ಮಾನ್ವಿ : ಬೆಂಗಳೂರು ಗ್ರಾಮಾಂತರ, ರಬ್ಬಣಕಲ್, ಕಾತರಿಗೆ ಹಾಗೂ ಆದಾಪುರ ಪೇಟೆ ಶಾಲೆಗಳಲ್ಲಿ 31 ವರ್ಷ 7 ತಿಂಗಳುಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಈರಣ್ಣ ನಾಯಕ ಅವರು ವಯೋ ನಿವೃತ್ತಿ ಹೊಂದಿದ್ದಾರೆ ಎಂದು ಮುಖ್ಯಗುರು ಹೆಚ್.ಡಿ ಪ್ರಕಾಶಬಾಬು ತಿಳಿಸಿದರು. ಈರಣ್ಣ ಅವರು ತಮ್ಮ ಸೇವಾ ಅವಧಿಯಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಶಿಕ್ಷಣದ ಮೌಲ್ಯಗಳನ್ನು ಬೆಳೆಸಲು ಶ್ರಮಿಸಿದ್ದಾರೆ ಎಂದು ಹೇಳಿದರು.
ಈರಣ್ಣ ಅವರ ಸಂಘಟನೆ ಮತ್ತು ಕಾರ್ಯಪಟುತೆಯ ಬಗ್ಗೆ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಸಂಗಮೇಶ್ ಮುಧೋಳ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಅವರ ಕೊಡುಗೆ ಅನನ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಿಆರ್ಪಿ ಶ್ರೀಧರ್ ರಾವ್ ದೇಸಾಯಿ ಅವರು ಈರಣ್ಣ ಶಿಕ್ಷಕರ ವೃತ್ತಿ ಜೀವನದ ಸಾಧನೆಗಳನ್ನು ಸ್ಮರಿಸಿ, ಅವರ ಸೇವೆ ಹೊಸ ತಲೆಮಾರಿಗೆ ಪ್ರೇರಣೆಯಾಗಿದೆ ಎಂದರು.
ಈರಣ್ಣ ನಾಯಕ ಅವರು ಮಾತನಾಡುತ್ತಾ ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡು, ಮಕ್ಕಳಲ್ಲಿ ಶಿಕ್ಷಣದ ಮಹತ್ವವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಲಲಿತಾ ಈರಣ್ಣ ನಾಯಕ, ಪುರಸಭೆ ಸದಸ್ಯ ಭಾಷಾ ಸಾಬ್, ಎಸ್‌ಡಿಎಂಸಿ ಅಧ್ಯಕ್ಷ ಸಜ್ಜಲಿ ನಾಯಕ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ವಿಜಯಕುಮಾರ್ ಸಿ.ಡಿ, ಪ್ರಭಾರಿ ಮುಖ್ಯಗುರು ಬಸಪ್ಪ, ಲಕ್ಷ್ಮೀದೇವಿ, ಕೆ. ನಾಗರಾಜ, ಲಕ್ಷ್ಮಿ ಕೆ, ಉಮಾದೇವಿ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *