ಬಳಗಾನೂರು, ಏ,6:-ಮಸ್ಕಿ ತಾಲೂಕು ಬಳಗಾನೂರು ಪಟ್ಟಣದ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಪ್ರಸಿದ್ಧ ಮಾರುತಿ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಹುಂಡಿ ತೆರೆಯುವ ಕಾರ್ಯ ಭಕ್ತರ ಗಮನ ಸೆಳೆಯಿತು.ತಹಸಿಲ್ದಾರ್ ಮಂಜುನಾಥ ಬೋಗಾವತಿ, ಬಳಗಾನೂರು ನಾಡ ಕಾರ್ಯಾಲಯದ ಉಪತಹಸಿಲ್ದಾರ್ ನಾಗಲಿಂಗ ಪತ್ತಾರ್, ಗ್ರಾಮ ಲೆಕ್ಕಿಗ ಅಮರೇಶ ನಾಯ್ಕ ಹಾಗೂ ಸಿಬ್ಬಂಧಿ ವರ್ಗದವರ ಸಮ್ಮುಖದಲ್ಲಿ ಹುಂಡಿಯನ್ನು ಅಧಿಕೃತವಾಗಿ ತೆರೆಯಲಾಯಿತು.ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆಯನ್ನು ಎಣಿಸಿದಾಗ ಒಟ್ಟು ₹2,21,740 ರೂಪಾಯಿಗಳ ಸಂಗ್ರಹವಾಗಿರುವುದಾಗಿ ತಹಸಿಲ್ದಾರ್ ಘೋಷಿಸಿದರು.ಈ ಮೊತ್ತವು ಭಕ್ತರ ಅಪಾರ ಭಕ್ತಿ ಮತ್ತು ನಂಬಿಕೆಗೆ ಸಾಕ್ಷಿಯಾಗಿದೆ. ದಿನದಿಂದ ದಿನಕ್ಕೆ ದೇವಸ್ಥಾನದ ಮೇಲಿನ ಭಕ್ತರ ವಿಶ್ವಾಸ ಹೆಚ್ಚುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ.ಸ್ಥಳೀಯರು ಹಾಗೂ ಭಕ್ತರು ಈ ಸಂದರ್ಭವನ್ನು ಸಾಕ್ಷಿಯಾಗಿ ನೋಡಿದ್ದು, ಮಾರುತಿ ದೇವರ ಆಶೀರ್ವಾದ ಸದಾ ಇರುತ್ತದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದರು.

ವರದಿ,ಸುರೇಶ ಬಳಗಾನೂರು.

Leave a Reply

Your email address will not be published. Required fields are marked *