ತಾಳಿಕೋಟಿ: ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕಾ ಪಂಚಾಯತ,ಸಮಾಜ ಕಲ್ಯಾಣ ಇಲಾಖೆ ಮುದ್ದೇಬಿಹಾಳ ಹಾಗೂ ಪುರಸಭೆ ತಾಳಿಕೋಟಿ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ ರಾಮ್ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಶಿಕ್ಷಕಿ ಸಾಹಿತಿ ಮಡಿವಾಳಮ್ಮ ಎಸ್‌ಜಿ ನಾಡಗೌಡ ಇವರನ್ನು ತಾಲೂಕಾಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಗ್ರೇಡ್- 2 ಪ್ರದೀಪ್ ದೇವಗಿರಿ, ಕ್ಷೇತ್ರ ಸಮನ್ವಯಾಧಿಕಾರಿ ಆರ್ ಬಿ ದಮ್ಮೂರಮಠ,ಇಓ ಅನಸೂಯಾ ಚಲವಾದಿ, ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ,ಡಾ.ಶ್ರೀಶೈಲ ಹುಕ್ಕೇರಿ, ಸಮಾಜ ಕಲ್ಯಾಣ ಇಲಾಖೆಯ ಶಿವಲಿಂಗಪ್ಪ ಹಚಡದ,ಪಿಎಸ್ಐ ಜ್ಯೋತಿ ಖೋತ, ಮಹೇಶ ಜೋಶಿ, ರಾಜು ವಿಜಾಪುರ, ಯಮನಪ್ಪ ಕಟ್ಟಿಮನಿ, ಬಸ್ಸು ಮಾದರ,ಸಂಜೀವಪ್ಪ ಬರದೇನಾಳ, ಆಸೀಫ ಕೆಂಭಾವಿ, ಮಹಮ್ಮದ್ ಶಫೀಕ್ ಇನಾಮದಾರ, ರಾಹುಲ್ ರಜಪೂತ,ಸಮಾಜ ಕಲ್ಯಾಣ ಇಲಾಖೆಯ ಮಹಾಂತೇಶ ತಾಳಿಕೋಟಿ,ಎಸ್.ಎನ್. ಮಲ್ಲಾಡೆ,ಎನ್.ವಿ.ಕೋರಿ,ಎಸ್.ಎಂ. ಕಲಬುರ್ಗಿ ಇದ್ದರು.

Leave a Reply

Your email address will not be published. Required fields are marked *