೆ ಆಗುತ್ತಿರುವುದು ಅವರ ಮಹತ್ವವನ್ನು ತೋರಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ವಕೀಲ ವೇಣುಗೋಪಾಲ್ ನಾಯಕ್ ಮಾತನಾಡಿ, ಅಂಬೇಡ್ಕರ್ ಅವರ ಆದರ್ಶ ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಸಂವಿಧಾನದ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಹೇಳಿದರು.

ಜಾಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಆರ್.ಎಸ್. ಹುಲಿಮನಿ ಗೌಡ್ರು ಮಾತನಾಡಿ, ಸಮಾಜದಲ್ಲಿ ಅಸ್ಪೃಶ್ಯತೆ ಮತ್ತು ಅಸಮಾನತೆಯನ್ನು ನಿವಾರಿಸಲು ಅಂಬೇಡ್ಕರ್ ಅವರ ಪಾತ್ರ ಅತ್ಯಂತ ಮಹತ್ವದ್ದು ಎಂದು ತಿಳಿಸಿದರು. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಮಹಾನ್ ವ್ಯಕ್ತಿಗಳಲ್ಲಿ ಅಂಬೇಡ್ಕರ್ ಪ್ರಮುಖರು ಎಂದರು.

ಸಮಾಜ ಸೇವಕ ಸಾಬಣ್ಣ ಕಮಲದಿನ್ನಿ ಅವರು ಮಾತನಾಡಿ, ಜಾತಿ ಭೇದವನ್ನು ಮರೆತು ಸಮಾನತೆಯ ಸಂದೇಶವನ್ನು ಸಾರುವ ಮೂಲಕ ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಿದ್ದೇವೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತಾಲೂಕು ಆಡಳಿತದಿಂದ ಸಮಾಜ ಸೇವೆಗೆ ಉತ್ತಮ ಪ್ರಶಸ್ತಿ ಪಡೆದ ಸಾಬಣ್ಣ ಕಮಲದಿನ್ನಿ ಅವರನ್ನು ಎಲ್ಲಾ ದಲಿತ ಸಂಘಟನೆಗಳು ಸೇರಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ
ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ವೆಂಕೋಬ ತೋಟದ, ಉಪಾಧ್ಯಕ್ಷರಾದ ವೀರೇಶ್ ಅರಕೇರಿ
ಜಾಲಹಳ್ಳಿ ಪಿಎಸ್ಐ ಆಗಿರುವ ವೈಶಾಲಿ ಜಳಕಿ ಬಸವರಾಜ್ ಪಂಪಾಪತಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಶ್ರೀ ವೇಣುಗೋಪಾಲ್ ನಾಯಕ್ ವಕೀಲರು, ರಾಜ ವಾಸುದೇವ ನಾಯಕ ವಕೀಲರು, ಶ್ರೀ ಮೌನೇಶ್ ದೇಸಾಯಿ, ಬಾಬಾ ಮೆಡಿಕಲ್, ಬಸವರಾಜ್ ಪಾಣಿ ನಸಿರುದ್ದೀನ್ ಮುಲ್ಲಾ, ಹೈದರ್ ಸಾಬ್ ಮುಲ್ಲಾ, ಇಬ್ರಾಹಿಂ ಯಾದ್ಗೀರ್ ಅಮರೇಗೌಡ ಕಮಲದಿನ್ನಿ, ಶರಣಗೌಡ ಕಂಬಲದಿನ್ನಿ, ಭೀಮಣ್ಣ ಗುಮ್ದಾರ್, ಗಿರಿಯಪ್ಪ ಪೂಜಾರಿ ಪತ್ರಕರ್ತರು ಮೌನೇಶ್ ಪತ್ರಕರ್ತರು ಮಹಾಲಿಂಗ ಪತ್ರಕರ್ತರು ಚೆನ್ನಪ್ಪ ಪತ್ರಕರ್ತರು ಇಮಾಮ್ ಸಾಬ್, ಲಿಂಗಣ್ಣ ಮಕಾಶಿ ನಂದಪ್ಪ, ತಮ್ಮಣ್ಣ ಹೇರುಂಡಿ, ರಂಗಪ್ಪ ಬಂಡಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಮಕ್ತುಂಮ ಪರಾಶಿ, ಕುಮಾರ್, ಅಬ್ದುಲ್ ರೆಹಮಾನ್ ಖುರೇಷಿ, ಸಲ ಬಣ್ಣ ಹಂಪರಗುಂದಿ, ರಮೇಶ್ ತೆಗ್ಗಳ್ಳಿ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಗೋವಿಂದಪ್ಪ ಹಲಗೇರಿ ಉಪಾಧ್ಯಕ್ಷರಾದ ಖುರ್ಷಿದ್ ಪಟೇಲ್ ಸದಸ್ಯರಾದ ವೆಂಕುಬ ಪೂಜಾರಿ, ಈಶಣ್ಣ ಕಾಟಮಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿದ್ದರು ಹಾಗೂ
ದಲಿತ ಸಮಿತಿ ಮುಖಂಡರಾದ ಎನ್ ಲಿಂಗಪ್ಪ, ಸಾಬಣ್ಣ ಕಮಲದಿನ್ನಿ, ಬಾಳಪ್ಪ ಬಾವಿಮನಿ, ಹುಸೇನಪ್ಪ ಗುತ್ತೇದಾರ್, ಭೂತಪ್ಪ ದೇವರಮನಿ ಚಂದಪ್ಪ ಬಾವಿಮನಿ,ರಮೇಶ್ ಬಾಗೂರ್, ಶಿವಪ್ಪ ಮ್ಯಾಗೇರಿ , ಭೀಮಣ್ಣ ದಲಿತ ಯುವ ಮುಖಂಡ ರಾದ ವೆಂಕಟೇಶ್ ಮುಷ್ಟಳ್ಳಿ ಹೋಬಳಿ ಘಟಕದ ಅಧ್ಯಕ್ಷರಾದ ರಮೇಶ್ ಬಾವಿಮನಿ ರಾಮಣ್ಣ ಜಿಡಿ ರಮೇಶ್ ಗಾಜನದಿನ್ನಿ ಕುಮಾರ್ ಗ್ರಾಮ ಪಂಚಾಯತ್ ಸದಸ್ಯರು ಮೌನೇಶ್ ಯಲಗಟ್ಟಿ ಮುದುರಂಗಪ್ಪ ಮ್ಯಾಗೇರಿ ಮೌನೇಶ್ ಚಪ್ಪಳಕಿ ಶಿವ ಚಪ್ಪಳಕಿ ರಮೇಶ್ ಬಾಗುರ್. ವಿವಿಧ ಸಂಘಟನೆಗಳ ಮುಖಂಡರು ಯುವಕರು ಭಾಗವಹಿಸಿದರು

ಹಾಗೆಯೇ ದಲಿತ ಸಮಿತಿ ಮುಖಂಡರು, ಯುವಕರು ಹಾಗೂ ನೂರಾರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಂಬೇಡ್ಕರ್ ಅವರ ಸ್ಮರಣೆಯನ್ನು ಗೌರವಿಸಿದರು.

Leave a Reply

Your email address will not be published. Required fields are marked *