ಮಾನ್ವಿ: ತಾಲೂಕಿನ ದೇವಿಪುರ ಗ್ರಾಮದ ಶ್ರೀ ದ್ಯಾವಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಭಾರತೀಯ ಸೇನೆಯ ಗಡಿ ಭದ್ರತಾಪಡೆಯಲ್ಲಿ 22 ವರ್ಷಗಳ ಸುಧೀರ್ಘವಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವ ಗ್ರಾಮಕ್ಕೆ ಆಗಮಿಸಿದ ವೀರ ಯೋಧ ಮಲ್ಲಯ್ಯನಾಯಕ ಪೆದರಡ್ಡಿ ರವರನ್ನು ಗ್ರಾಮಸ್ಥರು ಹಾಗೂ ಶಾಸಕ ಹಂಪಯ್ಯನಾಯಕ, ಸಂಸದ ಜಿ.ಕುಮಾರನಾಯಕ ಅತ್ಮಿಯವಾಗಿ ಬರಮಾಡಿಕೊಂಡು ಸ್ವಾಗತಿಸಿದರು.
ವೇದಿಕೆಯಲ್ಲಿ ನಿವೃತ್ತ ವೀರ ಯೋಧ ಮಲ್ಲಯ್ಯನಾಯಕ ಪೆದರಡ್ಡಿ ರವರನ್ನು ಸನ್ಮಾನಿಸಿ ಗೌರವಿಸಿ ಶಾಸಕ ಹಂಪಯ್ಯನಾಯಕ ಮಾತನಾಡಿ ದೇಶದ ಭದ್ರತೆ ಹಾಗೂ ದೇಶದಲ್ಲಿನ ನಾಗರಿಕರ ಸುರಕ್ಷತೆಗಾಗಿ ಶ್ರಮಿಸುವ ಯೋಧರಿಗೆ ಹಾಗೂ ಅನ್ನವನ್ನು ನೀಡುವ ರೈತರಿಗೆ, ಸಮಾಜವನ್ನು ರೂಪಿಸುವ ಶಿಕ್ಷಕರಿಗೆ ನಾವೇಲ್ಲ ಗೌರವಸಲ್ಲಿಸಬೇಕಾಗಿರುವುದು ನಮ್ಮ ಅದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಸಂಸದ ಜಿ.ಕುಮಾರನಾಯಕ ಮಾತನಾಡಿ ನಿವೃತ್ತ ಯೋಧರಿಗೆ ಸರ್ಕಾರದಿಂದ ದೊರೆಯುವ ನಿವೃತ್ತ ವೇತನ ,ಕೃಷಿ ಭೂಮಿ ಸೇರಿದಂತೆ ವಿವಿಧ ಸೌಲಭ್ಯಗಳ ಬಗ್ಗೆ ಸದನದಲ್ಲಿ ಮಾತನಾಡಿ ನಿವೃತ್ತ ಯೋಧರಿಗೆ ಸಕಾಲದಲ್ಲಿ ಯೋಜನೆಗಳ ಲಾಭ ದೊರೆಯುವಂತೆ ಒತ್ತಾಯಿಸುತ್ತೇನೆ ದೇಶದ ಭದ್ರತೆಗಾಗಿ ತಮ್ಮ ಜೀವನವನ್ನು ಮುಡುಪಿಡುವ ಯೋಧರು ನಿವೃತ್ತರಾಗಿ ತಮ್ಮ ಗ್ರಾಮಗಳಿಗೆ ಬಂದಾಗ ಅವರನ್ನು ತಾಲೂಕು ಆಡಳಿತದಿಂದ ಗೌರವಿಸುವ ಮೂಲಕ ಯುವಕರಲ್ಲಿ ದೇಶಪ್ರೇಮವನ್ನು ಮೂಡಿಸುವ ಕಾರ್ಯವಾಗಬೇಕಾಗಿದೆ ಈ ವಿಷಯದ ಬಗ್ಗೆ ಕೂಡ ಸರಕಾರದ ಗಮನ ಸೇಳೆಯುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಟಕನೂರು ಅಡವಿಸಿದ್ದೇಶ್ವರ ಸಂಸ್ಥಾನಮಠದ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಸಿಂಧನೂರು ವೆಂಕಟಗಿರಿ ಕ್ಯಾಂಪಿನ ಶ್ರೀ ಸದಾನಂದಶರಣರು ಆರ್ಶೀವಾಚನ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಬಿ,ಮಾನಪ್ಪ ನಾಯಕ,ರಾಜಾ ಶ್ಯಾಮಸುಂದರ್ ನಾಯಕ ವಕೀಲರು, ರಾಗಲಪರ್ವಿ ತಿಮ್ಮಯ್ಯನಾಯಕ, ಡಾ.