ಸಿಂಧನೂರು: ಶ್ರೀ ಕನಕದಾಸ ಕಲ್ಯಾಣ ಮಂಟಪದಲ್ಲಿ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಬೆಂಗಳೂರು, ಹಾಗೂ ರಾಯಚೂರು ಶಾಖೆ, ಸಿಂಧನೂರು ತಾಲೂಕು ಘಟಕದವರು ಹಮ್ಮಿಕೊಂಡಿದ್ದ, 399ನೇ ಶ್ರೀ ಛತ್ರಪತಿ ಶಿವಾಜಿ ಮಹಾರಾಜರವರ ಜಯಂತೋತ್ಸವ ಹಾಗೂ ಜಿಲ್ಲಾ ಸಮಾವೇಶವನ್ನು ಸನ್ಮಾನ್ಯ ಶ್ರೀ ಪಿ.ಜಿ.ಆರ್ ಸಿಂಧ್ಯಾ ರಾಜ್ಯ ಮುಖ್ಯ ಆಯುಕ್ತರು ಇವರು ಉದ್ಘಾಟಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಶ್ರೀ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಗೋಸಾಯಿ ಮಠ ಬೆಂಗಳೂರು, ಶ್ರೀ ಶ್ರೀ ಧ್ಯಾನ ಶ್ರೀ ದಾದ ಮಹಾರಾಜ್ ನಗರ್ಕರ್ ಪುಣೆ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಎಂ ಜಿ ಮೂಳೆ, ಶಾಸಕರಾದ ಶ್ರೀ ಆರ್ ಬಸನಗೌಡ ತುರವಿಹಾಳ, ಶ್ರೀ ಹಂಪನಗೌಡ ಬಾದರ್ಲಿ,ಹಾಗೂ ಕ್ಷತ್ರಿಯ ಮರಾಠ ಪರಿಷತ್ತಿನ ಸದಸ್ಯರುಗಳು, ಶ್ರೀ ನಾಗೋಜಿ ರಾವ್ ಕರಾಡೆ ಉಪಾಧ್ಯಕ್ಷರು ರಾಯಚೂರು , ಹಾಗೂ ಸಮಾಜದ ಮುಖಂಡರು ಸಾರ್ವಜನಿಕರು ಭಾಗವಹಿಸಿದ್ದರು,
ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾಗಿದಕ್ಕೆ ಸನ್ಮಾನ್ಯ ಡಾ. ಪಿ. ಜಿ.ಆರ್ ಸಿಂಧ್ಯ ರಾಜ್ಯ ಮಾಜಿ ಸಚಿವರು ಕರ್ನಾಟಕ ಸರ್ಕಾರ ಹಾಗೂ ರಾಜ್ಯ ಮುಖ್ಯ ಆಯುಕ್ತರು ರವರಿಗೆ ಅಭಿನಂದನಾ ಸಮಾರಂಭವನ್ನು ಆಯೋಜನೆ ಮಾಡಲಾಯಿತು, ಸದರಿ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಜಿಲ್ಲಾ ಸಂಸ್ಥೆ ರಾಯಚೂರು ಹಾಗೂ ಸ್ಥಳೀಯ ಸಂಸ್ಥೆ ಸಿಂಧನೂರು ವತಿಯಿಂದ ಮಾನ್ಯರನ್ನು ಗೈಡ್ಸ್ ಮಕ್ಕಳು ಡೊಳ್ಳು ಕುಣಿತ ದೊಂದಿಗೆ ಬಹಳ ವಿಜೃಂಭಣೆಯಿಂದ ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ರಾಯಚೂರು,ಶ್ರೀ ಬೀರಪ್ಪ ಶಂಭೋಜಿ ಕಾರ್ಯದರ್ಶಿಗಳು, ಶ್ರೀ ಶಿವಪ್ಪ ಹಸಮಕಲ್ ಕಾರ್ಯದರ್ಶಿಗಳು ಮಸ್ಕಿ,ಶ್ರೀ ಅಂಬಣ್ಣ ನಾಯಕ ಎಸ್.ಜಿ.ವಿ, ಶ್ರೀ ಮೋಹಿದ್ದುನ್ ಶರೀಫ್ ಸಾಬ್ ALT(S), ಶ್ರೀ ಶ್ರೀನಿವಾಸ ಸುಗಂಧಿ ಜಂಟಿ ಕಾರ್ಯದರ್ಶಿಗಳು ಮಸ್ಕಿ, ಸ್ಕೌಟ್ ಮಾಸ್ಟರ್ ಶ್ರೀ ಗಂಗಾಧರ, ಶ್ರೀ ಆದಪ್ಪ, ಗೈಡ್ ಕ್ಯಾಪ್ಟನ್ ಶ್ರೀಮತಿ ಆರತಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *