ಬಲಿಷ್ಠ ಸಂವಿಧಾನ ಹೊಂದಿದ ಭಾರತ ದೇಶದ ಗಣತಂತ್ರ ವ್ಯವಸ್ಥೆಯಡಿ ಸಮಾಜದಲ್ಲಿ ಸಮಾನತೆಯ ತಳಹದಿಯ ಮೇಲೆ ನಾವೆಲ್ಲರೂ ಒಂದುಗೂಡಿ ಸಂವಿಧಾನ ಶಿಲ್ಪಿ ಡಾ ಬಿ. ಆರ್‌. ಅಂಬೇಡ್ಕರ್ ರವರ ಜಯಂತಿಯನ್ನು ಸಾರ್ಥಕಗೊಳಿಸುವ ಪ್ರತಿಜ್ಞೆಯನ್ನು ಮಾಡೋಣವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸುರೇಂದ್ರಬಾಬು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ಭಾರತ‌ರತ್ನ, ಸಂವಿಧಾನ ಶಿಲ್ಪಿ ಡಾ ಬಿ. ಆರ್‌. ಅಂಬೇಡ್ಕರ್ ರವರ 135 ನೇಯ ಜಯಂತ್ಯೊತ್ಸವದಲ್ಲಿ ಮಾತನಾಡುತ್ತಾ, ಸಮಾಜಿಕ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಪೂರ್ವದ ಕಾಲಘಟ್ಟಕ್ಕೂ ಇಂದು ಸಾಕಷ್ಟು ಬದಲಾವಣೆಯನ್ನು ಎಲ್ಲರೂ ನೋಡುತ್ತಿದ್ದಾರೆ, ಅಲ್ಲದೆ ಇಂದು ಆರೋಗ್ಯ ಕ್ಷೇತ್ರದಲ್ಲಿ ನಗರ ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆಯನ್ನು ಎಲ್ಲರಿಗೂ ನೀಡುತ್ತಿರುವ ಹೆಮ್ಮೆಯ ವಿಷಯವಾಗಿದೆ. ಇದನ್ನು ಯಾವುದೇ ರಾಜಿಯಿಲ್ಲದೆ ಮುಂದುವರೆಸಿಕೊಂಡು ಹೋಗುವ ಹೊಣೆಗಾರಿಕೆಯನ್ನು ಪ್ರತಿಯೊಬ್ಬರು ನಿರ್ವಹಿಸೊಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್‌ಸಿಹೆಚ್‌ ಅಧಿಕಾರಿ ಡಾ ನಂದಿತಾ ಎಮ್‌ ಎನ್‌, ಜಿಲ್ಲಾ ಸರ್ವೆಕ್ಷಣಾಧಿಕಾರಿ ಹಾಗೂ ಡಿಎಮ್‌ಓ ಡಾ ಗಣೇಶೆ ಕೆ, ತಾಲೂಕಾ ಆರೋಗ್ಯಾಧಿಕಾರಿ ಡಾ ಅಮೃತ್‌, ಮನೋರೋಗ ತಜ್ಞರ ಡಾ ಮನೋಹರ ಪತ್ತಾರ, ಸಹಾಯಕ ಆಡಳಿತ ಆಧಿಕಾರಿ ಶಹಜಾಹನ್, ಡಿಹೆಚ್‌ಇಓ ಈಶ್ವರ ಹೆಚ್‌ ದಾಸಪ್ಪನವರ, ಕಛೇರಿ ಅಧೀಕ್ಷಕ ಶ್ರೀಧರ್‌ ಕುಲಕರ್ಣಿ, ಆಪ್ತ ಸಹಾಯಕರಾದ ಲೇಪಾಕ್ಷಯ್ಯ ಸ್ವಾಮಿ, ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಸುರೇಶ್‌, ತಾಯಪ್ಪ, ಸೇರಿದಂತೆ ಎಲ್ಲ ವಿಭಾಗಗಳ ಜಿಲ್ಲಾ ಮಟ್ಟದ ಸಲಹೆಗಾರರು, ಸಂಯೋಜಕರು, ಸಿಬ್ಬಂದಿಯವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *