ತಾಳಿಕೋಟೆ: ಮಹಾದೇವಿಯಕ್ಕನವರು ಅಪ್ರತಿಮ ವಚನಕಾರ್ತಿಯಾಗಿದ್ದು ಅವರ ವಚನಗಳಲ್ಲಿ ಭಕ್ತಿ, ಜ್ಞಾನ, ಸಾಮಾಜಿಕ ಚಿಂತನೆಗಳಿವೆ ಎಂದು ಹಿರಿಯಶರಣೆ ಶಿವಲಿಂಗಮ್ಮ ಬಳಗಾನೂರ ಹೇಳಿದರು ಅವರು ಪಟ್ಟಣದ ಅಕ್ಕಮಹಾದೇವಿ ಅನುಭವ ಮಂಟಪದಲ್ಲಿ ತಾಲ್ಲೂಕು ಕದಳಿ ವೇದಿಕೆ ಮತ್ತು ಅಕ್ಕನ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶಿವಶರಣೆ ವೈರಾಗ್ಯನಿಧಿ ಅಕ್ಕಮಹಾದೇವಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ನಿವೃತ್ತ ಮುಖ್ಯಶಿಕ್ಷಕಿ ಉಮಾ ಸಾಲಂಕಿ ಮಾತನಾಡಿ, ಕನ್ನಡದ ಮೊದಲ ಕವಯತ್ರಿಯಾಗಿದ್ದು ಅವರ ವಚನಗಳು ಜೀವನ ಮಾರ್ಗದರ್ಶನ ಮಾಡುತ್ತವೆ ಎಂದರು. ಕದಳಿ ವೇದಿಕೆ ಅಧ್ಯಕ್ಷೆ ಉಮಾ ಘೀವಾರಿ ಮಾತನಾಡಿ, ಅಕ್ಕನವರು ಭಕ್ತಿ, ಜ್ಞಾನ, ವೈರಾಗ್ಯಗಳ ಮೂರ್ತಿಯಾಗಿದ್ದಾರೆ ಎಂದರು. ಅಕ್ಕಮಹಾದೇವಿವರ ವಚನಗಳನ್ನು ಹೇಳಲಾಯಿತು.
ಕಾರ್ಯಕ್ರಮದಲ್ಲಿ ಕವಿತಾ ಕತ್ತಿ, ಸರ್ವಮಂಗಳಾ ಡೋಣೂರಮಠ, ಶಿವಲೀಲಾ ದೇವಶೆಟ್ಟಿ, ಗೀತಾ ಬಳಗಾನೂರ, ಸುರೇಖಾ ಸಾಲಂಕಿ, ಜಯಶ್ರೀ ಮಠ, ಸವಿತಾ ಕತ್ತಿ ಸೇರಿದಂತೆ ಅಕ್ಕನ ಬಳಗ ಹಾಗೂ ಕದಳಿ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳಿಗ್ಗೆ ಅಕ್ಕನ ಮೂರ್ತಿಗೆ ಪೂಜೆ, ರುದ್ರಾಭಿಷೇಕ , ನಾಮಾವಳಿ, ಆರತಿ ಹಾಗೂ ವಚನ ಗಾಯನ, ಅಕ್ಕನ ತೊಟ್ಟಿಲು ಕಾರ್ಯಕ್ರಮ ಜರುಗಿತು. ಮಧ್ಯಾಹ್ನ ಉಡಿ ತುಂಬವ ಕಾರ್ಯಕ್ರಮ ನಂತರ ಮಹಾಪ್ರಸಾದ ನಡೆಯಿತು.

