ರಾಯಚೂರು ಏಪ್ರಿಲ್ 09 (ಕರ್ನಾಟಕ ವಾರ್ತೆ): ಜಿಲ್ಲೆಯ ತುರ್ವಿಹಾಳ ಪಟ್ಟಣ ಪಂಚಾಯತ ವತಿಯಿಂದ 2026-27ನೇ ಸಾಲಿನ ಎಸ್.ಎಫ್.ಸಿ. ಶೇ.7.25 ಇತರೆ ಬಡಜನರ ಕಲ್ಯಾಣಕ್ಕಾಗಿ ಮತ್ತು ಶೇ.5 ವಿಕಲಚೇತನರಿಗಾಗಿ ಯೋಜನೆಗೆ ಕಾಯ್ದಿರಿಸಲಾದ ಎಸ್.ಎಫ್.ಸಿ. ಮುಕ್ತ ನಿಧಿ ಅನುದಾನ ಅನುಷ್ಠಾನಕ್ಕಾಗಿ ವೈಯಕ್ತಿಕ ಚಟುವಟಿಕೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
2026-27 ನೇ ಸಾಲಿನ ಎಸ್ ಎಪ್ ಸಿ–7.25% ಇತರೆ ಬಡ ವರ್ಗದವರಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ರೋಗಿಗಳಿಗೆ ಧನ ಸಹಾಯಕ್ಕೆ ನಿಗದಿತ ಅರ್ಜಿ ನಮೂನೆ 2025-26ನೇ ಸಾಲಿನೊಳಗೆ ಶಸ್ತç ಚಿಕಿತ್ಸೆಗೊಳಗಾದ ದಾಖಲಾತಿಗಳು (ವೈದ್ಯಾಧಿಕಾರಿಗಳಿಂದ ದೃಡೀಕರಣ ಪ್ರಮಾಣ ಪತ್ರ) ಆಧಾರ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಚುನಾವಣಾ ಗುರುತಿನ ಚೀಟಿ ಸಲ್ಲಿಸಬೇಕು.
ವಿಕಲಾಂಗಚೇತನರು, ಪೋಲಿಯೋ ರೋಗಕೊಳ ಪಟ್ಟವರಿಗೆ ಕೃತಕ ಜೋಡಣೆಗೆ ತಗುಲುವ ಮೊತ್ತದ ಸಹಾಯಧನಕ್ಕೆ ನಿಗದಿತ ಅರ್ಜಿ ನಮೂ£,ೆ ಅಂಗವಿಕಲ ಪ್ರಮಾಣ ಪತ್ರ, ವೈದ್ಯಾಧಿಕಾರಿಗಳಿಂದ ದೃಡೀಕರಣ ಪತ್ರ, ಆಧಾರ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಚುನಾವಣೆ ಗುರುತಿನ ಚೀಟಿ, ಬ್ಯಾಂಕ್ ಪುಸ್ತಕ ಝರಾಕ್ಸ್ ಸಲ್ಲಿಸಬೇಕು.
2026-27ನೇ ಸಾಲಿನ ಎಸ್‌ಎಪ್‌ಸಿ ಯೋಜನೆಯಡಿ ಪರಿಶಿಷ್ಟ ಜಾತಿಯ ಎಸ್.ಎಸ್.ಎಲ್.ಸಿ ಉತ್ತಿರ್ಣವಾಗಿರುವ ವಿದ್ಯಾರ್ಥಿಗಳಿಗೆ ಪ್ರತ್ಸಾಹ ಧನಕ್ಕೆ 2025-26 ನೇ ಸಾಲಿನಲ್ಲಿ ಉತ್ತೀರ್ಣವಾದ ವಿದ್ಯಾರ್ಥಿಗಳು ಶಾಲೆಯ ದೃಡೀಕರಣ ಪತ್ರ, (ಪ್ರಸಕ್ತ ಸಾಲಿನ) ಶಾಲೆಯಲ್ಲಿ ಫೀ ತುಂಬಿದ ರಸೀದಿ, ಎಸ್.ಎಸ್.ಎಲ್.ಸಿ ಅಂಕಪಟ್ಟಿ ಝರಾಕ್ಸ್ ಪ್ರತಿ, ಪಡಿತರ ಚೀಟಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಾಸ್ ಪೊಟೊ, ಬ್ಯಾಂಕ್ ಪುಸ್ತಕ ಝರಾಕ್ಸ್ ಪ್ರತಿ, ವಾಸಸ್ಥಳ ಪ್ರಮಾಣ ಪತ್ರದೊಂದಿಗೆ ಏಪ್ರಿಲ್ 22ರ ಸಂಜೆ 5.30ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಕೊನೆಯ ದಿನಾಂಕ ಮೀರಿ ಬಂದಂತಹ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ವಿಳಾಸ: http://www.itstaffulbturvihal.co.in ನಲ್ಲಿ ಈ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಂಡು ವಿವರ ಪಡೆದುಕೊಳ್ಳಬಹುದಾಗಿದೆ ಎಂದು ತುರ್ವಿಹಾಳ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *