ಜಾಲಹಳ್ಳಿ : ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
👉 ಅಧ್ಯಕ್ಷ ಸ್ಥಾನಕ್ಕೆ ಗೋವಿಂದಪ್ಪ ಹಲಗೇರಿ (ಬಿಜೆಪಿ ಬೆಂಬಲಿತ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
👉 ಉಪಾಧ್ಯಕ್ಷ ಸ್ಥಾನಕ್ಕೆ ಖುರ್ಷಿದ್ ಪಟೇಲ್( ಬಿಜೆಪಿ ಬೆಂಬಲಿತ) ಮತದಾನದ ಮೂಲಕ ಆಯ್ಕೆಯಾಗಿದ್ದಾರೆ.
ಈ ಚುನಾವಣೆಯಲ್ಲಿ ಒಟ್ಟು 13 ಮತಗಳು ಚಲಾಯಿಸಲ್ಪಟ್ಟಿದ್ದು,
ಖುರ್ಷಿದ್ ಪಟೇಲ್ (ಬಿಜೆಪಿ ಬೆಂಬಲಿತ )– 10 ಮತಗಳು
ಶಿವರಾಜ್ ವಿಭೂತಿ (ಪಕ್ಷೇತರ) – 3 ಮತಗಳು ಪಡೆದಿದ್ದಾರೆ.
ಹತ್ತು ನಿರ್ದೇಶಕರು ಬಿಜೆಪಿ ಬೆಂಬಲಿತರಾಗಿದ್ದು, ಉಳಿದ ಇಬ್ಬರು ಬೇರೆ ಪಕ್ಷಗಳಿಗೆ ಸೇರಿದವರಾಗಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾದ ಚುನಾವಣಾ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.
🎉 ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
🗣️ ಪ್ರತಿಕ್ರಿಯೆಗಳು:
ಈ ಸಂದರ್ಭದಲ್ಲಿ ಮಾತನಾಡಿದ ಚಂದಪ್ಪ ಬುದ್ದಿನ್ನಿ ಅವರು,
ಬಿಜೆಪಿ ಪಕ್ಷವು ಪರಿಶಿಷ್ಟ ಪಂಗಡದ ಅಭ್ಯರ್ಥಿ ಗೋವಿಂದಪ್ಪ ಹಲಗೇರಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ಖುರ್ಷಿದ್ ಪಟೇಲ್ ಅವರಿಗೆ ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯ ಸಾಧಿಸಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರೆಹಮಾನ್ ಖುರೇಷಿ ಅವರು ಕೂಡ ಮಾತನಾಡಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿರುವುದು ಬಿಜೆಪಿ ಪಕ್ಷದ ಸಾಮಾಜಿಕ ಬದ್ಧತೆಯ ಉದಾಹರಣೆ ಎಂದರು.
ಉಪಾಧ್ಯಕ್ಷರಾಗಿ ಆಯ್ಕೆಯಾದ ಖುರ್ಷಿದ್ ಪಟೇಲ್ ಬಿಜೆಪಿ ಬೆಂಬಲಿತ ಅವರು, ತಮ್ಮನ್ನು ಬೆಂಬಲಿಸಿದ ಎಲ್ಲಾ ಬಿಜೆಪಿ ಮುಖಂಡರು ಹಾಗೂ ರೈತರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
👥 ಈ ಸಂದರ್ಭದಲ್ಲಿ ಹಾಜರಿದ್ದವರು:
ರಾಮನಗೌಡ ಕರಡಿಗುಡ್ಡ, ಅಮರೇಶ್ ಪಾಟೀಲ್, ವೀರಣ್ಣ ಬಳೆ ಸೌಕಾರ್, ಶಿವು ಪಾಣಿ ಸೌಕಾರ್, ಚಂದಪ್ಪ ಬುದ್ದಿನ್ನಿ, ರಮೇಶ್ ಆನ್ವರಿ, ಶಂಕರ್ ಗೌಡ ಮಾಲಿ ಪಾಟೀಲ್, ಸಿದ್ದಯ್ಯ ತಾತ, ವೆಂಕುಬ ತೋಟದ, ರಂಗಪ್ಪ ಬಂಡಿ, ಮಾಳಪ್ಪ ಪೂಜಾರಿ, ವಿನೋದ್ ಚಿಕ್ಕಲ, ಮೌನೇಶ್ ನಾಯಕ್, ದುರ್ಗಪ್ಪ, ಶರಣು ಗಂಗಪ್ಪ ತಗ್ಗಳ್ಳಿ, ಗೋವಿಂದಪ್ಪ ಬಂಡಿ, ಸುರೇಶ್ ಪೂಜಾರಿ, ಭೀಮಣ್ಣ ಹಂಜಾಳ, ಎಂಎಸ್ ಪಾಟೀಲ್, ಮುದುರಂಗಪ್ಪ ವಠಾರ, ಬುಡ್ಡಪ್ಪ ಕವಲಿ, ಅಂಬರೀಷ್ ಕವಲಿ, ಶಿವು ಗುಂಡಪ್ಪ,
ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರೆಹಮಾನ್, ರಮೇಶ್ ತೆಗ್ಗಳ್ಳಿ, ಉಪಾಧ್ಯಕ್ಷರಾದ ವೀರೇಶ ಅರಕೇರಿ ಹಾಗೂ ನೂತನ ನಿರ್ದೇಶಕರು, ಬಿಜೆಪಿ ಕಾರ್ಯಕರ್ತರು ಮತ್ತು ಊರಿನ ಮುಖಂಡರು ಉಪಸ್ಥಿತರಿದ್ದರು.


