ಮಸ್ಕಿ: ‘ಮುಂಬರುವ 2028ಕ್ಕೆ ಮಸ್ಕಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾನೇ ಸ್ಪರ್ಧಿಸುತ್ತೇನೆ, ರಾಜ್ಯ ಕೋರ್ ಕಮಿಟಿಯೂ ಸಹ ಸಹಮತ ಸೂಚಿಸಿದೆ ಆದ್ದರಿಂದ ಕಾರ್ಯಕರ್ತರು ಉಹಾಪೋಹಗಳಿಗೆ ಕಿವಿಗೊಡಬೇಡಿ’ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಸ್ಪಷ್ಟಪಡಿಸಿದರು.
ಮಸ್ಕಿ ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ ನೇತೃತ್ವದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಅತ್ಯಂತ ಗಟ್ಟಿಯಾಗಿ ಕಟ್ಟಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು ಯಾರ ಅಭ್ಯಂತರವಿಲ್ಲ. ಆದರೆ ಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾನೇ ಸ್ಪರ್ಧೆ ಮಾಡುತ್ತೇನೆ. ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ ಎಂದರು.
ಈಗಾಗಲೇ ರಾಷ್ಟ್ರ ಮತ್ತು ರಾಜ್ಯದ ಬಿಜೆಪಿ ನಾಯಕರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದಾರೆ.
ಶ್ರೀರಾಮುಲುರಿಂದ ಗೊಂದಲ ಸೃಷ್ಠಿ: ಇತ್ತೀಚೆಗೆ ಶ್ರೀರಾಮಲು ಅವರು ಕ್ಷೇತ್ರದ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಿಂದ ಮುಂದಿನ ೨೦೨೮ರ ಚುನಾವಣೆಗೆ ಮಸ್ಕಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಗೊಂದಲ ಸೃಷ್ಠಿಯಾಗಿದೆ. ಆದರೆ ಕನ್ನಾಳ ಗ್ರಾಮಕ್ಕೆ ತೆರಳುವ ಮುನ್ನಾ ಸುದ್ದಿಗೋಷ್ಠಿ ನಡೆಸಿ ಮಸ್ಕಿ ಕ್ಷೇತ್ರದಿಂದ ನಾನು ಸ್ಪರ್ಧಿಸುವುದಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಸಂಘಟಿಸುತ್ತೇನೆಂದು ಹೇಳಿದ್ದಾರೆ. ಹೊರತು ಎಲ್ಲಿಯೂ ಮಸ್ಕಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆಂದು ಹೇಳಿಲ್ಲ. ಆದ್ದರಿಂದ ಪಕ್ಷದ ಕಾರ್ಯಕರ್ತರು ಮತ್ತು ಮತದಾರರು ಗೊಂದಲಕ್ಕೀಡಾಗಬಾರದೆAದು ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಮತ್ತು ವರಿಷ್ಠರನ್ನು ಭೇಟಿಯಾಗಿದ್ದೇವೆ. ಅವರು ಅಭ್ಯರ್ಥಿ ನೀವೆ ಎಂದು ಸ್ಪಷ್ಟಿಕರಣ ನೀಡಿದ್ದಾರೆ. ಸ್ಥಳೀಯವಾಗಿ ನನ್ನ ನಾಯಕತ್ವ ಸಹಿಸಿಕೊಳ್ಳದವರು ಮುಂದಿನ ಚುನಾವಣೆಯಲ್ಲಿ ಪ್ರತಾಪಗೌಡರು ಸ್ಷರ್ಧಿಸುದಿಲ್ಲ ಎಂದು ಕೆಲವು ಕಡೆ ಚರ್ಚೆ ನಡೆಸಿದ್ದಾರೆ ಎನ್ನುವುದು ನನ್ನ ಗಮನಕ್ಕಿದೆ. ಶ್ರೀರಾಮುಲು ಅವರನ್ನು ಭೇಟಿ ಮಾಡಿದ್ದಾರೆಂಬ ಮಾಹಿತಿ ಇದೆ. ಪಕ್ಷ ವಿರೋಧಿ ಚಟುವಟಿಕೆ ಮಾಡುವವ ಬಗ್ಗೆ ಪಕ್ಷದ ನಾಯಕರ ಗಮನಕ್ಕೆ ತರಲಾಗಿದೆ. ಮುಂದಿನ ಕ್ರಮ ನಮ್ಮ ನಾಯಕರು ತೆಗೆದುಕೊಳ್ಳುತ್ತಾರೆ. ಇಲ್ಲಿನ ಕೆಲ ಅತೃಪ್ತ ಬಿಜೆಪಿ ಹಾಗೂ ಕಾಂಗ್ರೆಸ್ಸಿನ ನಾಯಕರು ಇಂತಹ ಗೊಂದಲಗಳನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು ಇದ್ಯಾವುದಕ್ಕೂ ನಮ್ಮ ಬಿಜೆಪಿ ಕಾರ್ಯಕರ್ತರು ಗಮನ ಕೊಡದೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ ಎಂದು ಮನವಿ ಮಾಡಿದರು.
ನಂತರ ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ ಮಾತನಾಡಿ ಪಕ್ಷವೂ ಪ್ರತಾಪಗೌಡ ಪಾಟೀಲ್‌ರ ಪರವಾಗಿದ್ದು, ಈ ಕ್ಷೇತ್ರದ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ರೇ ಬೆರ‍್ಯಾರು ಬರುವುದಿಲ್ಲ. ಕೋರ್‌ಕಮಿಟಿ ಜಿಲ್ಲಾ ಕೂಡ ಮಾಜಿ ಶಾಸಕರ ಪರವಾಗಿದೆ ಎಂದು ಹೇಳಿದರು. ಅಲ್ಲದೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಸೂಕ್ತ ದಾಖಲೆಗಳೊಂದಿಗೆ ಹೈಕಮಾಂಡ್ ನಾಯಕರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು ಅಲ್ಲದೆ ಪಕ್ಷ ಸಂಘಟನೆಯಲ್ಲಿ ಮಸ್ಕಿ ಕ್ಷೇತ್ರವು ಅತ್ಯಂತ ಮುಂಚೂಣಿಯಲ್ಲಿದ್ದು ಮುಂಬರುವ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಶರಣಬಸವ ಸೊಪ್ಪಿಮಠ, ಬಸವಂತರಾಯ ಕುರಿ, ಪುರಸಭೆ ಅಧ್ಯಕ್ಷ ಸುರೇಶ ಹರಸೂರು, ವೆಂಕಟೇಶ ಗುಡಸಲಿ, ಮಲ್ಲಪ್ಪ ಅಂಕುಶದೊಡ್ಡಿ, ಬಸವರಾಜ ಪಾಟೀಲ್ ಡೋಣಮರಡಿ, ರಮೇಶ ಸಿಳ್ಳೇದ್ ಸೇರಿದಂತೆ ಇನ್ನಿತರರಿದ್ದರು.
ಕಾಂಗ್ರೆಸ್ ಅತೃಪ್ತ ಬಣದಿಂದ ಗೊಂದಲ: ಕಾಂಗ್ರೆಸ್ ಪಕ್ಷದಲ್ಲಿ ಒಂದು ಅತೃಪ್ತ ಬಣ ಹುಟ್ಟಿಕೊಂಡಿದೆ. ಈ ಹಿಂದೆ ನನ್ನ ಜತೆ ಇದ್ದರೂ, ಈಗ ಶಾಸಕ ಬಸನಗೌಡರ ಜತೆಗೆ ಕೂಡ ವ್ಯವಹಾರ ಕೆಡಿಸಿಕೊಂಡಿದ್ದಾರೆ. ಅವರಿಗೆ ನೆಲೆ ಇಲ್ಲದ ಕಾರಣ ಕ್ಷೇತ್ರಕ್ಕೆ ಹೊಸ ಬಿಜೆಪಿ ಕ್ಯಾಂಡಿಡೇಟ್ಸ್ ಕರೆತಂದು ನೆಲೆ ನಿರ್ಮಿಸಿಕೊಳ್ಳಲು ಓಡಾಡುತ್ತಿರುವುದರಿಂದ ಬಿಜೆಪಿ ಅಭ್ಯರ್ಥಿ ಬದಲಾಗುತ್ತಾರೆಂದು ಕ್ಷೇತ್ರದ ಕಾರ್ಯಕರ್ತರಲ್ಲಿ ಗೊಂದಲ ನಿರ್ಮಾಣವಾಗಿದೆ. ಒಂದು ವೇಳೆ ಮಸ್ಕಿ ಕ್ಷೇತ್ರದಿಂದ ಬೇರೆ ಯಾರಾದರೂ ಸ್ಪರ್ಧೆ ಮಾಡುತ್ತಾರೆಂದರೆ ಇದಕ್ಕೆ ನಮ್ಮ ವಿರೋಧವಿರುತ್ತದೆ. ಯಾವುದೇ ಕಾರಣಕ್ಕೂ ಮಸ್ಕಿ ಕ್ಷೆತ್ರದಿಂದ ಬಿಜೆಪಿ ಪಕ್ಷದಿಂದ ನನ್ನನ್ನು ಬಿಟ್ಟರೆ ಬೇರೆ ಯಾರು ಸ್ಪರ್ಧೆ ಮಾಡಲು ಬರುವುದಿಲ್ಲ
ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಮಸ್ಕಿ ಕ್ಷೇತ್ರದಿಂದ ಪ್ರತಾಪ್ ಗೌಡ ಪಾಟೀಲ್ ಅವರೇ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲಿದ್ದಾರೆ, ಇದಕ್ಕೆ ಜಿಲ್ಲಾ ಸಮಿತಿಯಿಂದ ಪೂರ್ಣ ಸಹಮತ ಇದೆ – ವೀರನಗೌಡ ಲೆಕ್ಕಿಹಾಳ ಬಿಜೆಪಿ ಜಿಲ್ಲಾಧ್ಯಕ್ಷ.
ಕೋಟ್:—
ಬಿಜೆಪಿ ಪಕ್ಷಕ್ಕೆ ನಾನು ಮಾಡಿದ ತ್ಯಾಗ ದೊಡ್ಡದಿದೆ. ಆದ್ದರಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಿಂದ ನಾನೇ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್.

