ಶ್ರೀಸಿದ್ದಲಿಂಗೇಶ್ವರ ಅನಾಥಾಲಯ, ಶ್ರೀ ಸಿದ್ದಗಂಗಾಮಠ, ತುಮಕೂರು ಜಿಲ್ಲೆ ಇದರ 2026-27ನೇ ಸಾಲಿಗೆ ಅರ್ಜಿಗಳನ್ನು ದಿನಾಂಕ 02-05-2026 ರಿಂದ ದಿನಾಂಕ 15-05-2026ರ ವರೆಗೆ ಕೊಡಲಾಗುವುದು. ಶ್ರೀ ಸಿದ್ಧಲಿಂಗೇಶ್ವರ ಅನಾಥಾಲಯಕ್ಕೆ ಹೊಸದಾಗಿ 3ನೇ ತರಗತಿಯಿಂದ 8ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಬಯಸುವ ಗ್ರಾಮೀಣ ಮತ್ತು ನಗರ ಪ್ರದೇಶದ ಬಡ ಕುಟುಂಬದ ವಿದ್ಯಾರ್ಥಿಗಳು ಖುದ್ದಾಗಿ ಬಂದು ಶ್ರೀ ಮಠದ ಲೆಕ್ಕಪತ್ರ ವಿಭಾಗದಲ್ಲಿ ಅರ್ಜಿಯನ್ನು ಪಡೆಯುವುದು. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಆದ್ಯತೆಯನ್ನು ನೀಡಲಾಗುವುದು. 09ನೇ ತರಗತಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ದಾಖಲಾತಿ ಇರುವುದಿಲ್ಲ

ಸರಿಯಾಗಿ ಭರ್ತಿ ಮಾಡಿದ ಪ್ರವೇಶ ಅರ್ಜಿಯ ಜೊತೆಗೆ ಆಯಾ ತಾಲ್ಲೂಕಿನ ತಹಶೀಲ್ದಾರರಿಂದ ನಿಗದಿತ ನಮೂನೆಯಲ್ಲಿ ಧೃಡೀಕರಿಸಲ್ಪಟ್ಟ ವಾರ್ಷಿಕ ವರಮಾನದ ಆದಾಯ ಪತ್ರ ಮತ್ತು ಜಾತಿ ಧೃಡೀಕರಣ ಪತ್ರವನ್ನು ಸಲ್ಲಿಸುವುದು. ಪ್ರವೇಶವನ್ನು ಅಪೇಕ್ಷಿಸುವ ವಿದ್ಯಾರ್ಥಿಗಳಿಗೆ ಸಂದರ್ಶನದ ದಿನಾಂಕ 29.05.2026 ರಿಂದ ಪ್ರಾರಂಭವಾಗಿ ದಿನಾಂಕ 05-06-2026ರ ವರೆಗೆ ನಡೆಯುವುದು. ಈ ದಿನಾಂಕಗಳಲ್ಲಿ ವಿದ್ಯಾರ್ಥಿ ಮತ್ತು ಪೋಷಕರು ಖುದ್ದಾಗಿ ಬಂದು ಅಧ್ಯಕ್ಷರ ಸಂದರ್ಶನದಲ್ಲಿ ಪಾಲ್ಗೊಂಡು ನೇರವಾಗಿ ದಾಖಲಾತಿಯನ್ನು ಪಡೆಯುವುದು. ಇದಕ್ಕೆ ಪ್ರತ್ಯೇಕವಾದ ಸಂದರ್ಶನದ ಪತ್ರಗಳನ್ನು ಕಳುಹಿಸಿಕೊಡಲಾಗುವುದಿಲ್ಲ. ಪ್ರವೇಶದ ಅರ್ಜಿಗಳನ್ನು ಅನ್ನೈನ್ (Online) ನಲ್ಲಿ ಪಡೆಯಲು ಅವಕಾಶವಿರುವುದಿಲ್ಲ.

Leave a Reply

Your email address will not be published. Required fields are marked *