ಸಿಂಧನೂರು – ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಹಾವೇರಿಯ ಅಗಡಿ ಅಕ್ಕಿಮಠದ ಪರಮ ಪೂಜ್ಯರಾದ ಡಾ. ಗುರುಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಹಾವೇರಿಯ ಅಗಡಿ ಗ್ರಾಮದ ಅಕ್ಕಿಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಗುರುಲಿಂಗ ಮಹಾಸ್ವಾಮಿಗಳು ಅವರಿಗೆ ಆಶ್ರಮದ ವತಿಯಿಂದ ಗೌರವ ಸಮರ್ಪಣೆ ಮಾಡಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಡಾ. ಗುರುಲಿಂಗ ಮಹಾಸ್ವಾಮಿಗಳು ಇಂದು ಕಾರುಣ್ಯ ಆಶ್ರಮಕ್ಕೆ ಭೇಟಿ ನೀಡಿದ್ದು ಬಹಳ ಸಂತೋಷವನ್ನುಂಟು ಮಾಡಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶ ಆಶಯದಂತೆ ಕಾರುಣ್ಯಾಶ್ರಮದ ಸೇವೆ ಜರುಗುತ್ತಿದೆ. ಅವರ ಸಮಾನತೆಯ ಹಾದಿಯಲ್ಲಿ ಬೆಂದವರು ಬಂಧುಗಳು ನೊಂದವರು ನಮ್ಮವರು ಎನ್ನುವ ಹಲವಾರು ಸಂದೇಶಗಳನ್ನು ಮೈಗೂಡಿಸಿಕೊಂಡು ಬಡ ಜಂಗಮರಾದ ಹರೇಟನೂರು ಗ್ರಾಮದ ಅಮರಯ್ಯ ಸ್ವಾಮಿಯವರ ಸೇವೆ ಶ್ಲಾಘನೀಯವಾದುದು. ಸಮಾಜದ ಹಲವಾರು ಅವಮಾನಗಳ ಮಧ್ಯೆ ಅರಳಿದ ಜ್ಯೋತಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನದಂತೆ ಈ ಕಾರುಣ್ಯ ಸಂಸ್ಥೆಯು ಕೂಡ ಹಲವಾರು ಅವಮಾನ ಅಪಪ್ರಚಾರ ಟೀಕೆ ಟಿಪ್ಪಣಿಗಳ ಮಧ್ಯೆ ಸತ್ಯ ಪ್ರಾಮಾಣಿಕ ಹಾದಿಯಲ್ಲಿ ಸೇವೆ ಮಾಡುತ್ತಿರುವುದು ಸಮಾಜಕ್ಕೆ ಆದರ್ಶವಾಗಿದೆ.ಪ್ರತಿಯೊಬ್ಬರೂ ಸಹಾಯ ಸಹಕಾರ ಮಾಡಬೇಕು. ಇವತ್ತಿನ ಕಾಲಮಾನದಲ್ಲಿ ಸರ್ಕಾರ ಬರೀ ಸಮುದಾಯಗಳನ್ನು ಕಟ್ಟಿಕೊಟ್ಟು ಅಲ್ಲಿ ಅನೈತಿಕ ಚಟುವಟಿಕೆಗಳನ್ನು ಮಾಡಲು ಅನುಕೂಲ ಮಾಡಿಕೊಡುತ್ತಿದೆ. ಒಮ್ಮೆ ಕಾರುಣ್ಯ ಆಶ್ರಮದ ಬಗ್ಗೆ ಸರ್ಕಾರವು ಗಮನಹರಿಸಿ ಸ್ವಂತ ಜಾಗ ಅನುದಾನ ನೀಡಿದರೆ ಸಮಾಜದಲ್ಲಿ ಇನ್ನೂ ಹೆಚ್ಚಿನ ಜನಪರ ಅನಾಥಪುರ ಸಮಾಜಪರ ಕಾರ್ಯಗಳು ನೆರವೇರುವುದು. ಮುಂದಿನ ದಿನಮಾನಗಳಲ್ಲಿ ನಮ್ಮ ಅಕ್ಕಿಮಠ ಹಾಗೂ ಹಾವೇರಿಯ ಸಮಸ್ತ ನಾಗರಿಕರ ನಮ್ಮ ಭಕ್ತವೃಂದದವರ ಸಹಾಯ ಸಹಕಾರ ನಿರಂತರವಾಗಿ ಕಾರುಣ್ಯ ಆಶ್ರಮಕ್ಕೆ ದೊರೆಯುತ್ತದೆ ಎಂದು ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಸಂಸ್ಥಾಪಕರಾದ ವೇ.ಮೂ. ಅಮರಯ್ಯ ಸ್ವಾಮಿ ಹಿರೇಮಠ. ಹಾಗೂ ಬಸವ ಬಳಗದ ಶರಣರಾದ ಬಸವಲಿಂಗಪ್ಪ ಬಾದರ್ಲಿ. ಶರಣ ಚಂದ್ರು ಹುನಗುಂದ. ಶರಣ ಸಂಗಮೇಶ ಇಲಕಲ್ಲ. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಮತ್ತು ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತಾ ಮಲದ ಗುಡ್ಡ. ಸಿದ್ದಯ್ಯ ಸ್ವಾಮಿ.ಮರಿಯಪ್ಪ. ಜ್ಯೋತಿ. ಮೀನಾಕ್ಷಮ್ಮ.ಲಕ್ಷ್ಮಿ. ಶರಣು ಸ್ವಾಮಿ.ಬಸವ ಸ್ವಾಮಿ. ಹಾಗೂ ಅನೇಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *