ಜಾಲಹಳ್ಳಿ : ಗ್ರಾಮ ಪಂಚಾಯತ್ ಆವರಣ ಗ್ರಾಮದಲ್ಲಿ ರೈತರು ಯೂರಿಯಾ ರಸಗೊಬ್ಬರ ಖರೀದಿಸಲು ಇನ್ನುಮುಂದೆ FID (Farmer ID) ಸಂಖ್ಯೆ ಕಡ್ಡಾಯವಾಗಿದೆ ಎಂದು ಕೃಷಿ ಅಧಿಕಾರಿ ಆಂಜನೇಯ ರಾಥೋಡ್ ತಿಳಿಸಿದ್ದಾರೆ.
ನೈಜ್ಯ ದಸೆ ಕನ್ನಡ ದಿನಪತ್ರಿಕೆ ಮೂಲಕ ಮಾತನಾಡಿದ ಅವರು, ಮುಂಗಾರು ಹಂಗಾಮಿನಿಂದ ರೈತರು ಯೂರಿಯಾ ರಸಗೊಬ್ಬರವನ್ನು ಕೃಷಿ ಇಲಾಖೆಯ “ಕೆ-ಕಿಸಾನ್” ತಂತ್ರಾಂಶದ ಮೂಲಕವೇ ಖರೀದಿ ಮಾಡಬೇಕಾಗಿದೆ ಎಂದು ಹೇಳಿದರು.
🔍 ಹೊಸ ನಿಯಮಗಳ ಮುಖ್ಯ ಅಂಶಗಳು:
ರೈತರ FID ಸಂಖ್ಯೆ ಮತ್ತು ಆಧಾರ್ ಕಾರ್ಡ್ ಕಡ್ಡಾಯ
ರೈತನ ಜಮೀನಿನ ವಿಸ್ತೀರ್ಣ ಹಾಗೂ ಬೆಳೆ ಆಧಾರವಾಗಿ ರಸಗೊಬ್ಬರ ವಿತರಣೆ
ಅಗತ್ಯವಿರುವಷ್ಟೇ ಯೂರಿಯಾ ನೀಡಲಾಗುತ್ತದೆ
ರಸಗೊಬ್ಬರ ಮಾರಾಟಗಾರರು ಕೂಡ “ಕೆ-ಕಿಸಾನ್” ತಂತ್ರಾಂಶದ ಮೂಲಕವೇ ವಿತರಣೆ ಮಾಡಬೇಕು
⚠️ FID ಇಲ್ಲದ ರೈತರಿಗೆ ಸೂಚನೆ: FID ಸಂಖ್ಯೆ ಇಲ್ಲದ ರೈತರು ತಕ್ಷಣವೇ ಕೆಳಗಿನ ದಾಖಲೆಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು:
ಪಹಣಿ
ಬ್ಯಾಂಕ್ ಪಾಸ್‌ಬುಕ್
ಆಧಾರ್ ಕಾರ್ಡ್
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್ ಮಾತನಾಡಿ, ರೈತರು ಸಾವಯವ ಕೃಷಿಯತ್ತ ಹೆಚ್ಚು ಗಮನ ಹರಿಸಬೇಕು ಹಾಗೂ ಕೂಡಲೇ FID ನೋಂದಣಿ ಮಾಡಿಕೊಂಡು ರಸಗೊಬ್ಬರ ಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಆಂಜನೇಯ ರಾಥೋಡ್, ಸಂಜೀವಿನಿ ತಾಂತ್ರಿಕ ಸಿಬ್ಬಂದಿ ಸಂತೋಷ್, ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್, ಬಸವರಾಜ ರಾಂಪಾಳಿ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು), ಶಂಶುದ್ದೀನ್ (ಇಂಜಿನಿಯರ್), ಮುದ್ರಂಗಪ್ಪ (ಗ್ರಾಮ ಪಂಚಾಯತ್ ಕರ ವಸೂಲಿಗಾರ), ರೈತರಾದ ನಾಗಪ್ಪ, ತಿಪ್ಪಣ್ಣ ಮಕಾಶಿ ಸೇರಿದಂತೆ ಹಲವರು ಹಾಜರಿದ್ದರು.

