ಜಾಲಹಳ್ಳಿ ಎ 5 : ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿಯನ್ನು ಜಾಲಹಳ್ಳಿ ಪಟ್ಟಣದ ಎರಡನೇ ವಾರ್ಡಿನ ಡಾ.ಬಾಬು ಜಗಜೀವನ್ ರಾಮ್ ವೃತ್ತದಲ್ಲಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ಮುಖಂಡರಾದ ಭೂತಪ್ಪ ದೇವರಮನೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರು, ಭಾರತದ ಮಾಜಿ ಉಪಪ್ರಧಾನಿಗಳು ಹಾಗೂ ಶೋಷಿತರ ಮತ್ತು ದಮನಿತರ ಹಕ್ಕುಗಳಿಗಾಗಿ ಜೀವನಪೂರ್ತಿ ಹೋರಾಡಿದ ಮಹಾನ್ ನಾಯಕ ಡಾ. ಬಾಬು ಜಗಜೀವನ್ ರಾಮ್ ಅವರ ಸೇವೆಯನ್ನು ಸ್ಮರಿಸಿದರು ಹಾಗೂ ಎಲ್ಲರನ್ನು ಸ್ವಾಗತಿಸಿದರು.

ನಂತರ ಊರಿನ ಗಣ್ಯರು ಹಾಗೂ ಮುಖಂಡರಿಂದ ಡಾ. ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಎಲ್ಲರೂ ಮಾಲಾರ್ಪಣೆ ಮಾಡಿದರು.

ಮುಖ್ಯ ಭಾಷಣ ಮಾಡಿದ ಸಾಬಣ್ಣ ಕಮ್ಮಲದಿನ್ನಿ ಅವರು, ಡಾ. ಬಾಬು ಜಗಜೀವನ್ ರಾಮ್ ಅವರು ಸಮಾಜದ ಹಿಂದುಳಿದ ಮತ್ತು ಪೀಡಿತ ವರ್ಗಗಳ ಹಕ್ಕುಗಳಿಗಾಗಿ ನಡೆಸಿದ ಹೋರಾಟ ಅಪಾರವಾಗಿದೆ ಎಂದು ಹೇಳಿದರು. ಸಮಾನತೆ, ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಸ್ಥಾಪನೆಗೆ ಅವರು ನೀಡಿದ ಕೊಡುಗೆ ಅಪ್ರತಿಮವಾಗಿದ್ದು, ಅವರ ಚಿಂತನೆಗಳು ಇಂದಿಗೂ ನಮ್ಮನ್ನು ಪ್ರೇರೇಪಿಸುತ್ತಿವೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಅವರ ಆದರ್ಶಗಳನ್ನು ಅನುಸರಿಸಿ ಸಮಾನತೆ ಮತ್ತು ನ್ಯಾಯಯುತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವ ಸಂಕಲ್ಪವನ್ನು ತೆಗೆದುಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಹಾಜರಿದ್ದವರು:

ಸಾಬಣ್ಣ ಕಮಲದಿನ್ನಿ, ಭೂತಪ್ಪ ದೇವರಮನೆ, ವೈಶಾಲಿ ಜಳಕಿ (ಪಿಎಸ್‌ಐ, ಜಾಲಹಳ್ಳಿ), ಡಾ. ಆರ್.ಎಸ್. ಹುಲಿಮನಿ (ವೈದ್ಯಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರ), ಜಗದೀಶ್ ಪಂಪಾಪತಿ, ಬಾಬಾ ಮೆಡಿಕಲ್, ಮೌನೇಶ್ (ಪತ್ರಕರ್ತರು), ಗಿರಿಯಪ್ಪ (ಪತ್ರಕರ್ತರು), ಹುಸೇನ್ ಸಾಬ್ ನಾಸಿ, ರಂಗಪ್ಪ ತೊಗರಿ, ರಾಮಪ್ಪ ತವಗ, ರಮೇಶ್ ಬಾಗೂರು, ಭೀಮಣ್ಣ ವಿರಗೂಟ್, ರಂಗಪ್ಪ ಬಂಡಿ, ಯೇಸು ಕಮಲದಿನ್ನಿ, ಮದುರಂಗಪ್ಪ ಮ್ಯಾಗೇರಿ, ಅಯ್ಯಪ್ಪ ತವಗ, ಗೋವಿಂದಪ್ಪ ಮಾಸ್ಟರ್, ನಾಗರಾಜ್ ಪೂಜಾರ್, ರಮೇಶ್ ಮಾಸ್ಟರ್, ಭೀಮಪ್ಪ ಅಂಜಳ, ರಮೇಶ್ ಟೈಲರ್, ರಂಗನಾಥ ಟೇಲರ್, ಬಸವರಾಜ್ ಬಾವಿಮನಿ, ಆದೇಶ್ ತೊಗರಿ, ಕಾಶಿನಾಥ್ ಹೊಸಮನಿ, ಮಲ್ಲಪ್ಪ ಊಟಿ, ರಮೇಶ್ ಊಟಿ, ಶಿವಪುತ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹಾಗೂ ಡಾ. ಬಾಬು ಜಗಜೀವನ್ ರಾಮ್ ಗ್ರಾಮ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಗೌರವಾಧ್ಯಕ್ಷರು, ಸರ್ವ ಸದಸ್ಯರು ಮತ್ತು ಊರಿನ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಇದಲ್ಲದೆ ಆರ್.ಎಸ್.ಎಸ್.ನ ನೂತನ ನಿರ್ದೇಶಕರಾದ ವೆಂಕೋಬ ಪೂಜಾರಿ ಹಾಗೂ ಖುರ್ಷಿದ್ ಪಟೇಲ್ ಕೂಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *