ಬಳಗಾನೂರು : ಹನುಮ ಜಯಂತಿಯ ಪ್ರಯುಕ್ತ ಮಸ್ಕಿ ತಾಲೂಕಿನ ಬಳಗಾನೂರು ಪಟ್ಟಣದ ಮಾರುತಿ ದೇವಸ್ಥಾನದಲ್ಲಿ ಭಕ್ತಿಭಾವದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ಈ ಪವಿತ್ರ ಸಂದರ್ಭದಲ್ಲಿ ಕಣ್ವ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ 1008 ವಿದ್ಯಾ ಕಣ್ವ ವಿರಾಜತೀರ್ಥ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸಂಸ್ಥಾನ ಪೂಜೆ ನೆರವೇರಿಸಲಾಯಿತು. ನಂತರ ಮುಖ್ಯಪ್ರಾಣ ದೇವರಾದ ಶ್ರೀ ಹನುಮಂತನಿಗೆ ಮಹಾಅಭಿಷೇಕ ನೆರವೇರಿಸಿ ಭಕ್ತರು ಭಕ್ತಿ ಸಮರ್ಪಿಸಿದರು.ರಥೋತ್ಸವವು ಭಕ್ತರ ಘೋಷಣೆಗಳ ನಡುವೆ ವೈಭವದಿಂದ ನಡೆಯಿತು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮವು ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಯಿತು.ಶ್ರೀ ಹನುಮಂತನು ಭಕ್ತಿ, ಶಕ್ತಿ, ಧೈರ್ಯ ಮತ್ತು ನಿಷ್ಠೆಯ ಪ್ರತೀಕ. ಶ್ರೀರಾಮನಿಗೆ ಅಚಲ ಭಕ್ತನಾಗಿರುವ ಹನುಮನು ತನ್ನ ಸೇವಾಭಾವದಿಂದ ಮಾನವಕುಲಕ್ಕೆ ಆದರ್ಶವಾಗಿದ್ದಾನೆ. ಅವನ ಜೀವನವು ನಮ್ಮೆಲ್ಲರಿಗೂ ಧೈರ್ಯ, ಸತ್ಯನಿಷ್ಠೆ ಮತ್ತು ಸೇವಾ ಮನೋಭಾವವನ್ನು ಬೋಧಿಸುತ್ತದೆ. ಹನುಮ ಜಯಂತಿ ನಮಗೆ ಭಕ್ತಿ ಮತ್ತು ಸೇವೆಯ ಮಹತ್ವವನ್ನು ನೆನಪಿಸುವ ಮಹತ್ವದ ಹಬ್ಬವಾಗಿದೆ.ಈ ಸಂದರ್ಭದಲ್ಲಿ ಹನುಮೇಶ ಕುಲಕರ್ಣಿ, ರಂಗನಾಥ ಪೂಜಾರಿ, ವೆಂಕಟೇಶ್ ಪೂಜಾರಿ, ವಾಜೇಂದ್ರ ರಾವ ಪಟವಾರಿ, ಮಲ್ಹರಾವ ಕ್ಯಾತ್ನಾಟ್ಟಿ, ಹನುಮೇಶ್ ಜೋಶಿ, ರಾಘವೇಂದ್ರ ರಾವ್ ಕುಲಕರ್ಣಿ, ರಮೇಶ ಕುಲಕರ್ಣಿ, ಶ್ರೀನಿವಾಸ ಮುಜಂದರ್, ಮಧುಸೂದನ್ ಪಟವಾರಿ, ಸಂಜೀವ್, ಪವನ, ಪ್ರಜ್ವಲ್ ಹಾಗೂ ಸಮಸ್ತ ವಿಪ್ರ ಬಾಂದವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *