ಮಸ್ಕಿ: ಲಿಂಗಸುಗೂರು ಪಟ್ಟಣದಲ್ಲಿ ಏ.18 ರಂದು ನಡೆಯಲಿರುವ ಕೇಂದ್ರದ ಮಾಜಿ ಮಂತ್ರಿ ಬಸವರಾಜ ಪಾಟೀಲ್ ಅನ್ವರಿ ಅವರ ಅಭಿನಂದನಾ ಕಾರ್ಯಕ್ರಮ ಹಾಗೂ ಅನ್ವರಿ ಅಸೀಮ ಗ್ರಂಥ ಬಿಡುಗಡೆ ಸಮಾರಂಭವನ್ನು ಯಶಸ್ವಿಗೊಳಿಸಬೇಕು ಎಂದು ಯುವ ಮುಖಂಡ ಸೂಗಣ್ಣ ಬಾಳೆಕಾಯಿ ಮನವಿ ಮಾಡಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರಯ, ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ನೇತ್ರತ್ವದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರದ ರಾಜ್ಯಖಾತೆ ಸಚಿವ ವಿ. ಸೋಮಣ್ಣ ಚಾಲನೆ ನೀಡಲಿದ್ದಾರೆ. ಸಂಸದ ಜಗದೀಶ ಶೆಟ್ಟರ್, ಕಾನೂನು, ಸಂಸದೀಯ ಸಚಿವ ಎಚ್.ಕೆ. ಪಾಟೀಲ್, ಶಾಸಕ ಮಾನಪ್ಪ ವಜ್ಜಲ್ ಸೇರಿದಂತೆ ನಾನಾ ಮಠಾಧೀಶರು ಭಾಗವಹಿಸಲಿದ್ದಾರೆ. ಬಸವರಾಜ ಪಾಟೀಲ್ ಅವರು ೮೪ ವರ್ಷ ಪೊರೈಸಿರುವ ಹಿನ್ನೆಲೆಯಲ್ಲಿ ಏ.೧೬ ರಂದು ಅವರ ಸ್ವಗ್ರಾಮ ಅನ್ವರಿಯಲ್ಲಿ ಸಹಸ ಚಂದ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ನಾಡಿನ ೯೦ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ಪುರಸಭೆ ನಾಮ ನಿರ್ದೆಶನ ಸದಸ್ಯ ಕೃಷ್ಣ ಚಿಗರಿ, ಎಂ. ಅಮರೇಶ, ಸುರೇಶ ಬ್ಯಾಳಿ ಇದ್ದರು

Leave a Reply

Your email address will not be published. Required fields are marked *