ತಾಳಿಕೋಟಿ: ಪಟ್ಟಣದ ಎಸ್ ಕೆ ಶಿಕ್ಷಣ ಮಹಾವಿದ್ಯಾಲಯದಿಂದ ಸ್ಥಳೀಯ ಆಶ್ರಯ ಕಾಲೊನಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ (NSS) ವಿಶೇಷ ಶಿಬಿರವು ನಾಲ್ಕನೇ ದಿನ ಗುರುವಾರ ಸಂಭ್ರಮದಿಂದ ಆರಂಭಗೊಂಡಿತು.
ಶಿಬಿರದ ಅಂಗವಾಗಿ ಮುಂಜಾನೆ ಎನ್.ಎಸ್.ಎಸ್ ಗೀತೆಯ ಗಾಯನ ಹಾಗೂ ಯೋಗಾಭ್ಯಾಸ ನಡೆಸಲಾಯಿತು. ಬಳಿಕ ವಿದ್ಯಾರ್ಥಿಗಳು ನಗರದ ಆಶ್ರಯ ಕಾಲೋನಿ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನದಲ್ಲಿ ತೊಡಗಿಸಿಕೊಂಡರು.
ಶಿಬಿರದ ನಾಲ್ಕನೇ ದಿನದ ಮೂರನೇ ಉಪನ್ಯಾಸ ಮಾಲಿಕೆಯಲ್ಲಿ “ನಿತ್ಯ ಜೀವನದಲ್ಲಿ ಪರಿಸರ” ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುಖ್ಯ ಉಪನ್ಯಾಸಕರಾದ ಎಸ್ ಕೆ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಕಿಶೋರ್ ಕುಮಾರ್ ಅವರು ಮಾತನಾಡಿ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ ಒಂದು ಸುಂದರ ಪರಿಸರ ಇದ್ದಂತೆ ಅದು ಒಬ್ಬರ ಮೇಲೆ ಒಂದೊಂದು ರೀತಿಯ ಪ್ರಭಾವವನ್ನು ಬೀರುತ್ತದೆ ಪ್ರಕೃತಿಯು ಶಿಕ್ಷಕನಿದ್ದಂತೆ ಅದು ನಮ್ಮೆಲ್ಲರನ್ನ ಅಪ್ಪಿಕೊಂಡು ಸಮನಾಗಿ ಕಾಣುತ್ತದೆ ಪರಿಸರವನ್ನು ಹಾಳು ಮಾಡದೆ ಅದನ್ನು ಸಂರಕ್ಷಿಸಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ಕೆ. ಸಿ. ಸಜ್ಜನ ನಿರ್ದೇಶಕರು ವೀ.ವಿ .ಸಂಘ ತಾಳಿಕೋಟಿ ಅವರು ಮಾತನಾಡಿ ಪರಿಸರನಾಶವು ನಮ್ಮ ಜೀವನಕ್ಕೆ ಅಪಾಯಕಾರಿಯಾಗಿದ್ದು ಪ್ರಶಿಕ್ಷಣಾರ್ಥಿಗಳು ನಿತ್ಯ ಜೀವನದಲ್ಲಿ ಪರಿಸರ ಕಾಪಾಡಿಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದ ಮಾರ್ಗದರ್ಶಕರಾದ ಸುರೇಶ ಬಡಿಗೇರ ಅವರು ಭವಿಷ್ಯದ ದಿನಮಾನಗಳಲ್ಲಿ ಪರಿಸರ ನಾಶದಿಂದ ಸದೃಢ ಜೀವನ ಸಾಧ್ಯವಿಲ್ಲ ಆದ್ದರಿಂದ ಪ್ರತಿ ನಾಗರಿಕರು ಮರ ಬೆಳೆಸುವ ಮೂಲಕ ಪರಿಸರ ರಕ್ಷಣೆ ಮತ್ತು ಪಾಲನೆ ಪ್ರತಿ ಮನುಷ್ಯನ ಕರ್ತವ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಆರ್.ಎಂ. ಬಂಟನೂರ ಅವರು ಮಾತನಾಡಿ, ಭವಿಷ್ಯತ್ತಿನ ದಿನಮಾನಗಳಲ್ಲಿ ಪರಿಸರ ಉತ್ತಮ ಮಾಡಬೇಕಾದರೆ ಇಂದು ನಾವೆಲ್ಲ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು ಪರಿಸರ ಸಂರಕ್ಷಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ಇತರ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಬೇಕೆಂದು ಪ್ರಶಿಕ್ಷಣಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ವೀ.ವಿ.ಸಂಘದ ವೈಸ ಚೇರಮನ್ನರು ಹಾಗೂ ಎಸ್. ಕೆ. ಶಿಕ್ಷಣ ಮಹಾವಿದ್ಯಾಲಯದ ಚೇರಮನ್ನರಾದ ಕೆ.ಎಸ್ ಮುರಾಳ ಮತ್ತು ಕಾರ್ಯದರ್ಶಿಗಳಾದ ಎಂ.ಎಸ್. ಸರಶೆಟ್ಟಿ ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಜಯಶ್ರೀ ಮತ್ತು ತಂಡ ಪ್ರಾರ್ಥನೆ ನೆರವೇರಿಸಿದರು. ಕಲ್ಪನಾ ತಂಡ ಎನ್.ಎಸ್.ಎಸ್ ಗೀತೆಯನ್ನು ಹಾಡಿದರು. ನಕ್ಷತ್ರ ಅಚನೂರು ಸ್ವಾಗತಿಸಿ ಪರಿಚಯಿಸಿದರು. ಸೌಜನ್ಯ ಪುಷ್ಪಾರ್ಪಣೆ ನೆರವೇರಿಸಿದರು. ಮಲ್ಲಿಕಾರ್ಜುನ ವಂದನಾರ್ಪಣೆ ಸಲ್ಲಿಸಿದರು. ಕೀರ್ತಿ ಹಂದ್ರಾಳ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಾದ ಎ.ಎ. ಗಂಗನಗೌಡರ, ಕಾರ್ಯದರ್ಶಿಗಳಾದ ರೇಷ್ಮಾ ಚಲವಾದಿ, ಪ್ರಥಮ ವರ್ಷದ ವರ್ಗ ಪ್ರತಿನಿಧಿ ಯಮನಪ್ಪ ಹಾಗೂ ಎನ್.ಎಸ್.ಎಸ್ ಶಿಬಿರಾರ್ಥಿಗಳು ಮತ್ತು ಮಹಾವಿದ್ಯಾಲಯದ ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *