ಮಾನ್ವಿ : ಪಟ್ಟಣದ ಶ್ರೀ ನೀಲಕಂಟೇಶ್ವರ ಮಂಟಪದಲ್ಲಿ ಯೋಗ ಸನ್ನಿಧಿ ಜ್ಞಾನ ವಿದ್ಯಾಪೀಠ ಟ್ರಸ್ಟ್ ವತಿಯಿಂದ ಬೇಸಿಗೆ ಪ್ರಯುಕ್ತ ಮಕ್ಕಳಿಗಾಗಿ ನಡೆಯುತ್ತಿರುವ ಸಂಸ್ಕಾರ ಶಿಬಿರದಲ್ಲಿ ಇಂದು ಖ್ಯಾತ ದಂತ ವೈದ್ಯರಾದ ದೀಪ್ತಿ ಅವರು ಮಕ್ಕಳಿಗಾಗಿ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡು ತಪಾಸಣೆ ನಡೆಸಿದರು.
ಶಿಬಿರದ ಮಕ್ಕಳಿಗೆ ಹಲ್ಲುಗಳ ರಕ್ಷಣೆ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಸಲಹೆಗಳನ್ನು ನೀಡಿದರು. ಮಕ್ಕಳಲ್ಲಿ ವಸಡು ಸಮಸ್ಯೆಗಳನ್ನು ಗುರುತಿಸಿ, ಬಾಯಿ ನೈರ್ಮಲ್ಯದ ಮಹತ್ವವನ್ನು ತಿಳಿಸುವುದು ಅತ್ಯಂತ ಅಗತ್ಯವೆಂದು ತಿಳಿಸಿದ ಅವರು, ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸುವ ವಿಧಾನಗಳ ಬಗ್ಗೆ ಮಕ್ಕಳಿಗೆ ವಿವರಿಸಿದರು. ಸುಮಾರು 40 ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿದರು.
ಶಿಬಿರದ ಅಂತ್ಯದಲ್ಲಿ ದಂತ ವೈದ್ಯರಾದ ದೀಪ್ತಿ ಅವರನ್ನು ಯೋಗ ಸನ್ನಿಧಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಯೋಗ ಗುರುಗಳಾದ ಅನ್ನದಾನಯ್ಯ, ವೀಣಾ ಅನ್ನದಾನಯ್ಯ, ಡಾ. ವಿಕ್ರಮಾದಿತ್ಯ, ಸಿ.ಡಿ. ವಿಜಯಕುಮಾರ್, ಅರುಣ್ ಕುಮಾರ್, ಮಲ್ಲೇಶ್ ನಾಯಕ ಸೇರಿದಂತೆ ಹಲವರು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *