ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಪಕ್ಷಿ ಪ್ರೇಮಿ ಸಲಾವುದ್ದೀನ್ ಸಹಯೋಗದಲ್ಲಿ ಪಕ್ಷಿಗಳಿಗೆ ನೀರುಣಿಸುವ ತೊಟ್ಟಿಗಳ ವಿತರಣೆ ಕಾರ್ಯಕ್ರಮವನ್ನು ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ರವರು ಪಕ್ಷಿಗಳಿಗೆ ನೀರುಣಿಸುವ ತೊಟ್ಟಿಗಳನ್ನು ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ಈ ಬಾರಿ ಬೇಸಿಗೆಯಲ್ಲಿ ಹೆಚ್ಚಿನ ಉಷ್ಣಾಂಶ ದಾಖಲಾಗಿರುವುದರಿಂದ ಜನರಿಗಾಗಿ ಅರವಟಿಗೆಗಳನ್ನು ಪ್ರಾರಂಭಿಸಲಾಗಿದು ಅದರಂತೆ ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸವಾಗಿರುವ ಪಕ್ಷಿಗಳಿಗೂ ಕೂಡ ನೀರಿನ ಅವಶ್ಯಕತೆ ಇರುವುದರಿಂದ ಸರಕಾರಿ ಕಚೇರಿಗಳ ಆವರಣದಲ್ಲಿ ಹಾಗೂ ಮನೆಗಳ ಛಾವಣಿಗಳ ಮೇಲೆ ಬೇಸಿಗೆ ಮುಗಿಯುವವರೆಗೂ ಪಕ್ಷಿಗಳಿಗೆ ನೀರುಣಿಸುವ ತೊಟ್ಟಿಗಳನ್ನು ಕಟ್ಟಿ ಅವುಗಳಿಗೆ ನಿತ್ಯ ನೀರು ಹಾಗೂ ಆಹಾರ ಪದಾರ್ಥಗಳನ್ನು ನೀಡುವುದರಿಂದ ಸಾಕಷ್ಟು ಪಕ್ಷಿಗಳ ಜೀವಗಳನ್ನು ಉಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪಕ್ಷಿ ಪ್ರೇಮಿ ಸಲಾವುದ್ದೀನ್ ಮಾತನಾಡಿ ಪ್ರಕೃತಿಯಲ್ಲಿನ ಪ್ರತಿಯೊಂದು ಜೀವಿಗೂ ಕೂಡ ತನ್ನದೆ ಆದ ಮಹಾತ್ವವಿದೆ ಪರಿಸರ ಸಮಾತೋಲನದಲ್ಲಿ ಪಕ್ಷಿಗಳ ಪಾತ್ರ ಬಹುಳ ಪ್ರಮುಖವಾಗಿರುವುದರಿಂದ ಅಳುವಿನಂಚಿನಲ್ಲಿರುವ ಪಕ್ಷಿಗಳನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಪಕ್ಷಿಗಳು ತಮ್ಮಗೆ ಬೇಕಾದ ಆಹಾರ ಮತ್ತು ನೀರನ್ನು ತಾವೆ ಹುಡಿಕಿಕೊಳ್ಳುತ್ತವೆ ಅದ್ದರೆ ಬೇಸಿಗೆಯಲ್ಲಿ ನೀರಿನ ಮೂಲಗಳು ಬತ್ತುವುದರಿಂದ ಹಾಗೂ ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳುವುದರಿಂದ ಪಕ್ಷಿಗಳಿಗೆ ಅಗತ್ಯವಾದ ನೀರು ಹಾಗೂ ಆಹಾರ ಸುಲಾಭವಾಗಿ ದೊರೆಯುವುದಿಲ್ಲ ಸಾಕಷ್ಟು ಸಣ್ಣ ಸಣ್ಣ ಹಕ್ಕಿಗಳು ಕುಡಿಯುವುದಕ್ಕೆ ನೀರು ಸಿಗದೆ ತಮ್ಮ ಜೀವವನ್ನು ಬಿಡುತ್ತವೆ ಅದ್ದರಿಂದ ಬೇಸಿಗೆ ಮುಗಿಯುವವರೆಗೂ ಪಕ್ಷಿಗಳಿಗೆ ನೀರು ಹಾಗೂ ಆಹಾರದ ವ್ಯವಸ್ಥೆ ಮಾಡುವುದು ಅಗತ್ಯವಾಗಿರುವುದರಿಂದ ಪ್ರತಿಯೊಂದು ಮನೆಗಳ ಆವರಣದಲ್ಲಿ ಪಕ್ಷಿಗಳಿಗೆ ಸ್ವಲ್ಪ ನೀರಿನ ವ್ಯವಸ್ಥೆ ಮಾಡುವುದು ಅಗತ್ಯ ಎಂದು ತಿಳಿಸಿದರು.
ಗ್ರೇಡ್-2 ತಹಶಿಲ್ದಾರ್ ಅಬ್ದುಲ್ ವಾಹಿದ್, ಪುರಸಭೆ ಮುಖ್ಯಾಧಿಕಾರಿ ಪರಶುರಾಮ್ ದೇವಮಾನೆ, ಪಿ.ಐ, ಸೋಮಶೇಖರ ಎಸ್. ಕೆಂಚರೆಡ್ಡಿ, ತಾ.ಆರೋಗ್ಯಧಿಕಾರಿ ಡಾ.ಶರಣಬಸವರಾಜ, ತಾ.ಪಶು ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಬಸವರಾಜ ಹಿರೇಮಠ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಪಕ್ಷಿಗಳಿಗೆ ನೀರುಣಿಸುವ ತೊಟ್ಟಿಗಳ ವಿತರಣೆ ಮಾಡಲಾಯಿತು.
13-ಮಾನ್ವಿ-2:
ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಪಕ್ಷಿಗಳಿಗೆ ನೀರುಣಿಸುವ ತೊಟ್ಟಿಗಳ ವಿತರಣೆ ಮಾಡಲಾಯಿತು.

