ಮಾನ್ವಿ:ಪಟ್ಟಣದ ನೆರಳು ಹಿರಿಯರ ಮನೆಯಲ್ಲಿ ಸಿದ್ದಗಂಗಾ ಮಠದ ಲಿಂ. ಶ್ರೀ.ಶಿವಕುಮಾರ ಸ್ವಾಮಿಗಳ 119ನೇ ಹುಟ್ಟು ಹಬ್ಬವನ್ನು ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಆಚರಣೆ ಮಾಡಿದರು.
ಸಿದ್ದಗಂಗಾ ಮಠದ ಲಿಂ. ಶ್ರೀ.ಶಿವಕುಮಾರ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಠದ ಹಳೆಯ ವಿದ್ಯಾರ್ಥಿ ವೆಂಕಯ್ಯ ಶೆಟ್ಟಿ ಮಾತನಾಡಿ ನಾಡಿನ ಸಿದ್ದಗಂಗಾ ಮಠವು ತ್ರಿವೀದ ದಾಸೋಹ ಗಳಾದ ಅನ್ನ,ಅಕ್ಷರ,ಅಭಯವನ್ನು ನೀಡುವ ಪುಣ್ಯ ಕ್ಷೇತ್ರವಾಗಿದು ಇಂದು ಶ್ರೀಮಠದಲ್ಲಿ ಸಾವಿರಾರು ಮಕ್ಕಳಿಗೆ ಆಶ್ರಯವನ್ನು ನೀಡಿ ಉತ್ತಮ ಶಿಕ್ಷಣವನ್ನು,ಸಂಸ್ಕರವನ್ನು ನೀಡುವ ಮೂಲಕ ನಾಡಿನ ಉತ್ತಮ ಪ್ರೇಜೆಗಳನ್ನಾಗಿ ರೂಪಿಸುತ್ತಿದೆ ಶ್ರೀಮಠದಲ್ಲಿ ಲಿಂ. ಶ್ರೀ.ಶಿವಕುಮಾರ ಸ್ವಾಮಿಗಳ ಆಶ್ರಯದಲ್ಲಿ ಬೆಳೆದ ಲಕ್ಷಾಂತರ ವಿದ್ಯಾರ್ಥಿಗಳು ಇಂದು ಉತ್ತಮ ಜೀವನವನ್ನು ರೂಪಿಸಿಕೊಂಡಿದ್ದಾರೆ ಅವರು ಹಾಕಿಕೋಟ್ಟ ಮಾರ್ಗದಲ್ಲಿ ನಡೆಯೋಣ ನಮ್ಮನ್ನು ನಾವು ಸಮಾಜ ಸೇವೆಯಲ್ಲಿ ತೋಡಗಿಸಿಕೊಳ್ಳೋಣ ಎಂದು ತಿಳಿಸಿದರು.
ಬಾಲಪ್ಪ ನಾಯಕ ಮಾತನಾಡಿ ಲಿಂ.ಶ್ರೀ ಶಿವಕುಮಾರ ಸ್ವಾಮೀಜಿಗಳು ನಮ್ಮಲ್ಲರ ನೆಡೆದಾಡುವ ದೇವರಾಗಿದ್ದರು. ಹಾಗೂ ನಾಡಿನ ಮಕ್ಕಳಿಗೆ ಆಶ್ರಯದಾತರಾಗಿದ್ದರು ಅವರ ಹುಟ್ಟು ಹಬ್ಬವನ್ನು ಸಮಾಜಿಕ ಕಾರ್ಯಕ್ರಮಗಳ ಮೂಲಕ ಅರ್ಥಿಪೂರ್ಣವಾಗಿ ಆಚರಿಸೋಣ ಎಂದು ತಿಳಿಸಿದರು.
ಸಿದ್ದಗಂಗಾ ಮಠದ ಲಿಂ. ಶ್ರೀ.ಶಿವಕುಮಾರ ಸ್ವಾಮಿಗಳ ಜನ್ಮದಿನದ ಅಂಗವಾಗಿ ಹಿರಿಯರ ಮನೆಯ ಸದಸ್ಯರಿಗೆ ಅನ್ನದಾಸೋಹವನ್ನು ಮಾಡಲಾಯಿತು.
ನೆರಳು ಹಿರಿಯರ ಮನೆಯ ವ್ಯವಸ್ಥಾಪಕರಾದ ಚನ್ನಬಸವ ಸ್ವಾಮಿ ಯದ್ದಲದೊಡ್ಡಿ,ಅಮರೇಶ ಯಡಿವಾಳ, ಹನುಮಂತ ಡೋಣಮರಡಿ, . ಬಸವರಾಜ ವಕೀಲರು, .ಚನ್ನಬಸವ ಕೊಡ್ಲಿ,ಮಂಜುನಾಥ.ಸಿ.ಬಿ. ರಾಮು ಕಾತರಕಿ, ವೆಂಕಟೇಶ ಬಲ್ಲಟಗಿ,ಹನುಮೇಗೌಡ ಸೇರಿದಂತೆ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು, ನೆರಳು ಹಿರಿಯರ ಮನೆಯ ನಿವಾಸಿಗಳು ಇದ್ದರು.

