ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಸರಕಾರದ ವಿವಿಧ ಜಯಂತಿಗಳ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಮಾತನಾಡಿ ಏ.20 ರಂದು ಬಸವಜಯಂತಿ ಅಂಗವಾಗಿ ತಾಲೂಕು ಆಡಳಿತ ಹಾಗೂ ಅಖಿಲಭಾರತ ವೀರಶೈವ ಲಿಂಗಯಾತ ಮಹಾಸಭಾ, ತಾಲೂಕು ವೀರಶೈವ ಲಿಂಗಾಯತ ಸಮಾಜ, ಬಸವಕೇಂದ್ರ ಸಹಯೋಗದಲ್ಲಿ ಪಟ್ಟಣದ ಬಸವವೃತ್ತದಿಂದ ತಹಶೀಲ್ದಾರ್ ಕಚೇರಿಯವರೆಗೆ ವಚನ ಗಾಯನ ಮೂಲಕ ವಿವಿಧ ಕಲಾತಂಡಗಳೊAದಿಗೆ ಶ್ರೀ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಶಾಸಕ ಹಂಪಯ್ಯನಾಯಕ ನೆತೃತ್ವದಲ್ಲಿ ಮೆರವಣಿಗೆ ನಡೆಸಲಾಗುವುದು ನಂತರ ವೇದಿಕೆಯಲ್ಲಿ ಬಸವಣ್ಣನವರ ಜೀವನ ಹಾಗೂ ತತ್ವ ಸಂದೇಶಗಳ ಬಗ್ಗೆ ಉಪನ್ಯಾಸಕರಿಂದ ಉಪನ್ಯಾಸ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಗಣ್ಯರಿಗೆ ಸನ್ಮಾನ ,ವಚನ ಕಂಠಪಾಟ ಸ್ಪರ್ಧೇ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು. 21 ರಂದು ಶ್ರೀ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮವನ್ನು ತಹಶೀಲ್ದಾರ್ ಕಚೇರಿಯಲ್ಲಿ ವಿಪ್ರ ಸಮುದಾಯದವರೊಂದಿಗೆ ಆಚರಿಸಲಾಗುವುದು. ಶ್ರೀ ಶಂಕರಾಚಾರ್ಯರ ಜೀವನ ಹಾಗೂ ತತ್ವ ಸಂದೇಶಗಳ ಬಗ್ಗೆ ಉಪನ್ಯಾಸಕರಿಂದ ಉಪನ್ಯಾಸ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಗುವುದು. ಏ.23 ರಂದು ಶ್ರೀ ಭಗೀರಥ ಜಯಂತಿ ಅಂಗವಾಗಿ ತಹಶೀಲ್ದಾರ್ ಕಚೇರಿಯಲ್ಲಿ ಶ್ರೀ ಭಗೀರಥ ಮಹಾರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಗುವುದು. ಸರಕಾರದ ಜಯಂತಿ ಅಗಿರುವುದರಿಂದ ಮೂವರು ಮಹಾನಿಯರ ಜಯಂತಿಗಳನ್ನು ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸಿ ತಾಲೂಕು ಆಡಳಿತ ವತಿಯಿಂದ ನಡೆಯುವ ಜಯಂತಿಗಳಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಆಧಿಕಾರಿಗಳು ಭಾಗವಹಿಸಬೇಕು ಜಯಂತಿಗಳನ್ನು ಆರ್ಥಪುರ್ಣವಾಗಿ ಆಚರಿಸುವುದಕ್ಕೆ ಸಮಾಜದ ಎಲ್ಲಾ ಸಮುದಾಯದವರು ಸಹಕಾರ ನೀಡಬೇಕು ಎಂದು ಕೋರಿದರು.
ಸಭೆಯಲ್ಲಿ ಅಖಿಲಭಾರತ ವೀರಶೈವ ಲಿಂಗಯಾತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷರಾದ ಅರುಣಕುಮಾರಚಂದಾ , ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಹರಿಹರ ಪಾಟೀಲ್ ,ಕೇದರನಾಥ,ಡಾ.ವಿಜಯರಾವ್ ಕುಪನೇಶಿ ಮಾತನಾಡಿದರು.
ಗ್ರೇಡ್-2 ತಹಶಿಲ್ದಾರ್ ಅಬ್ದುಲ್ ವಾಹಿದ್, ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ದೇವಮಾನೆ, ಪಿ.ಐ, ಸೋಮಶೇಖರ ಎಸ್. ಕೆಂಚರೆಡ್ಡಿ, ತಾ.ಆರೋಗ್ಯಧಿಕಾರಿ ಡಾ.ಶರಣಬಸವರಾಜ, ಮುಖಂಡರಾದ ಜಾನೇಕಲ್ ನರಸಿಂಹಜೋಶಿ, ಶ್ರೀಧರ ಮಾಸ್ಟರ್, ಪ್ರಹ್ಲಾದ್ ಕುರ್ಡಿ, ವರದರಾಜ ಕುಲಕರ್ಣಿ,ನೀರಮಾನ್ವಿ ನರಸಿಂಹ ,ಜಯಾಚಾರ್ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಇನ್ನಿತರರು ಇದ್ದರು.
13-ಮಾನ್ವಿ-1:
ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಸರಕಾರದ ವಿವಿಧ ಜಯಂತಿಗಳ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಮಾತನಾಡಿದರು.

Leave a Reply

Your email address will not be published. Required fields are marked *