ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ನಡೆದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮವನ್ನು ಶಿವಶರಣೆ ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸುವ ಮೂಲಕ ಆಚರಿಸಿ ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ ಮಾತನಾಡಿ ಶಿವಶರಣೆ ಅಕ್ಕಮಹಾದೇವಿ 12 ನೇ ಶತಮಾನದಲ್ಲಿ ಮಹಾಶಿವಶರಣೆಯಾಗಿದ್ದರು ಹಾಗೂ ಇವರು ಕನ್ನಡದಲ್ಲಿ ಚೆನ್ನಮಲ್ಲಿಕಾರ್ಜುನ ಎನ್ನುವ ಅಂಕಿತದಲ್ಲಿ ಅನೇಕ ವಚನಗಳನ್ನು ಬರೆಯುವ ಮೂಲಕ ಕನ್ನಡದ ಪ್ರಥಮ ವಚನಗಾರ್ತಿಯಾಗಿದ್ದಾರೆ. ಇವರ ವಚನಗಳು ಕನ್ನಡ ಸಾಹಿತ್ಯದ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅಕ್ಕಮಹಾದೇವಿಯವರು ನಮಗೆ ಸತ್ಯ,ಶುದ್ದತೆ ಮತ್ತು ಭಕ್ತಿಯ ಮಾರ್ಗವನ್ನು ತೋರಿದ್ದಾರೆ ಎಂದು ತಿಳಿಸಿದರು.
ಉಪನ್ಯಾಸಕರಾದ ಚನ್ನಬಸವ ಮಾಡಗಿರಿಯವರು ಶಿವಶರಣೆ ಅಕ್ಕಮಹಾದೇವಿಯವರ ಜೀವನ,ವಚನಗಳು, ಹಾಗೂ ಅವರು ಭೋದಿಸಿದ ತತ್ವಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ತಾಲೂಕು ಆಡಳಿತ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಗಂಗಾಧರನಾಯಕ, ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್, ವಿನಾಯಕರಾವ್,ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಹರಿಹರಪಾಟೀಲ್,ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾ.ಅಧ್ಯಕ್ಷರಾದ ಅರುಣಚಂದಾ, ಗುಮ್ಮ ಬಸವರಾಜ, ಹೆಚ್,ಮೌನೇಶಗೌಡ,ಶಿವಲಿಂಗಯ್ಯ, ಗುರುಸಿದ್ದಪ್ಪ ಕಣೂರು, ವೀರನಗೌಡ ವಕೀಲರು, ಬಸವಕೇಂದ್ರದ ಅಧ್ಯಕ್ಷರಾದ ಶರಣಬಸವ ಬೆಟ್ಟದೂರು, ಹೋಯ್ಸಳಸ್ವಾಮಿ,ಶಂಕರಪ್ಪ.ಸAಗಮೇಶ ಮುದೋಳ್ ಸೇರಿದಂತೆ ಇನ್ನಿತರರು ಇದ್ದರು.
ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಶಿವಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.

Leave a Reply

Your email address will not be published. Required fields are marked *