ಬಾಬಾ ಸಾಹೇಬ್ ರ ವಿಚಾರಗಳನ್ನು ತಿಳಿದುಕೊಳತ್ತಾ ಅವರೊಂದಿಗೆ ಅನುಸಂಧಾನವಾಗಬೇಕಾಗಿದೆ.ಎಂದು ನಗರದ ಎಲ್ ಬಿ ಕೆ ಪದವಿ ಪೂರ್ವ ನೊಬಲ್ ಪದವಿ ಮಹಾವಿದ್ಯಾಲಯ ಹಾಗೂ ಎನ್ ಎಸ್ ಎಸ್ ಘಟಕ ದಿಂದ ಆಯೋಜಿಸಿದ್ದ ಡಾ.ಅಂಬೇಡ್ಕರ್ ಅವರ ಜಯಂತಿಯಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತಾಡಿದರು.
ಇಂದು ಎಲ್ಕಡೆ ಕಾಟಾಚಾರದ ಸರಕಾರಿ ಜಯಂತಿಗಳನ್ನು ಆಚರಣೆ ಮಾಡುತ್ತಿರುವುದು ವಿಷಾಧಕರ .ಈ ಹಿಂದೆ ಇದ್ದ ದಲಿತ ಸಂಘಟನೆಗಳು ಅಂಬೇಡ್ಕರ್ ಅವರನ್ನು ಪರಿಯಿಸುವ ಕೆಲಸ ಮಾಡುತ್ತಿದ್ದವು. ಈ ಹಿಂದೆ ಶಿಕ್ಷಣ ವ್ಯವಸ್ಥೆಯಲ್ಲಿ ಎಲ್ಲಾ ಮಕ್ಕಳಿಗೆ ಸಾಮಾನತೆ ಅವಕಾಶ ಇರದೆ ತರಗತಿಯಲ್ಲಿ ಮೂರು ಸಾಲುಗಳಲ್ಲಿ ದಲಿತರು ತಾವು ತಗಿದುಕೊಂಡು ಬಂದ ಗೊಣಿಚೀಲ ಹಾಸಿಕೊಂಡು ಹೊರಗಡೆ ಕುಳಿತುಕೊಳ್ಳುವ ಆ ಕಾಲ ಇಂದು ಇಲ್ಲ ಕಾರಣ ಅಂಬೇಡ್ಕರ್ ಅವರ ಸಂವಿಧಾನವೆ ಕಾರಣ.ಇಂತಹ ವ್ಯವಸ್ಥೆಯಿಂದ ಈಗ ಅರಿವಿನ ಪ್ರಜ್ಞೆ ಬಂದಿದೆ.
ಸಮಾನತೆಯ ಸಮಾಜದ ಆಶಯಗಳನ್ನು ಕಾನೂನು ರೂಪದಲ್ಲಿ ಬಂದಿದರಿಂದ ಇಂದು ಸಮಸಮಾಜ ರೂಪಗೊಳ್ಳುತ್ತಿರವುದು ಆಶದಾಯಕವಾಗಿದೆ.
ಅಂಬೇಡ್ಕರ್ ಅವರ ಮೊಮ್ಮಗಳ ಮಗ ಚಿಂತಕರಾದ ತೆಲತುಂಬಡಿ ಅವರು ಅಂಬೇಡ್ಕರ್ ಕುರಿತು ಈ ಹಿಂದೆ ಇದ್ದ ಜಾತಿಯನ್ನು ಬಹಿರಂಗವಾಗಿ ಆಚರಿಸುವ ಕಾಲಘಟ್ಟ ಇಂದು ಮಸಕು ಹಾಕಿಕೊಂಡು ಆಚರಿಸುವಷ್ಟುರ ಮಟ್ಟಿಗೆ ಸಮಾಜ ಬದಾಲಾಯಿಸಿದ್ದಾರೆ.ಇದು ಬದಲಾವಣೆ. ಪ್ರತಿ ದರ್ಮದಲ್ಲಿಯೂ ಇಂತಹ ಅಸಮಾನತೆಯಿಂದ ಬಳಲುತಿವೆ. ಈ ದೇಶದಲ್ಲಿ ಓಟ ನೀಡಿ ಪ್ರಜಾಸತ್ತಾತ್ಮಕ ಸಾಮಾಜ ಕಟ್ಟಿದವರು.ಆರ್ಥಿಕ ಅಸಮಾನತೆ ತೊಗಲಿಸಲು ಬೇರೆ ದೆಶದಿಂದ ಎರವಲು ಪಡೆದುಕೊಂಡು ಆರ್ಥಿಕ ಶಕ್ತಿ ತುಂಬಿದರು.ಹೆಣ್ಣಿಗೆ ಆಸ್ತಿ ಹಕ್ಕು ದಕ್ಕಿಸಿಕೊಟ್ಡು ಪುರುಷ ಮಹಿಳೆ ಎಂಬ ಬೇದವನ್ನು ದೂರ ಇಟ್ಟಿದ್ದಾರೆ.
ಮೀಸಲಾತಿ ವಿಷಯವಾಗಿ ದಲಿತ ಹಿಂದುಳಿದ ಅಲೆಮಾರಿಗಳು ಮಾತ್ರ ಫಲನಾಉಬವಿಗಳಲ್ಲ .ಎಲ್ಲಾ ಸಮುದಾಯದ ಜನತೆಯೂ ಮೀಸಲಾತಿ ಪಡೆಯುತ್ತಿದ್ದಾರೆ. ಪ್ರಭುತ್ವ ಮತ್ತು ಅಲ್ಪಸಂಖ್ಯಾತರು ಕೃತಿಯಲ್ಲಿ ಭೂಮಿ ಒಳಗೊಂಡಂತೆವಿ ಇನ್ನಿತರ ಸೇವಾ ಕ್ಷೇತ್ರಗಳು ಖಾಸಗಿಯಲ್ಲಿ ಇದ್ದವು ಆದರೆ ಇಂದು ರಾಷ್ಟ್ರಿಕರಣವಾಗಿತ್ತಿರುವುದು ಆಶಯದಾಯಕವಾಗಿವೆ.ಜಾಗತೀಕರಣ, ಖಾಸಗೀಕರಣ, ಉದಾರೀಕರಗಳ ಪ್ರಭಾವಕ್ಕೊಳಾಗಾಗಿ ಇಂದು ಎಲ್ಲಾ ಕ್ಷೇತ್ರಗಳು ಖಾಸಗೀಕರಣ ಮಾಡಿ ಜನ ಸಾಮನ್ಯರ ಜೀವನ ದುರ್ಬಲವಾಗಿಸಿವೆ.
ಇಂದು ದಲಿತ ಅಲೆಮಾರಿ ಹಿಂದುಳಿದ ಅಲ್ಪಸಂಖ್ಯಾತ ಜನರನ್ನು ಮನಷ್ಯರಂತೆ ಕಾಣುವು ಅಗತ್ಯತವಿದೆ.
ಈ ಸಂದರ್ಭದಲ್ಲಿ ಕಾಲೇಜು ಅದ್ಯಕ್ಷರಾದ ಪರಶುರಾಮ ಮಲ್ಲಾಪುರ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕಾರ್ಯದರ್ಶಿಯಾದ ಡಾ.ಅರುಣಕುಮಾರ ಬೇರ್ಗಿ ಖಜಾಂಚಿಯಾದ ಜಯಪ್ಪ ಗೊರೇಬಾಳ ನೊಬೆಲ್ ಪ್ರಾಂಶುಪಾಲರಾದ ಶ್ರೀಮತಿ ಐಶ್ವರ್ಯ ದಳವಾಯಿ,ಎಲ್ ಬಿ ಕೆ ಕಾಲೇಜಿನ ಪ್ರಾಂಶುಪಾಲರಾದ ಶೀವುಕುಮಾರ ಬಿಂಗಿ ಹಾಗೂ ಎನ್ ಎಸ್ ಎಸ್ ಅಧಿಕಾರಿಗಳಾದ ಹೊನ್ನಪ್ಪ ಬೆಳಗುರ್ಕಿ ಓದು ಬಳಗದ ಸಂಚಲಾಕರಾದ ವಸಂತಕುಮಾರ ನುಡಿ ಕೂಟದ ಸಂಚಲಕಾರದ ಜ್ಯೋತಿ ವೇದಿಕೆಯ ಮೇಲಿದ್ದರು. ಉಪನ್ಯಾಸಕರಾದ ಬಸವರಾಜ ದೇವಿಪುರ ಮೌಲಸಾಬ ಪಂಚಾಕ್ಷರಿಯ್ಯ ನಂದಿನಿ ಅಶ್ವಿನಿ ಉಪಸ್ಥಿತಿ ಇದ್ದರು.ಕು ಪಾರ್ವತಿ ನಿರೂಪಸಿದರು


