ಮುದ್ದೇಬಿಹಾಳ: ವಿದ್ಯಾರ್ಥಿ ಜೀವನದಲ್ಲಿ ಎನ್.ಎಸ್.ಎಸ್ (ರಾಷ್ಟ್ರೀಯ ಸೇವಾ ಯೋಜನೆ) ಶಿಬಿರವು ಅಪರೂಪದ ಹಾಗೂ ಮಹತ್ವದ ಕಾರ್ಯಕ್ರಮವಾಗಿದ್ದು, ಸಮಾಜದೊಂದಿಗೆ ಬೆಸೆದುಕೊಳ್ಳಲು ಇದು ಸುವರ್ಣಾವಕಾಶ ಒದಗಿಸುತ್ತದೆ. ವಿದ್ಯಾರ್ಥಿಗಳು ಇಂತಹ ಶಿಬಿರಗಳ ಮೂಲಕ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ದೇವಿಕಾ ಸುಬ್ಬರಾವ್ ಫೌಂಡೇಷನ್ ಅಧ್ಯಕ್ಷೆ ಶ್ರೀಮತಿ ಪಲ್ಲವಿ ನಾಡಗೌಡ ಹೇಳಿದರು.
ತಾಲ್ಲೂಕಿನ ಹಡಲಗೇರಿ ಗ್ರಾಮದ ಮಾದರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಸತಿಯುಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಘಟಕದಿಂದ ದತ್ತು ಗ್ರಾಮ ಮುದ್ನಾಳದಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎನ್.ಎಸ್.ಎಸ್ ಕಾರ್ಯಕ್ರಮವು ವ್ಯಕ್ತಿ ಮತ್ತು ಸಮಾಜವನ್ನು ಒಗ್ಗೂಡಿಸುವ ಸೇತುವೆಯಾಗಿದೆ ಎಂದು ಮುದ್ದೇಬಿಹಾಳ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಸಿ.ಎಸ್. ನಾಲತವಾಡ ಅವರು ಮುಖ್ಯ ಅತಿಥಿ ಭಾಷಣದಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಸ್.ಎಲ್. ಪಾಟೀಲ ವಹಿಸಿದ್ದರು. ಅತಿಥಿಗಳಾಗಿ ಎಸ್.ಎಸ್. ರಾಮತಾಳ, ಶಂಕರಗೌಡ ಪಾಟೀಲ, ಎಸ್.ಎ. ಮೇರೆಖೋರ, ಅಬ್ದುಲ್ ರಜಾಕ್ ನದಾಫ್, ಎಸ್.ವಿ. ಬಸರಕೋಡ್, ಶಿವಪ್ರಕಾಶ್ ಗೂಳಿ, ನಾಗರಾಜ ದೊಡ್ಡಮನಿ, ಕೆ.ಜಿ. ಗೆದ್ದಪ್ಪನವರ, ಪ್ರೊ. ರೇವಣಸಿದ್ದಪ್ಪ ಅಮ್ಮಣ್ಣಿ, ಪ್ರೊ. ವಿನಯ್ ಗಡೆದ, ಪ್ರೊ. ಚೆನ್ನಮ್ಮ ಚೆಲುಮೂರ ಹಾಗೂ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ರವಿ ಕಟ್ಟಿಮನಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *