ಮಾನವಿ, ಏ. 11:
ಪಟ್ಟಣದ ಕೋನಾಪುರ ಪೇಟೆಯ ಜಡೆ ಬಸಪ್ಪ ಗುಡಿ ಸಮೀಪ ಅಪ್ರೋಜ್ ಮೆಡಿಕಲ್ ಹಾಗೂ ಜನರಲ್ ಸ್ಟೋರ್ ವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟಿಗೆಯನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಪ್ರೋಜ್ ಮೆಡಿಕಲ್ ಸ್ಟೋರ್ ಮಾಲೀಕರಾದ ಅಪ್ರೋಜ್ ಅವರು, “ಬೇಸಿಗೆಯ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲೆಂದು ನಮ್ಮ ವತಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಇದು ಸಮಾಜದ ಜನರಿಗೆ ನಮ್ಮಿಂದ ಸಣ್ಣ ಸೇವೆಯಾಗಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪಿ. ಜಯಪ್ರಕಾಶ್ (ಪುರಸಭೆ ಸದಸ್ಯರು), ರಾಮಕೃಷ್ಣ (ಪುರಸಭೆ ಸದಸ್ಯರು), ಯಾಕೋಬ್, ಎಂ.ಡಿ. ಶಾಲಂ, ಸೈಯದ್ ಮುಜೀಬ್ ಅಹಮದ್, ಮೊಹಮ್ಮದ್ ನಾಹಿದ್ ಹುಸೇನ್, ಸಂದೇಶ್ ಡ್ಯಾನಿಯಲ್, ಇಕ್ಬಾಲ್, ಶಬ್ಬೀರ್, ಶಿವಜ್ಞಾನಿ, ಸೈಯದ್ ಅಹಮದ್ ಹುಸೇನಿ ಮತವಾಲೆ, ಯೂಸುಫ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *