ಸಿಂಧನೂರಿನಲ್ಲಿ ಫುಟ್ ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿ, ಈಗಾಗಲೇ ಒಂದೂವರೆ ವರ್ಷವೇ ಕಳೆದಿದೆ. ಆದರೂ ಇಲ್ಲಿನ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ, ಸರ್ಕಾರವಾಗಲಿ, ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ ಯಾವುದೇ ಕ್ರಮ ಕೈಗೊಳ್ಳದೆ, ವ್ಯಾಪಾರಿಗಳನ್ನು ಬೀದಿ ತಳ್ಳಿದ್ದಾರೆಂದು ಡಿ.ಎಚ್.ಪೂಜಾರ್ ಹೇಳಿದರು.
ನಗರದ ಗಂಗಾವತಿ ರಸ್ತೆಯ ತೋಟಗಾರಿಕೆ ಇಲಾಖೆ ಮುಂಭಾಗದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಹೋರಾಟ ಸಮಿತಿ ವತಿಯಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಮಾತನಾಡಿದ ಅವರು, ಅಂದು ಪುಟ್ ಪಾತ್ ತೆರವು ಗೊಳಿಸಿದ ಕಾರಣ ಬೀದಿ ಬದಿ ವ್ಯಾಪಾರಸ್ಥರು ಬೀದಿಗೆ ಬಿದ್ದಿದ್ದಾರೆ. ಅವರ ಜೀವನಕ್ಕೆ ನೆಲೆ ಇಲ್ಲದಂತಾಗಿದ್ದು, ಜಿಲ್ಲಾಡಳಿತವು ವ್ಯಾಪಾರಸ್ಥರ ಜೀವನಕ್ಕೊಂದು ಭದ್ರತೆ ಒದಗಿಸಲು ಮುಂದಾಗಬೇಕು ಎಂದು ಸೋಮವಾರ ಪ್ರತಿಭಟನೆ ನಡೆಸಿದರು.
ಬೀದಿ ಬದಿ ವ್ಯಾಪಾರಕ್ಕೆ ಕಡಿವಾಣ ಹಾಕಿದ ತಾಲೂಕು ಆಡಳಿತ ಹಾಗೂ ಶಾಸಕರು ಈಗ ಮೌನಕ್ಕೆ ಜಾರಿದ್ದಾರೆ.
ನಗರದಲ್ಲಿ ಮುಖ್ಯ ರಸ್ತೆಯ ಮಧ್ಯೆ ಭಾಗದಿಂದ 21 ಮೀಟರ್ ಇರುವ ಎಲ್ಲಾ ಕಟ್ಟಡಗಳನ್ನು ತೆರವು ಮಾಡಬೇಕು ಎಂಬ ಉಚ್ಚ ನ್ಯಾಯಾಲಯ ಮತ್ತು ಭೂ ಕಬಳಿಕೆ ನಿಷೇಧದ ಆದೇಶವಿದ್ದರೂ ಸಹ ಅದನ್ನು ತಾಲೂಕು ಮತ್ತು ಜಿಲ್ಲಾಡಳಿತ ಉಲ್ಲಂಘಿಸಿದೆ. ಕಳೆದ ಜನವರಿ ತಿಂಗಳಲ್ಲಿ ಸಿಂಧನೂರು ನಗರಕ್ಕೆ ಸಿಎಂ ಸಿದ್ದರಾಮಯ್ಯನವರು ಆಗಮಿಸಿದಾಗ ಪ್ರತಿಭಟನೆ ಹಿಂಪಡೆಯಿರಿ ನನಗೆ ಒಂದು ತಿಂಗಳ ಕಾಲವಕಾಶ ಕೊಡಿ, ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಸೂಕ್ತ ಜಾಗ ಒದಗಿಸಿಕೊಡುವ ಭರವಸೆ ನೀಡಿದ್ದರು.
ಈಗ ಅವರು ಭರವಸೆ ಕೊಟ್ಟು ಮೂರು ತಿಂಗಳು ಕಳೆದರೂ ಕೂಡ ಇದುವರೆಗೂ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ, ರಾಜಕೀಯ ಸುಳ್ಳು ಭರವಸೆ ನೀಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡುತ್ತಿದ್ದಾರೆ. ಅವರು ಹೇಳಿದ ಮಾತು ಮರೆತಂತೆ ಕಾಣುತ್ತಿದೆ. ಜಿಲ್ಲಾಧಿಕಾರಿಗಳು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಭರವಸೆ ನೀಡಿದ್ದರು. ಅದು ಕೂಡ ಕಾರ್ಯ ಪ್ರವೃತ್ತರಾಗಿಲ್ಲ.
ಈ ಕೂಡಲೇ ನಗರದ ಎಲ್ಲಾ ವ್ಯಾಪಾರಿಗಳಿಗೆ ಪುನಃ ಫುಟ್ ಪಾತ್ ಮೇಲೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು. ತೋಟಗಾರಿಕೆ ಇಲಾಖೆಯ ಕಾಂಪೌಂಡ್ ಮುಂದೆ ಬಾಡಿಗೆ ನಿಗದಿ ಮಾಡಿ ವ್ಯಾಪಾರಕ್ಕೆ ಅನುಕೂಲ ಒದಗಿಸಿ, ಗಂಗಾವತಿ ಮತ್ತು ಕುಷ್ಟಗಿ ರಸ್ತೆಯಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಹಾಗೂ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯಲ್ಲಿ: ರಮೇಶ ಪಾಟೀಲ್ ಬೇರ್ಗಿ, ಚಿಟ್ಟಿಬಾಬು, ಬಿ.ಎನ್.ಯರದಿಹಾಳ, ಶಾಮಿದ್ ಸಾಬ್, ಖಾಸಿಂ ಸಾಬ್, ಹುಸೇನ್ ಸಾಬ್, ವಸಿಂ, ಸೇರಿದಂತೆ ಅನೇಕ ಬೀದಿ ಬದಿ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.

