ದ್ವಿತೀಯ ಪಿಯುಸಿ ಫಲಿತಾಂಶ ರಾಜ್ಯದಲ್ಲಿ 31ನೇ ಸ್ಥಾನ ಪಡೆದ ರಾಯಚೂರು ಜಿಲ್ಲೆ , 74.11 % ಫಲಿತಾಂಶ

ರಾಯಚೂರು : 2026ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ರಾಯಚೂರು ಜಿಲ್ಲೆ ರಾಜ್ಯ ಮಟ್ಟದಲ್ಲಿ 31ನೇ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ. ಜಿಲ್ಲೆಯ ಒಟ್ಟು ಫಲಿತಾಂಶ 74.11% ದಾಖಲಾಗಿದ್ದು, ಕಳೆದ ವರ್ಷಕ್ಕಿಂತ ಮಹತ್ವದ ಏರಿಕೆ ಕಂಡುಬಂದಿದೆ. 2025ನೇ ಸಾಲಿನಲ್ಲಿ ಜಿಲ್ಲೆಯ ಫಲಿತಾಂಶ 58.78% ಮಾತ್ರ ಇದ್ದು, ಈ ಬಾರಿ ಸುಮಾರು 16% ಹೆಚ್ಚಳ ಕಂಡು ಜಿಲ್ಲೆಯ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧನೆಯಾಗಿದೆ.

⭐ ವಿಜ್ಞಾನ ವಿಭಾಗದಲ್ಲಿ ಸಾಧನೆ, ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯ ಪ್ರಥಮ ಸ್ಥಾನವನ್ನು ,ಕುಮಾರಿ ರೇಖಾ – 591/600 ಅಂಕಗಳು ಎಸ್.ಕೆ.ಎಂ ಪಿಯು ಕಾಲೇಜು, ದೇವದುರ್ಗ ವಿದ್ಯಾರ್ಥಿನಿ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

⭐ ಕಲಾ ವಿಭಾಗದಲ್ಲಿ ಸಾಧನೆ ಕಲಾ ವಿಭಾಗದಲ್ಲಿ, ದುರ್ಗ ಭವಾನಿ (ತಂದೆ: ಬಸವರಾಜ್) – 593/600 ಅಂಕಗಳು ಆಕ್ಸ್ಫರ್ಡ್ ಪದವಿಪೂರ್ವ ಕಾಲೇಜು, ಸಿಂಧನೂರು ವಿದ್ಯಾರ್ಥಿನಿ ಜಿಲ್ಲೆಯ ಪ್ರಥಮ ಸ್ಥಾನ ಪಡೆದಿದ್ದಾರೆ.

⭐ ವಾಣಿಜ್ಯ ವಿಭಾಗದಲ್ಲಿ ಭರ್ಜರಿ ಸಾಧನೆ ವಾಣಿಜ್ಯ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು 594/600 ಅಂಕಗಳು ಪಡೆದು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಭಕ್ತಿ – ಪಾಟೀಲ್ ಪಿಯು ಕಾಲೇಜು, ಸಿಂಧನೂರು , ನಯನ – ಎ.ವಿ.ಎಸ್ ಬ್ರಿಲಿಯಂಟ್ ಪಿಯು ಕಾಲೇಜು, ಸಿಂಧನೂರು, ವಿಕಾಸ್ (ತಂದೆ: ಹನುಮಂತ) – ವಿದ್ಯಾನಿಧಿ ಪಿಯು ಕಾಲೇಜು, ರಾಯಚೂರುಈ ವಿದ್ಯಾರ್ಥಿಗಳ ಸಾಧನೆ ಜಿಲ್ಲೆಯ ಶಿಕ್ಷಣ ಮಟ್ಟವನ್ನು ಮತ್ತಷ್ಟು ಎತ್ತಿ ಹಿಡಿದಿದೆ.

📈 ಫಲಿತಾಂಶ ಏರಿಕೆಗೆ ಕಾರಣ

ಉಪನ್ಯಾಸಕರ  ಸಮರ್ಪಿತ ಬೋಧನೆ, ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಪೋಷಕರ ಪ್ರೋತ್ಸಾಹ ಹಾಗೂ ಶಿಕ್ಷಣ ಇಲಾಖೆಯ ಮೇಲ್ವಿಚಾರಣೆ ಫಲವಾಗಿ ಈ ಬಾರಿ ಉತ್ತಮ ಫಲಿತಾಂಶ ಸಾಧ್ಯವಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಸಮನ್ವಯ ಕಾರ್ಯ, ವಿಶೇಷ ತರಬೇತಿ ತರಗತಿಗಳು ಹಾಗೂ ಪರೀಕ್ಷಾ ಪೂರ್ವ ಮಾರ್ಗದರ್ಶನ ಕಾರ್ಯಕ್ರಮಗಳು ಸಹ ಫಲಿತಾಂಶ ಸುಧಾರಣೆಗೆ ಕಾರಣವಾಗಿವೆ. ಜಿಲ್ಲೆಯ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸುತ್ತಾ, ಮುಂದಿನ ವರ್ಷಗಳಲ್ಲಿ ರಾಜ್ಯದ ಮೊದಲ ಹತ್ತು ಸ್ಥಾನಗಳೊಳಗೆ ಜಿಲ್ಲೆಯು ಸ್ಥಾನ ಪಡೆಯುವ ವಿಶ್ವಾಸ ವ್ಯಕ್ತವಾಗಿದೆ.
ಉಪ ನಿರ್ದೇಶಕರಾದ ಸೋಮಶೇಖರ್ ವಕ್ರಾಣಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ರಾಯಚೂರು  ಜಿಲ್ಲೆಗೆ ಪ್ರಥಮ ಸ್ಥಾನ , ಕುಮಾರಿ ರೇಖಾ 591/60  , ಎಸ್ ಕೆ ಎಂ ಪಿಯು ಕಾಲೇಜ್ ದೇವದುರ್ಗ

