ಮಸ್ಕಿ ಸಮೀಪ ನಾಗಲದಿನ್ನಿ ಮುಖ್ಯ ಕಾಲುವೆ ಹತ್ತಿರ ಮಸ್ಕಿ ಘಟಕದ ಬಸ್ ಬೈಕ್ ಸವಾರನ ಮೇಲೆ ಡಿಕ್ಕಿ, ಬೈಕ್ ಸವಾರ ವೆಂಕಟೇಶ್ ಆನಂದಗಲ್ ಸ್ಥಳದಲ್ಲಿ ಬಿದ್ದು ಬೆನ್ನು ಮೂಳೆ ಬಹಳ ನೋವಿಂದ ಬಳಲುತ್ತಿದ್ದುರು ಇಷ್ಟೆಲ್ಲಾ ಆದರೂ ಬಸ್ಸಿನ ಚಾಲಕ ನೋಡಿ ನಿನಗೆ ಏನಾಗಿದೆ ಏನು ಆಗಿಲ್ಲ ತಗೋ ಎಂದು ಮಾನವೀಯತೆ ಮರೆಯದೆ ಮನುಷ್ಯತ್ವ ಅರಿಯದೆ ಮೃಗ ತರ ಹಾಗೆ ಹೋಗಿದ್ದಾನೆ, ಆದರೆ ಬೈಕ್ ಸವಾರ ವೆಂಕಟೇಶ್ ಆನಂದಗಲ್ ಅವರು ನಾಗಲದಿನ್ನಿ ಮುಖ್ಯ ಕಾಲುವೆ ಕೆಳಗಡೆ ಬಿದ್ದು, ನರಳುವುದನ್ನು ನೋಡಿ ರಸ್ತೆಯ ಪ್ರಯಾಣಿಕರು ಬಂದು ತಕ್ಷಣ ನೀರು ಕುಡಿಸಿ 112 ಪೊಲೀಸ್ ಮತ್ತು 108 ತುರ್ತು ವಾಹನಕ್ಕೆ ಕರೆ ಮಾಡಿ ಮಾನವೀಯತೆ ಮೆರೆದಿದ್ದಾರೆ, ಇಷ್ಟು ಎಲ್ಲಾ ಘಟನೆಗೆ ಕಾರಣರಾದ ಬಸ್ಸಿನ ಚಾಲಕ ಬಸ್ಸನ್ನು ಮಸ್ಕಿ ಬಸ್ ನಿಲ್ದಾಣಕ್ಕೆ ಹೋಗಿ ಬಸ್ಸು ನಿಲ್ಲಿಸಿ ಪರಾರಿ ಆಗಿದ್ದಾನೆ, ಇಂಥ ಚಾಲಕರನ್ನು ಸೇವೆಯಿಂದ ತೆಗೆಯಬೇಕು ಎಂದು ಸ್ಥಳದಲ್ಲಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚಿಗೆ ಮಸ್ಕಿ ಘಟಕದ ಬಸ್ ಚಾಲಕರು ಅತಿ ವೇಗವಾಗಿ ಚಾಲನೆ ಮಾಡುತ್ತಿದ್ದು, ವಿಶೇಷವಾಗಿ ಮೊಬೈಲ್ ಬಳಕೆ ಮಾಡುತ್ತಾ ಚಾಲನೆ ಮಾಡುತ್ತಿರುವುದು ದುರಂತದ ವಿಚಾರ, ಹೀಗಾಗಿ ಮಸ್ಕಿ ಘಟಕದ ವ್ಯವಸ್ಥಾಪಕರು ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಬಸ್ ಚಾಲಕರಿಗೆ ಸರಿಯಾಗಿ ಚಾಲನೆ ಮಾಡಲು ಹೇಳಬೇಕು ಎಂದು ಹಾಲಾಪುರ ಸುತ್ತ ಮುತ್ತಲಿನ ಹಳ್ಳಿಗಳ ಪ್ರಯಾಣಿಕರು ಮಾತಾಗಿದೆ.