ಬಸವರಾಜಪ್ಪ ಪೋತ್ನಾಳ,ಹನುಮಂತಪ್ಪ ವಕೀಲರು ದೇವಿಪುರ, ಬಿ.ಸಿ.ಎಂ.ಅಧಿಕಾರಿ ಬಾಗಯ್ಯ ನಾಯಕ, ಮಾಜಿ ಗ್ರಾಪಂ ಅಧ್ಯಕ್ಷರಾದ ಬಾಲಯ್ಯ ನಾಯಕ, ಅಂಬಣ್ಣ ನಾಯಕ, ಆಂಜನೇಯ ನಸ್ಲಾಪುರ, ರಾಯಚೂರು ಜಿಲ್ಲಾ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ಕೃಷ್ಣಮೂರ್ತಿ ಕಲ್ಲೂರು, ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘ ಮಾನ್ವಿ ಅಧ್ಯಕ್ಷರಾದ ಬಸವರಾಜ ನಾಯಕ ಮುಷ್ಟೂರು. ನಿವೃತ್ತ ಯೋಧ ಆಂಜನೇಯ ನಾಯಕ ನೀರಮಾನ್ವಿ, ಸೇರಿದಂತೆ ತಾಲೂಕಿನ ನಿವೃತ್ತ ಮಾಜಿ ಯೋಧರು, ಹಾಗೂ ಯೋಧನ ಕುಟುಂಬಸ್ಥರು ಮತ್ತು ಗ್ರಾಮಸ್ಥಾರು,ಭಾಗವಹಿಸಿದರು. ಸುಮಾರು 22 ವರ್ಷಗಳ‌ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಸಂತೋಷ ಜಮ್ಮು-ಕಾಶ್ಮೀರ, ದೆಹಲಿ, ಪಂಜಾಬ್ ಸೇರಿದಂತೆ ಹಲವೆಡೆ ಕರ್ತವ್ಯ ನಿರ್ವಹಿಸಿದ್ದಾರೆ. ಹೀಗಾಗಿ, ಊರಿಗೆ ಮರಳಿ ಬಂದ ವೀರ ಯೋಧನನ್ನು ಗ್ರಾಮಸ್ಥರು ತಾಲೂಕಿನ ನೀರಮಾನ್ವಿ ಗ್ರಾಮದ ಶ್ರೀ ರೇಣುಕ ಯಲ್ಲಮ್ಮ ದೇವಸ್ಥಾನದ ಹತ್ತಿರ ವೀರ ಯೋಧ ಮಲ್ಲಯ್ಯನಾಯಕ ಪೆದರಡ್ಡಿ ರವರನ್ನು ತಾಲೂಕಿಗೆ ಸ್ವಾಗತಿಸಲಾಯಿತು. ನೀರಮಾನ್ವಿ ಗ್ರಾಮದಿಂದ ಮಾನ್ವಿ ಪಟ್ಟಣ ಹಾಗೂ ಹಿರೇಕೋಟ್ನೆಕಲ್, ಪೋತ್ನಾಳ ಗ್ರಾಮದ ಮಾರ್ಗವಾಗಿ ತೆರೆದ ಜೀಪಿನಲ್ಲಿ ನೂರಾರು ದೇಶ ಅಭಿಮಾನಿಗಳು ಬೈಕ್ ಮೆರವಣಿಗೆ ಮೂಲಕ ದೇವಿಪುರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಮಹಿಳೆಯರು ಆರತಿ ಬೆಳಗಿ ತಮ್ಮೂರಿನ ವೀರ ಯೋಧನಿಗೆ ಬರಮಾಡಿಕೊಂಡರು.

Leave a Reply

Your email address will not be published. Required fields are marked *