ಮಸ್ಕಿ: ಮಸ್ಕಿ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಯಲ್ಲಿ ನಮ್ಮ ವಿರುದ್ಧ ಯಾರೇ ಸ್ಪರ್ಧಿಸಲಿ.ಕಾಂಗ್ರೆಸ್ ಪಕ್ಷ ಸಿದ್ಧವಿದೆ. ಶ್ರೀರಾಮುಲು ಅವರನ್ನು ಕಾಂಗ್ರೆಸ್ ಪಕ್ಷದ ಕೆಲ ಅಸಮಾಧಾನಿತರು ಅವರನ್ನು ಭೇಟಿಯಾಗಿದ್ದಾರೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅವರು ನೀಡಿರುವ ಹೇಳಿಕೆ ಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ ಎಂದು ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಲ್ಲಿ ಹೇಳಿದರು.
ಅವರು ಶನಿವಾರ ಪತ್ರಿಕಾ ಹೇಳಿಕೆ ನೀಡಿ ಮಸ್ತಿ ಕ್ಷೇತ್ರದಿಂದ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಯಾರಾದರೂ ಸ್ಪರ್ಧೆ ಮಾಡಲಿ ಅದು ಅವರ ಪಕ್ಷದ ಆಂತರಿಕ ವಿಚಾರ. ಆದರೆ ಇತ್ತೀಚೆಗೆ ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷದ ಅಸಮಾಧಾನಿಕರು ಶ್ರೀರಾಮುಲು ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿದ್ದಾರೆ ಆದರೆ ಅವರ ಭೇಟಿಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಕೆಲವರು ಸಮುದಾಯದ ನಾಯಕ ಅಂತಾ ಭೇಟಿ ಆಗಿರಬಹುದು ಇನ್ನು ಕೆಲವರು ಅವರ ಮೇಲಿನ ಅಭಿಮಾನಕ್ಕೆ ಭೇಟಿ ಆಗಿದ್ದರೆ ಅದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವ ಸಂಬಂಧವಿಲ್ಲ. ನಮ್ಮದೇನಿದ್ದರೂ ಕ್ಷೆತ್ರದ ಅಭಿವೃದ್ಧಿ ಕಡೆಗೆ ಗಮನ ಮಾತ್ರ. ನಾವು ಈಗಾಗಲೇ ಕ್ಷೆತ್ರದ ರೈತರಿಗೆ ಕೊಟ್ಟ ಮಾತಿನಂತೆ 5ಎ ಕಾಲುವೆ ಯೋಜನೆ ಜಾರಿಗೆ ತಂದು ಈಗ ಟೆಂಡರ್ ಕರೆಯಲಾಗಿದೆ. ಅಲ್ಲದೇ ಮಸ್ಕಿ ಪಟ್ಟಣದ ಸೋಮನಾಥನಗರ ನಿವಾಸಿಗಳು ಕಳೆದ 35 ವರ್ಷಗಳಿಂದ ಹಕ್ಕು ಪತ್ರಗಳಿಗಾಗಿ ಅಲೆದಾಡುತ್ತಿದ್ದರು. ಕಾಂಗ್ರೆಸ್ ಸರ್ಕಾರ ಬಡಜನರ ನೆರವಿಗೆ ಭಾವಿಸಿದ್ದು ಇದೀಗ ಅವರಿಗೆ ಹಕ್ಕು ಪತ್ರ ವಿತರಿಸಲು ಶಾಸಕರು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದು ಅತಿ ಶೀಘ್ರದಲ್ಲೇ ಅವರಿಗೆ ಹಕ್ಕುಪತ್ರಗಳನ್ನು ಸಹ ವಿತರಿಸಲಾಗುವುದು. ಅಲ್ಲದೆೆಮಸ್ಕಿ ಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆಯನ್ನು ಶಾಸಕರು ನೀಡಿದ್ದಾರೆ ಸರ್ಕಾರವು ಸಹ ಹೆಚ್ಚಿನ ಅನುದಾನವು ಸಹ ನೀಡುತ್ತಿದೆ ನಾವು ಚುನಾವಣೆ ಬಂದಾಗ ಮಾತ್ರ ಚುನಾವಣೆಯ ವಿಷಯವನ್ನು ಮಾತನಾಡುತ್ತೇವೆ ಇದೀಗ ಅದು ಸೂಕ್ತ ಸಮಯವಲ್ಲ ಜನರು ಮಸ್ಕಿ ಕ್ಷೆತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದು ಇದೀಗ ನಮ್ಮದೇನಿದ್ದರೂ ಅಭಿವೃದ್ಧಿ ಮಾಡುವ ಕಡೆ ಗಮನ ಮಾತ್ರ. ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಯಾರೇ ಸ್ಪರ್ಧಿಸಲಿ ನಮ್ಮದೇನು ಅಭ್ಯಂತರವಿಲ್ಲ ನಾವು ಚುನಾವಣೆಯನ್ನು ಎದುರಿಸಲು ಸಿದ್ದರಿದ್ದೇವೆ ಎಂದು ಹೇಳಿದರು. ಆದ್ದರಿಂದ ಇನ್ನು ಮುಂದೆ ಇಂಥ ಹೇಳಿಕೆಗಳನ್ನು ಹೇಳುವುದು ನಿಲ್ಲಿಸಬೇಕು ಎಂದು ಹೇಳಿದರು.

