ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನಿಂದ ಜಿಲ್ಲಾ ಸಮಾವೇಶ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತೋತ್ಸವದ ಕಾರ್ಯಕ್ರಮವನ್ನು ಸಿಂಧನೂರು ತಾಲೂಕು ಘಟಕದಿಂದ ನಗರದ‌ ಕನಕದಾಸ ಕಲ್ಯಾಣ ಮಂಟಪದಲ್ಲಿ ಏ.5 ರಂದು ಶುಕ್ರವಾರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅಧ್ಯಕ್ಷರಾದ ನಾಗೋಜಿರಾವ್ ಕರಾಡೆ ತಿಳಿಸಿದರು.

ಬುಧುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಮಾಜದ ಜಗದ್ಗುರುಗಳಾದ ಶ್ರೀ ಗೋಸಾಯಿಮಠ ಗವಿಪುರಂನ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ, ಪುಣೆಯ ಶ್ರೀ ಧ್ಯಾನಶ್ರೀ ದಾದ ಮಹಾರಾಜ ನಗರಕರ್ ವಹಿಸಲಿದ್ದು, ಮಾಜಿ ಸಚಿವರು, ರಾಜ್ಯ ಮುಖ್ಯ ಆಯುಕ್ತ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಡಾ.ಪಿ.ಜಿ.ಆ‌ರ್ ಸಿಂಧ್ಯಾ ಹಾಗೂ ಸಣ್ಣ ಕೈಗಾರಿಕೆ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಲಿದ್ದಾರೆ. ಕಾರ್ಮಿಕ ಸಚಿವ ಎಸ್.ಸಂತೋಷಲಾಡ್, ಆರ್.ವಿ. ದೇಶಪಾಂಡೆ, ಎಸ್.ಆರ್.ಸಿಂಧ್ಯಾ, ಶ್ರೀನಿವಾಸ ಮಾನೆ, ವಿಜಯಸಿಂಗ್, ಡಾ.ಎಮ್.ಜಿ.ಮೂಳೆ, ಸೇರಿದಂತೆ  ಸ್ಥಳಿಯ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಇರಲಿದ್ದಾರೆ. ನಂತರ ಅಂಧ, ಅಂಗವಿಕಲ, ವೃದ್ಧಾಪ್ಯದ ಜನರಿಗೆ, ವಿಧವಾ, ಹಾಗೂ ಸಮಾಜದ 200 ಜನರಿಗೆ ಸ್ಕಾಲರ್ ಶಿಪ್ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಈ ವೇಳೆ: ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ನಾನ್ನೂರೆ, ಸುಭಾಷ್ ಗೋಮರ್ಸಿ, ಸುರೇಶರಾವ್ ಬಾಗಲವಾಡ, ರಾಘವೇಂದ್ರ ಪವಾ‌ರ್, ರಘು ನಾನ್ನೂರೆ, ಹನುಮೇಶ ಜಾದವ್, ಮಂಜುನಾಥ ಜಾಲಿಹಾಳ, ಖಂಡೋಜಿರಾವ್ ಸಿಂಧೆ, ಸೇರಿದಂತೆ ಸಮಾಜದ ಅನೇಕ ಮುಖಂಡರಿದ್ದರು.

Leave a Reply

Your email address will not be published. Required fields are marked *