ರಾಯಚೂರು ಏಪ್ರಿಲ್ 10 (ಕರ್ನಾಟಕ ವಾರ್ತೆ): ಪ್ರಸ್ತುತ ಬೇಸಿಗೆ ಕಾಲ ಇರುವ ಪ್ರಯುಕ್ತ ಜಿಲ್ಲೆಯ ಸಿರವಾರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದ್ದು, ಸಾರ್ವಜನಿಕರು ಈ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಕೋರಲಾಗಿದೆ.
ತಾಲೂಕು ಪಂಚಾಯತ್ ಕಚೇರಿಯ ಬೆಳಿಗ್ಗೆ 9ರಿಂದ ಮಧ್ಯಾಹ್ನ 11ರವರಗೆ ಗ್ರೇಡ್-1 ಕಾರ್ಯದರ್ಶಿ ಮಲ್ಲಿಕಾರ್ಜುನ ದೂರವಾಣಿ ಸಂಖ್ಯೆ: 7022278013, ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ಡಿ ಗ್ರೂಪ್ ನೌಕರ ಶಂಕ್ರಪ್ಪ ದೂರವಾಣಿ ಸಂಖ್ಯೆ: 9632544321, ಸಂಜೆ 4ರಿಂದ ರಾತ್ರಿ 10ರವರಗೆ ಎನ್.ಆರ್.ಎಲ್.ಎಂ ಶ್ರೀಧರ್ ದೇಶಪಾಂಡೆ ದೂರವಾಣಿ ಸಂಖ್ಯೆ: 9535420463ಗೆ ಸಂಪರ್ಕ ಮಾಡಬಹುದಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *