ತಾಳಿಕೋಟಿ: ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ೨೦೨೫-೨೬ ನೇ ಸಾಲಿನ ವಿದ್ಯಾರ್ಥಿ ಒಕ್ಕೂಟ ಉದ್ಘಾಟನಾ ಸಮಾರಂಭವು ಗುರುವಾರ ಸ್ಥಳೀಯ ಶ್ರೀ ಎಸ್.ಕೆ.ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿತು. ವಿದ್ಯಾರ್ಥಿ ಒಕ್ಕೂಟವನ್ನು ವ್ಹಿ.ಸಿ.ಹಿರೇಮಠ ಚೇರಮನ್ನರು ವೀ.ವಿ.ಸಂಘ, ಹಾಗೂ ಚೇರಮನ್ನರು, ಎಸ್.ಕೆ.ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ತಾಳಿಕೋಟಿ ಇವರು ದೀಪ ಪ್ರಜ್ವಲಿಸುವುದರ ಮುಖಾಂತರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅವಕಾಶಗಳನ್ನು ಬಳಸಿಕೊಂಡು ಸಮಾಜದಲ್ಲಿ ಉತ್ತಮವಾಗಿ ಗುರುತಿಸಿಕೊಂಡು ಬೆಳೆಯಬೇಕು ಪ್ರಶಿಕ್ಷಣಾರ್ಥಿಗಳು ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ಬೆಳೆದು ನಿಲ್ಲಿ ಎಂದು ತಿಳಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಅಭಿವೃದ್ಧಿಗೆ ಹಾಗೂ ಮಹಾವಿದ್ಯಾಲಯದ ಅಭಿವೃದ್ಧಿಗೆ ಪೂರಕವಾದ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲು, ಗುಂಪಿನ ಮಹತ್ವವನ್ನು ತಿಳಿಯಪಡಿಸುವಲ್ಲಿ ವಿದ್ಯಾರ್ಥಿ ಒಕ್ಕೂಟವು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ತಿಳಿಯಪಡಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿರುವ ಶಿಕ್ಷಕರು ಹಾಗೂ ರಾಷ್ಟ್ರೀಯ ಬಸವ ಭೂಷಣ ಪುರಸ್ಕೃತರಾದ ಎಂ.ಇ.ಕಾಗವಾಡ ಅವರು ವಿದ್ಯಾರ್ಥಿಗಳು ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಜೊತೆಗೆ ಸತ್ಯಯುತವಾದದ್ದನ್ನು, ಸತ್ಯ ಸಂಗತಿಗಳನ್ನು ತಿಳಿಹೇಳುವುದರ ಜೊತೆಗೆ ಶಿಕ್ಷಕ ವೃತ್ತಿಯ ಪಾವಿತ್ರತೆಯನ್ನು ಕಾಪಾಡಿಕೊಳ್ಳಬೇಕು ಶಿಕ್ಷಕರಾದ ನಾವುಗಳು ಕಷ್ಟಪಟ್ಟು ಅಧ್ಯಯನ ಶೀಲರಾಗುವುದರ ಜೊತೆಗೆ ಇಷ್ಟ ಪಟ್ಟು ಕಲಿಕಾ ಕಾರ್ಯದಲ್ಲಿ ಭಾಗಿದಾರರಾಗಬೇಕು ಎಂದರು.
ಪ್ರಶಿಕ್ಷಣಾರ್ಥಿಗಳಿಗೆ ಹಲವಾರು ದೃಷ್ಠಾಂತಗಳೊಂದಿಗೆ ಹಲವಾರು ವಿಚಾರಗಳನ್ನು ತಿಳಿಯಪಡಿಸಿದರು. ವೀ.ವಿ.ಸಂಘ ವೈಸ್ ಚೇರಮನ್ನರು ಹಾಗೂ ಎಸ್.ಕೆ.ಶಿಕ್ಷಣ ಮಹಾವಿದ್ಯಾಲಯದ ಚೇರಮನ್ನರಾದ ಕೆ.ಎಸ್.ಮುರಾಳ ಅವರು ಪ್ರಶಿಕ್ಷಣಾರ್ಥಿಗಳು ಭವ್ಯಭಾರತದ ಶಿಲ್ಪಿಯಾಗಬೇಕು ಸಮಾಜ ಸುಧಾರಣೆಯಲ್ಲಿ ಪ್ರಶಿಕ್ಷಣಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಡಾ.ಆರ್.ಎಂ. ಬಂಟನೂರ ಅವರು ಪ್ರಶಿಕ್ಷಣಾರ್ಥಿಗಳು ಸಂಘದ ಕಾರ್ಯಚಟುವಟಿಕೆಯಲ್ಲಿ ಭಾಗಿದಾರರಾಗುವ ಮುಖಾಂತರ ಮಹಾವಿದ್ಯಾಲಯದ ಕಾರ್ಯಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ತಿಳಿಸಿ ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು ಜೊತೆಗೆ ವಿದ್ಯಾರ್ಥಿ ಒಕ್ಕೂಟದ ಮಹತ್ವವನ್ನು ತಿಳಿಯಪಡಿಸಿದರು. ಕಾರ್ಯಕ್ರಮದಲ್ಲಿ ವಿವಿ ಸಂಘದ ಕಾರ್ಯದರ್ಶಿ ಎಮ್.ಎಸ್.ಸರಶೆಟ್ಟಿ, ಸಹ ಕಾರ್ಯದರ್ಶಿ ಆರ್.ಸಿ.ಪಾಟೀಲ, ವಿ.ವಿ.ಸಂಘದ ನಿರ್ದೆಶಕರು, ಸದಸ್ಯರು, ಅಂಗ ಸಂಸ್ಥೆಗಳ ಚೇರಮನ್ನರು, ಎಸ್.ಕೆ.ಶಿಕ್ಷಣ ಮಹಾವಿದ್ಯಾಲಯದ ಸದಸ್ಯರು, ಮಹಾವಿದ್ಯಾಲಯದ ಸರ್ವ ಸಿಬ್ಬಂದಿವರ್ಗ, ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ಪ್ರೋ.ವಾಯ್.ಎಚ್.ಅಂಗಡಗೇರಿರವರು ಸ್ವಾಗತಿಸಿದರು. ಪ್ರೋ.ಯು.ಎನ್. ಮಂಗೊಂಡರವರು ಪುಷ್ಪಾರ್ಪಣೆ ನೇರವೇರಿಸಿದರು. ನವೀನ ವಂದಿಸಿದರು. ಪ್ರೋ.ಎ.ಎ.ಗಂಗನಗೌಡರ ಮಹಾವಿದ್ಯಾಲಯ 25ಕ್ಕೂ ಹೆಚ್ಚು ಟಿ.ಇ.ಟಿ ಉತ್ತಿರ್ಣರಾದವರಿಗೆ ಸನ್ಮಾನ ನೇರವೇರಿಸಿದರು. ಪ್ರೋ.ಸುರೇಶ ಬಡಿಗೇರ ಪಧಾದಿಕಾರಿಗಳಿಗೆ ಪುಸ್ಪಾರ್ಪಣೆ ನೇರವೆರಿಸಿದರು ಪ್ರೋ.ಎಮ್.ಎ.ಪೋತದಾರ ಕಾರ್ಯಕ್ರಮ ನಿರೂಪಿದರು.

Leave a Reply

Your email address will not be published. Required fields are marked *