ಕಲಾವಿಭಾಗದಲ್ಲಿ  ರಾಯಚೂರು ಜಿಲ್ಲೆಗೆ ಪ್ರಥಮ ಸ್ಥಾನ ,          ದುರ್ಗ ಭವಾನಿ ತಂದೆ ಬಸವರಾಜ್ 593/690, ಆಕ್ಸ್ಫರ್ಡ್ ಪದವಿಪೂರ್ವ ಕಾಲೇಜು ಸಿಂಧನೂರು.

 

ವಾಣಿಜ್ಯ ವಿಭಾಗದಲ್ಲಿ   ರಾಯಚೂರು ಜಿಲ್ಲೆಗೆ ಪ್ರಥಮ ಸ್ಥಾನ,   ನಯನ 594/600, ಎ ವಿ ಎಸ್ ಬ್ರಿಲಿಯಂಟ್ ಪಿಯು ಕಾಲೇಜ್ ಸಿಂಧನೂರು 

 

ವಾಣಿಜ್ಯ ವಿಭಾಗದಲ್ಲಿ  ರಾಯಚೂರು ಜಿಲ್ಲೆಗೆ ಪ್ರಥಮ ಸ್ಥಾನ,      ಭಕ್ತಿ 594/600, ಪಾಟೀಲ್ ಪಿಯು ಕಾಲೇಜ್, ಸಿಂದನೂರು

ವಾಣಿಜ್ಯ ವಿಭಾಗದಲ್ಲಿ ರಾಯಚೂರು ಜಿಲ್ಲೆಗೆ ಪ್ರಥಮ ಸ್ಥಾನ.   ವಿಕಾಸ್ ತಂದೆ ಹನುಮಂತ 594/600, ವಿದ್ಯಾನಿಧಿ ಪಿಯು ಕಾಲೇಜ್ ರಾಯಚೂರು.

 

ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶ ತೃಪ್ತಿಕರ..

ಇಂದು ದಿನಾಂಕ ಎ 9 ರಂದು ಪ್ರಕಟವಾದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ನಮ್ಮ ಜಿಲ್ಲೆಯ ಫಲಿತಾಂಶ ಶೇ.74.11% ರಷ್ಟು ಬಂದಿದ್ದು, ಹೋದ ವರ್ಷಕ್ಕಿಂತ 16.15% ರಷ್ಟು ಫಲಿತಾಂಶ ಹೆಚ್ಚಳವಾಗಿದೆ (ಹೋದ ವರ್ಷ 58.75%). ಈ ವರ್ಷ ನಮ್ಮ ಜಿಲ್ಲೆ 31ನೇ ಸ್ಥಾನದಲ್ಲಿದ್ದು, 16.15% ರಷ್ಟು ಫಲಿತಾಂಶ ಹೆಚ್ಚಳ ನಮ್ಮೆಲ್ಲರಿಗೂ ತೃಪ್ತಿದಾಯಕ ಫಲಿತಾಂಶ ವಾಗಿದ್ದು, ಇದಕ್ಕಾಗಿ ಅವಿರತವಾಗಿ ಶ್ರಮಿಸಿದ ನಮ್ಮೆಲ್ಲ ಆತ್ಮೀಯ ಪ್ರಾಂಶುಪಾಲರು ಮಿತ್ರರು, ಉಪನ್ಯಾಸಕ ಮಿತ್ರರು ಅತಿಥಿ ಉಪನ್ಯಾಸಕ ಮಿತ್ರರನ್ನೊಳಗೊಡಂತೆ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ, ಮುಂದೆಯೂ ಕೂಡಾ ತಾವೆಲ್ಲರೂ ಅತ್ಯುತ್ತಮವಾಗಿ ಜಿಲ್ಲೆಯ ಫಲಿತಾಂಶ ಹೊರಹೊಮ್ಮಲು ಇಲಾಖೆಗೆ ಬೆನ್ನೆಲುಬಾಗಿ ಶ್ರಮಿಸಿ ವಿದ್ಯಾರ್ಥಿಗಳ ಕಲಿಕಾ ಮಟ್ಟ ಮತ್ತು ಫಲಿತಾಂಶ ಹೆಚ್ಚಿಸುವಲ್ಲಿ ಶ್ರಮಿಸುತ್ತೀರಿ ಎಂದು ಆಶಿಸುತ್ತಾ, ತಮ್ಮೆಲ್ಲರಿಗೂ ಇಲಾಖೆಯ ಪರವಾಗಿ ಹೃತ್ಪೂರ್ವಕವಾದ ಅಭಿನಂದನೆಗಳು.. ವಂದನೆಗಳು…

ಸೋಮಶೇಖರಪ್ಪ ಹೊಕ್ರಾಣಿ                      ಉಪನಿರ್ದೇಶಕರು. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ರಾಯಚೂರು.

Leave a Reply

Your email address will not be published. Required fields are marked *