ಸಿಂಧನೂರು— ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ಆಶ್ರಮದ ಸದಸ್ಯರಾದ ಡಾ. ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಕರಡಕಲ್ ಅವರ 37ನೇ ವರ್ಷದ ಜನ್ಮದಿನದ ಪ್ರಯುಕ್ತ ಲಿಂಗಸೂಗೂರು ತಾಲೂಕಿನ ದೇವರಭೂಪೂರು ಅಮರೇಶ್ವರ ಗುರು ಷ.ಬ್ರ. ಅಭಿನವ ಗಜದಂಡ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತ ಮಠದ ಮಹಾ ಲಿಂಗ ಮಹಾಸ್ವಾಮಿಗಳು ಮತ್ತು ಅಡವಿ ಅಮರೇಶ್ವರ ಸುಕ್ಷೇತ್ರದ ಪೀಠಾಧಿಪತಿಗಳಾದ ಮ.ನಿ.ಪ್ರ.ಸ್ವ. ತುಂಟದಾರ್ಯ ಮಹಾಸ್ವಾಮಿಗಳು ಶುಭಾಶೀರ್ವಾದದೊಂದಿಗೆ ಆಶೀರ್ವದಿಸಿದರು. ಈ ಸಮಯದಲ್ಲಿ ಅಡವಿ ಅಮರೇಶ್ವರ ಸುಕ್ಷೇತ್ರದ ತೊಂಟದಾರ್ಯ ಮಹಾಸ್ವಾಮಿಗಳು ನಮ್ಮ ಕರಡಕಲ್ ಹಿರೇಮಠದ ಮಲ್ಲಿಕಾರ್ಜುನ ಸ್ವಾಮಿ ಅವರು ಹುಟ್ಟು ಅಂಗವಿಕಲರಾಗಿ ಅವರ ಹೆತ್ತವರ ಆದರ್ಶ ಆಶಯದಂತೆ ಹಲವಾರು ಸಮಾಜ ಪರ ಕಾರ್ಯಗಳನ್ನು ಮಾಡುತ್ತಾ ನಾಡಿನ ಬಸವಾದಿ ಶರಣರ ಪ್ರೀತಿಗೆ ಪಾತ್ರರಾಗಿದ್ದಾರೆ. ಮತ್ತು ಸಿಂಧನೂರಿನಲ್ಲಿ ಕರುಣೆಯ ಕಾರುಣ್ಯ ಕುಟುಂಬವನ್ನು ಹುಟ್ಟು ಹಾಕುವ ಮೂಲಕ ಅನೇಕ ಅಂತ ಅನಾಥರ ಬಾಳಿಗೆ ಬದುಕು ಕಟ್ಟಿ ಕೊಟ್ಟಿರುವ ಇವರ ಸೇವೆ ಶ್ಲಾಘನೀಯವಾದುದು ದೈಹಿಕವಾಗಿ ನ್ಯೂನತೆ ಹೊಂದಿದ ಮಲ್ಲಿಕಾರ್ಜುನ ಸ್ವಾಮಿಯವರ ಸೇವೆಗೆ ನಮ್ಮ ಅಡವಿ ಅಮರೇಶ್ವರ ಕ್ಷೇತ್ರದ ಗುರುಗಳ ನಮ್ಮೆಲ್ಲರ ಆಶೀರ್ವಾದವಿರುತ್ತದೆ. ನಿಮ್ಮ ಕಾರುಣ್ಯ ಕುಟುಂಬದ ಸೇವೆ ಅನಾಥರ ಬಾಳಿನ ಬೆಳಕಾಗಿ ನಮ್ಮ ದೇಶದ ಅನಾಥ ಸಂಸ್ಕೃತಿಯನ್ನು ಅಳಿಸಿ ಹಾಕುವಲ್ಲಿ ತಮ್ಮ ಸೇವೆ ಅಮೋಘವಾಗಲಿ ಎನ್ನುವುದು ನಮ್ಮ ಹಾಗೂ ನಮ್ಮ ಭಕ್ತರ ಆಶಯವಾಗಿದೆ ಎಂದು ಆಶೀರ್ವಚನ ನೀಡಿ ಡಾ. ಮಲ್ಲಿಕಾರ್ಜುನ ಸ್ವಾಮಿಯವರಿಗೆ ನೆನಪಿನ ಕಾಣಿಕೆಯನ್ನು ವಿತರಿಸಿ ಆಶೀರ್ವದಿಸಿದರು. ನಂತರ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತ ಮಠದ ಮಹಾಲಿಂಗ ಮಹಾಸ್ವಾಮಿಗಳು ಅಡವಿ ಅಮರೇಶ್ವರ ಕ್ಷೇತ್ರದ ಎರಡೂವರೆ ಟನ್ ತೂಕದ ಕಲ್ಲನ್ನು ಎತ್ತುಗಳು ಎಳೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಡಿನ ಸಮಸ್ತ ರೈತರುಗಳ ಆಶೀರ್ವಾದದೊಂದಿಗೆ ಸರಳ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಕಾರುಣ್ಯ ಆಶ್ರಮದ ಕರುಣೆಯ ಕಂದನಾದ ಡಾ. ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಅವರಿಗೆ ಬಸವಾದಿ ಶರಣರು ಒಳಬಳ್ಳಾರಿಯ ಲಿಂಗೈಕ್ಯ ಚನ್ನಬಸವ ಮಹಾಶಿವಯೋಗಿಗಳ ಆಶೀರ್ವಾದ ಸದಾವಕಾಲವಿರುತ್ತದೆ ಎಂದು ಆಶೀರ್ವದಿಸಿದರು. ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಬಸವರಾಜ ಬೆಲ್ಲದ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಗುಂಜಳ್ಳಿ. ವೆಂಕೋಬ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಗಾಂಧಿನಗರ. ಆಶ್ರಮದ ಸಲಹಾ ಸಮಿತಿಯ ಹಿರಿಯರುಗಳಾದ ಮಂಜುನಾಥ ಕರಡಕಲ್. ಶರಣಪ್ಪ ನಾಯಕ ಕಸಬಾ ಲಿಂಗಸುಗೂರು. ಮಹೇಶ ಕಸಬಾ ಲಿಂಗಸೂಗೂರು. ಶ್ರೀಮಠ ಸೇವಾ ಟ್ರಸ್ಟ್ ಸದಸ್ಯರಾದ ಸುಜಾತ ಹಿರೇಮಠ. ಪತ್ರಕರ್ತರಾದ ನಾಗರಾಜ ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲ್ಲದಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ..ಜ್ಯೋತಿ. ಮೀನಾಕ್ಶಮ್ಮ. ಲಕ್ಷ್ಮಿ. ಶರಣು ಸ್ವಾಮಿ ಅನೇಕರು ಉಪಸ್ಥಿತರಿದ್ದರು

