ಸಿಂಧನೂರು: ಬಸವ ಜಯಂತಿ ಉತ್ಸವ ಸಮಿತಿ ಹಾಗೂ ತಾಲೂಕ ಆಡಳಿತದ ಸಹಕಾರದೊಂದಿಗೆ ಇದೇ ತಿಂಗಳು ೨೦ ರಂದು ನಗರದ ಆರ್.ಜಿ.ಎಮ್. ಶಾಲಾ ಮೈದಾನದಲ್ಲಿ ಜರುಗಲಿರುವ ೮೯೩ ನೇ ಬಸವ ಜಯಂತಿ ಪ್ರಯುಕ್ತ ದಿನಾಂಕ: ೧೬-೪-೨೦೨೬ ರಂದು ಸಂಜೆ ೪-೦೦ ಗಂಟೆಗೆ ‘ಕವಿಗಳು ಕಂಡಂತೆಬಸವಣ್ಣ’ ಮುಕ್ತ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆಯೆಂದು ಬಸವ ಜಯಂತಿ ಉತ್ಸವ ಸಮಿತಿ ಸದಸ್ಯರು ಕವಿಗೋಷ್ಠಿಯ ಸಂಚಾಲಕರಾದ ಬೀರಪ್ಪ ಶಂಭೋಜಿ ತಿಳಿಸಿದ್ದಾರೆ.
ಭಾಗವಹಿಸುವ ಕವಿಗಳು ಬಸವಣ್ಣನವರ ಕುರಿತು ೨೫ ಸಾಲುಗಳಿಗೆ ಮೀರದಂತೆ ಸ್ವರಚಿತ ಕವನವನ್ನು ದಿನಾಂಕ: ೧೫-೪-೨೦೨೬ ರ ಒಳಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ಹೆಚ್.ಎಫ್.ಮಸ್ಕಿ (೮೮೬೭೭೯೪೫೦೮) ವಾಟ್ಸ್ಪ್ ಅಥವಾ ಎಲ್.ಬಿ.ಕೆ.ಕಾಲೇಜಿನ ಪ್ರಾಚಾರ್ಯ ಪರಶುರಾಮ ಮಲ್ಲಾಪೂರ (೯೯೧೬೭೫೮೭೩೯ ) ವಾಟ್ಸ್ಪ್‌ಗೆ ಕಳಿಸಿಕೊಡಬೇಕಾಗಿ ವಿನಂತಿ ಕವಿಗೋಷ್ಠಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ನಗದು ಹಾಗೂ ಪುಸ್ತಕ ರೂಪದ ಬಹುಮಾನ ಭಾಗವಹಿಸಿದವರಿಗೆಲ್ಲ ಪ್ರಶಸ್ತಿ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಬೀರಪ್ಪ ಶಂಭೋಜಿ ೯೪೪೮೬೩೩೭೭೦ ಸಂಪರ್ಕಿಸಬಹುದು.

