ಸಿಂಧನೂರು ನಗರದ ಬಡೀಬೇಸ್ ಕಾಲೋನಿಯ ಶ್ರೀ ಕಾಳಿಕಾದೇವಿ ಹಾಗೂ ದ್ಯಾವಮ್ಮ ದೇವಿ ದೇವಸ್ಥಾನದಲ್ಲಿ ಮಂಗಳವಾರ ಕಾರ್ತೀಕ ಮಾಸದ ಪ್ರಯುಕ್ತ ದಿಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಮಂಗಳವಾರ ಬೆಳಗ್ಗೆ ಶ್ರೀ ಕಾಳಿಕಾದೇವಿ ಹಾಗೂ ದ್ಯಾವಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪಲಂಕಾರ ಮಾಡಲಾಯಿತು. ಬೆಳಗ್ಗೆಯಿಂದ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹಣ್ಣು,ಹೂ,ಕಾಯಿ,ಕರ್ಪೂರದೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ತಮ್ಮ ಇಷ್ಟಾರ್ಥಗಳು ಸಿದ್ದಿಗೊಳ್ಳಲು ದೇವರಿಗೆ ಮೊರೆ ಹೋದರು.ಸಂಜೆ ಮಹಿಳೆಯರು, ಯುವಕರು, ಹಿರಿಯರು ಎಲ್ಲರೂ ಸೇರಿ ದೀಪದ ಹಣತೆಯಲ್ಲಿ ಎಣ್ಣೆ ಬತ್ತಿ ಹಾಕಿ ಹರ್ಷಭರಿತರಾಗಿ ದೀಪ ಹಚ್ಚಿ ಪ್ರಾಥನೆ ಸಲ್ಲಿಸಿದರು.ಇದೇವೇಳೆ ದೇವಸ್ಥಾನ ದೀಪಗಳ ಅಲಂಕಾರದಿಂದ ಕಂಗೊಲುಸುತ್ತಿತ್ತು.ನೋಡುಗರ ಕಣ್ಮನ ಸೆಳೆಯಿತು.
ಈ ಸಂಧರ್ಭದಲ್ಲಿ ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ ಮೌನೇಶ ತಿಡಿಗೋಳ,ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಕೊಟ್ನಕಲ್,ಕಾರ್ಯದರ್ಶಿ ಬಸವರಾಜ ಕಮತಗಿ,ತಾಲೂಕ ಕರ್ಪೆಂಟರ್ ಸಂಘದ ತಾಲೂಕ ಅಧ್ಯಕ್ಷ ರವೀಂದ್ರ ಗದ್ರಟಗಿ, ವನಸಿರಿ ಪೌಂಡೇಷನ್ ಮಸ್ಕಿ ತಾಲೂಕ ಅಧ್ಯಕ್ಷ ರಾಜು ಪತ್ತಾರ ಬಳಗಾನೂರ, ವಿಶ್ವಕರ್ಮ ಸಮಾಜದ ಸದಸ್ಯರಾದ ಪಂಪಣ್ಣ ಕಲಮಂಗಿ,ಷಣ್ಮುಖಪ್ಪ ಮುಳ್ಳೂರು,ಅರ್ಚಕರಾದ ನರಸಪ್ಪ ಪೂಜಾರಿ,ಮರಿಸ್ವಾಮಿ ಬಡಿಗೇರ,ಅಶೋಕ ಬಡಿಗೇರ, ಮನೋಹರ ಪೊಲೀಸ್,ಮುನೇಶ, ಭಾಗ್ಯಪ್ಪ ಪತ್ತಾರ,ಮಂಜುನಾಥ ಉಪ್ಪಲದೊಡ್ಡಿ,ಪ್ರಶಾಂತ ಕವಿತಾಳ, ಶಶಿಕಾಂತ ಮುದಗಲ್,ರವಿರಾಜ, ವಿನಯಕ ಕುರಕುಂದ ಹಾಗೂ ವಿಶ್ವಕರ್ಮ ಸಮಾಜದ ಮುಖಂಡರುಗಳು ಮಹಿಳೆಯರು,ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಕಲ ಸದ್ಭಕ್ತರು ಭಾಗವಹಿಸಿದ್ದರು.

