ಮಾನ್ವಿ : ಪಟ್ಟಣದ ದಿಗಂಬರವಾದೂತ ಶ್ರೀ ಅನ್ನಮಯ್ಯ ತಾತನ ದೇವಸ್ಥಾನದಲ್ಲಿ ಕಗ್ಗೇಲಿ ಬಂದುಗಳ ಮದುವೆ ಸಮಾರಂಭ ಕಾರ್ಯಕ್ರಮದಲ್ಲಿ ವಿನೂತನವಾಗಿ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಬೆಳಗಿನ ಪೇಟೆಯ ನವ ವದು ವರರು ವಿಶೇಷವಾಗಿ ಮದುವೆ ಸಮಾರಂಭದಲ್ಲಿ ದೇಶಿ ಕ್ರೀಡೆಯನ್ನು ಏರ್ಪಡಿಸಿ ಅಚ್ಚರಿ ಮೂಡಿಸಿದರು. ಪ್ರಥಮ ಬಹುಮಾನ 5000 ರೂ. ಹಾಗೂ ದ್ವಿತೀಯ ಬಹುಮಾನ 3000 ರೂ. ಆಯೋಜಿಸಲಾಗಿತ್ತು. ಇದರಲ್ಲಿ ಪ್ರಥಮ ಬಹುಮಾನವನ್ನು ಗೋವಿಂದ ಬಿಜನಿಗೇರಿ ಪಡೆದುಕೊಂಡರೆ ದ್ವಿತೀಯ ಬಹುಮಾನವನ್ನು ಶಿವರಾಜ್ ಮಲ್ಲಾಪುರು ಮತ್ತು ಶರೀಪ್ ಕುರ್ಡಿಯವರು ಪಡೆದುಕೊಂಡರು.ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ರಾಯಚೂರು ಜಿಲ್ಲೆಯ ಸುತ್ತಮುತ್ತಲಿನ ಗ್ರಾಮದ ಯುವಕರು ಭಾಗವಹಿಸಿ ದೇಶಿ ಕ್ರೀಡೆಯನ್ನು ಯಶಶ್ವಿಗೊಳಿಸಿದರು. ಈ ಸಂದರ್ಭದಲ್ಲಿ ರಾಮಣ್ಣ ನಾಯಕ ಜಿಲ್ಲಾಧ್ಯಕ್ಷರು ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ರಾಯಚೂರು, ನಾಯ್ಡು ನಾಯಕ, ದೇವರಾಜ ನಾಯಕ ತಾಲೂಕಾಧ್ಯಕ್ಷರು ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮಾನ್ವಿ, ಕೊಂಡಯ್ಯ ನಾಯಕ ತಾ. ಪ್ರಧಾನ ಕಾರ್ಯದರ್ಶಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮಾನ್ವಿ, ರಂಗಪ್ಪ ನಾಯಕ ಉಪಾಧ್ಯಕ್ಷರು, ಹಂಪಯ್ಯ ನಾಯಕ, ತಾಯಣ್ಣ, ರಮೇಶ, ವಿಶ್ವನಾಥ್, ದೇವರಾಜ, ರಾಮಣ್ಣ ಚಿರತಪಲ್ಲಿ ಹಾಗೂ ಯುವಕರು ಉಪಸ್ಥಿತರಿದ್ದರು.

