ಇಂದು ದಲಿತ ವಿದ್ಯಾರ್ಥಿ ಪರಿಷತ್ತು ತಾಲೂಕ ಸಮಿತಿ ಸಿಂಧನೂರ್ ವತಿಯಿಂದ ತಾಲೂಕು ದಂಡಾಧಿಕಾರಿಗಳಾದ ಶ್ರೀ ಅರುಣ ದೇಸಾಯಿ ಇವರಿಗೆ ಮನವಿ ಸಲ್ಲಿಸಿದ ಮುಖಂಡರು, ಸರ್ಕಾರಗಳು ಹಲವಾರು ಯೋಜನೆಗಳ ಮುಖಾಂತರ ಮಾನವ ಅಭಿವೃದ್ಧಿಯನ್ನು ಉನ್ನತೀಕರಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿವೆ.
ಆದರೂ ಸಮಾಜದಲ್ಲಿ ಇನ್ನೂವರೆಗೂ ಮಾನವ ಅಭಿವೃದ್ಧಿಯ ಗರಿಷ್ಟತೆ ಸಾಧಿಸಲು ಸಾಧ್ಯವಾಗಿಲ್ಲ ಜೊತೆಗೆ ಕಾನೂನು ಸಮರ್ಪಕವಾಗಿ, ಕಟ್ಟುನಿಟ್ಟಾಗಿ ಪರಿಪಾಲನೆ ಆಗುತ್ತಿಲ್ಲ.

ಆ ಹಿನ್ನೆಲೆಯಲ್ಲಿ ಇಂದು ಭಿಕ್ಷಾಟನೆ ಎನ್ನುವ ಆತಂಕಕಾರಿ ಬೆಳವಣಿಗೆ ಸಮಾಜದಲ್ಲಿ ಮಿತಿಮೀರಿದೆ.
ಕರ್ನಾಟಕ ಭಿಕ್ಷಾಟನೆ ಅಧಿನಿಯಮ 1975 ರಾಜ್ಯದಲ್ಲಿ ಭಿಕ್ಷಾಟನೆಯನ್ನು ಕಾನೂನುಬಾಯಿರಗೊಳಿಸಿದ್ದು , ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವುದನ್ನು ನಿಷೇಧ ಗೊಳಿಸಿದೆ. ಈ ಕಾಯ್ದೆಯಡಿ ಪೊಲೀಸರು ಭಿಕ್ಷುಕರನ್ನು ಬಂಧಿಸಿ ಪುನರ್ವಸತಿ ಕೇಂದ್ರಗಳಿಗೆ (ನಿರಾಶ್ರಿತರ ಪರಿಹಾರ ಕೇಂದ್ರ) ಕಳುಹಿಸಲು ಅಧಿಕಾರವನ್ನು ಹೊಂದಿದೆ.

ಆದರೆ ಈ ಕಾನೂನು ಸಿಂಧನೂರಿನಲ್ಲಿ ಸಮರ್ಪಕವಾಗಿ ಜಾರಿಯಾಗದಿರುವುದು ತಾಲೂಕ ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತೆ ಕಾಣುತ್ತಿದೆ.
ಯಾಕೆಂದರೆ ಪ್ರತಿನಿತ್ಯ ಸಿಂಧನೂರಿನ ಸಾರ್ವಜನಿಕ ಪ್ರದೇಶಗಳಲ್ಲಿ ನೂರಾರು ಮಕ್ಕಳು, ವೃದ್ಧರು, ಮಹಿಳೆಯರು ನಗರದಲ್ಲಿ ಭಿಕ್ಷಾಟನೆ ಮಾಡುತ್ತಿದ್ದು, ಸಿಂಧನೂರಿನ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಖಾಯಂ ಭಿಕ್ಷುಕರು ಕಾಣಸಿಗುತ್ತಿದ್ದು, ಪ್ರಯಾಣಿಕರು ಮುಜುಗರಕ್ಕೆ ಒಳಪಡುವ ಪರಿಸ್ಥಿತಿಗಳು ನಿರ್ಮಾಣವಾಗಿದೆ.
ಅದರಲ್ಲೂ ಚಿಕ್ಕ ಮಕ್ಕಳು ಪ್ರತಿನಿತ್ಯ ಬೇರೊಂದು ಸ್ಥಳ ಮತ್ತು ಪಟ್ಟಣಗಳಿಂದ ಸಿಂಧನೂರಿಗೆ ಭಿಕ್ಷಾಟನೆಗೆ ಬರುತ್ತಿರುವುದು ನಿರಂತರವಾಗಿ ಕಾಣುತ್ತದೆ.
ಇದರಿಂದಾಗಿ ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಆತಂಕವು ನಮ್ಮಲ್ಲಿ ಕಾಡುತ್ತಿದೆ.

ಆದ್ದರಿಂದಾಗಿ ನಗರದಲ್ಲಿ ಭಿಕ್ಷಾಟನೆ ಮಾಡುವ ಮಹಿಳೆಯರಿಗೆ, ವೃದ್ಧರಿಗೆ ಮತ್ತು ಮಕ್ಕಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ಅಥವಾ ಅನಾಥರು, ನಿರಾಶ್ರಿತರು ಇದ್ದರೆ ಅವರಿಗೆ ಸೂಕ್ತ ರಕ್ಷಣೆಯನ್ನು ನೀಡಿ ಸರ್ಕಾರದಿಂದ ದೊರೆಯುವ ಸೌಕರ್ಯಗಳನ್ನು ಕಲ್ಪಿಸಿ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಉಚಿತ ವಸತಿ ಮತ್ತು ಶಿಕ್ಷಣವನ್ನು ನೀಡಿ ಸಿಂಧನೂರಿನಲ್ಲಿ ಮುಂದೆಂದು ಯಾರೂ ಭಿಕ್ಷಾಟನೆ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ದುರುಗೇಶ ಕಲಮಂಗಿ, ನರಸಪ್ಪ ಬಡಿಗೇರ್, ಶಿವಪುತ್ರ ಅಮರಾಪುರ, ದೇವರಾಜ್,ರಾಜು ಹುಲಗುಂಚಿ ಇದ್ದರು .

Leave a Reply

Your email address will not be published. Required fields are marked *