ರಾಯಚೂರು ಎ 11 9 : ಗುಲ್ಬರ್ಗದ AIMIM ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಯಚೂರು ನಗರ ಘಟಕದ ಅಧ್ಯಕ್ಷರಾಗಿ ಶಬ್ಬೀರ್ ಅಹಮದ್ ಹೌದಡಿ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ.
ಈ ನೇಮಕಾತಿ ಆದೇಶವನ್ನು Asaduddin Owaisi ಅವರ ಮಾರ್ಗದರ್ಶನದಲ್ಲಿ, Kausar Mohiuddin AIMIM ಪಕ್ಷದ ಕಾರ್ವನ್ ಶಾಸಕರು ಹೈದರಾಬಾದ್ ಅವರು ನೀಡಿದರು.
ಈ ಸಂದರ್ಭದಲ್ಲಿ ಹೈದರಾಬಾದ್‌ನ ಮಾಜಿ ಕಾರ್ಪೊರೇಟರ್ ಮೊಹಮ್ಮದ್ ಸಲೀಂ, ಕರ್ನಾಟಕ AIMIM ಪಕ್ಷದ ರಾಜ್ಯಾಧ್ಯಕ್ಷ Latif Khan Pathan, ಶಬಾಜ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಯಚೂರು ನಗರ ಘಟಕದ AIMIM ಪಕ್ಷದ ಅಧ್ಯಕ್ಷರಾಗಿ
ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದ ನಂತರ ಮಾತನಾಡಿದ ಶಬ್ಬೀರ್ ಅಹಮದ್ ಅವರು,
ನಗರದಲ್ಲಿ ಸಂಘಟನೆಯನ್ನು ಬಲಪಡಿಸುವುದು ತಮ್ಮ ಮೊದಲ ಗುರಿಯಾಗಿದೆ ಎಂದು ತಿಳಿಸಿದರು.
ಪ್ರತಿ ವಾರ್ಡ್‌ನಲ್ಲಿ ಘಟಕಗಳನ್ನು ರಚಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಜನರ ಪರ ಹೋರಾಟ ನಡೆಸುವುದು ಮತ್ತು ಸಂವಿಧಾನದ ಅರಿವು ಮೂಡಿಸುವ ಕೆಲಸಗಳಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಮುಂದಿನ 2028ರ ಚುನಾವಣೆಯಲ್ಲಿ ರಾಯಚೂರು ನಗರದಿಂದ AIMIM ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನಮ್ಮ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.

